ಜಾಹಿರಾತು ನೀಡದೆ 70 ಕೋಟಿ ಬಳಕೆದಾರರನ್ನು ಗಳಿಸಿದ ಟೆಲಿಗ್ರಾಮ್ ಸಂಸ್ಥೆ ಈಗ ಪ್ರೀಮಿಯಂ ಕಡೆಗೆ

Telegram Image

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ಟೆಲಿಗ್ರಾಮ್, ತನ್ನ ಬಳಕೆದಾರರಿಗೆ ಪ್ರೀಮಿಯಂ ಸೇವೆಯನ್ನು ಜಾಗತಿಕವಾಗಿ ನೀಡಲು ಪ್ರಾರಂಭಿಸಿದೆ. ಇದೀಗ ಭಾರತದಲ್ಲೂ ಟೆಲಿಗ್ರಾಮ್ ಪ್ರೀಮಿಯಂ ಯೋಜನೆಗಳು ಶುರುವಾಗಿದ್ದು, ಪ್ರತಿ ಚಂದಾದಾರರಿಗೆ ವರ್ಷಕ್ಕೆ 460 ರೂಪಾಯಿ ನಿಗದಿಪಡಿಸಲಾಗಿದೆ. 

ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಹೊಸದಾಗಿ ಟೆಲಿಗ್ರಾಮ್ ಅಪ್ಲಿಕೇಶನ್‌ಅನ್ನು ನವೀಕರಿಸುವ ಮೂಲಕ ಅಥವಾ ಡೌನ್‌ಲೋಡ್‌ ಮಾಡುವ ಮೂಲಕ ಟೆಲಿಗ್ರಾಮ್ ಪ್ರೀಮಿಯಂ ಸೇವೆಯನ್ನು ಪಡೆಯಬಹುದು. 

ಟೆಲಿಗ್ರಾಮ್ ಪ್ರೀಮಿಯಂಗೆ ನವೀಕರಿಸುವುದರಿಂದ ಲಾಭವೇನು?

ಟೆಲಿಗ್ರಾಮ್ ಪ್ರೀಮಿಯಂಗೆ ಚಂದಾದಾರರಾಗುವುದರಿಂದ ಬಳಕೆದಾರರು ಅತೀ ಹೆಚ್ಚು ನೂತನ ವೈಶಿಷ್ಟ್ಯಗಳನ್ನು ಪಡೆಯಬಹುದು. ಉದಾಹರಣೆಗೆ ವೇಗವಾದ ಡೌನ್‌ಲೋಡ್‌, 4 ಜಿಬಿ ಫೈಲ್ ಅಪ್ಲೋಡ್ ಮತ್ತು ವಿಶೇಷ ಸ್ಟಿಕರ್‌ಗಳೊಂದಿಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಅನುಭವಿಸಬಹುದು. 

ಟಿಲಿಗ್ರಾಮ್ ಪ್ರೀಮಿಯಂ ಕುರಿತು ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿ

4 ಜಿಬಿವರೆಗೆ ಫೈಲ್‌ಗಳನ್ನು ಹಂಚಿಕೊಳ್ಳಬಹುದು

ಬಳಕೆದಾರರು ಉಚಿತವಾಗಿ ಟೆಲಿಗ್ರಾಮ್ ಬಳಸುವುದಾದರೆ ಫೈಲ್‌ಗಳನ್ನು ಕನಿಷ್ಠ 2 ಜಿಬಿ ಮಿತಿವರೆಗೆ ಬಳಸಬಹುದು. ಆದರೆ ನೀವು ಪ್ರೀಮಿಯಂ ಪಡೆದಿದ್ದಲ್ಲಿ ಬಳಕೆದಾರರು ಗರಿಷ್ಠ 4 ಜಿಬಿ ಫೈಲ್‌ಗಳನ್ನು ಕಳುಹಿಸುವ ಜೊತೆಗೆ ನಾಲ್ಕು ಗಂಟೆಗಳ ಕಾಲ ಅಪ್ಲೋಡ್ ಮಾಡಿದ ವೀಡಿಯೋವನ್ನು 18 ದಿನಗಳ ಕಾಲ ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸುವ ಅವಕಾಶ ನೀಡಲಿದೆ. 

ಫೈಲ್ ಡೌನ್‌ಲೋಡ್‌ ವೇಗ ಹೆಚ್ಚು

ಫೈಲ್‌ಗಳನ್ನು ಸಾಧ್ಯವಾದಷ್ಟು ವೇಗದಲ್ಲಿ ಡೌನ್‌ಲೋಡ್‌ ಮಾಡಲು ಸಾಧ್ಯವಾಗುತ್ತದೆ ಮತ್ತು ಅನಿಯಮಿತ ಕ್ಲೌಡ್ ಸಂಗ್ರಹಣೆಯಲ್ಲಿ ನಿಮ್ಮ ನೆಟ್‌ವರ್ಕ್‌ ವೇಗದ ಮೇಲೆ ಬಳಕೆದಾರರು ಫೈಲ್‌ಗಳನ್ನು ಪ್ರವೇಶಿಸಬಹುದು.

ಅನಿಯಮಿತ ಡೌನ್‌ಲೋಡ್‌

ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಬಹುತೇಕ ಎಲ್ಲದಕ್ಕೂ ಹೆಚ್ಚಿನ ಮಿತಿಗಳನ್ನು ಪಡೆಯುತ್ತೀರಿ. ಆದರೆ ಪ್ರೀಮಿಯಂನೊಂದಿಗೆ, ನೀವು ಸಾವಿರಕ್ಕೂ ಅಧಿಕ ಚಾನಲ್‌ಗಳನ್ನು ಅನುಸರಿಸಬಹುದು ಮತ್ತು 200ಕ್ಕೂ ಹೆಚ್ಚು ಚಾಟ್‌ಗಳೊಂದಿಗೆ 20 ಚಾಟ್ ಫೋಲ್ಡರ್‌ಗಳನ್ನು ರಚಿಸಬಹುದು. ಯಾವುದೇ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ನಾಲ್ಕನೇ ಖಾತೆ ಸೇರಿಸಿ ಸಂಪರ್ಕಿಸಬಹುದು ಹಾಗೂ ಮುಖ್ಯಪಟ್ಟಿಯಲ್ಲಿ 10 ಚಾಟ್‌ಗಳನ್ನು ಪಿನ್ ಮಾಡವುದರ ಜೊತೆಗೆ ನಿಮ್ಮ ನೆಚ್ಚಿನ ಸ್ಟಿಕರ್‌ಗಳನ್ನು ಉಪಯೋಗಿಸಬಹುದು.

ಧ್ವನಿಯಿಂದ  ಸಂದೇಶಕ್ಕೆ ಪರಿವರ್ತಿಸಿ

ನೀವು ಪ್ರೀಮಿಯಂ ಖರೀದಿಸಿದ್ದರೆ, ಟೆಲಿಗ್ರಾಂನಲ್ಲಿ ಧ್ವನಿಯಿಂದ ಪಠ್ಯ ಸಂದೇಶಕ್ಕೆ ಪರಿರ್ವತಿಸಬಹುದು ಮತ್ತು ಪ್ರತಿ ಲೇಖನಗಳನ್ನು ರೇಟ್ ಮಾಡುವ ವೈಶಿಷ್ಟ್ಯವನ್ನು ಪಡೆಯುತ್ತೀರಿ.

ವಿಭಿನ್ನ ಸ್ಟಿಕರ್‌ಗಳು 

ಆಕರ್ಷಕ ಸ್ಟಿಕರ್‌ಗಳೊಂದಿಗೆ ಪೂರ್ಣ ಪ್ರಮಾಣದ ಪರದೆಯಲ್ಲಿ ಅನಿಮೇಷನ್‌ಗಳನ್ನು ತಮಗೆ ಇಷ್ಟವಾದ ರೀತಿಯಲ್ಲಿ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು ಹಾಗೂ ಪ್ರತಿ ಸ್ಟಿಕರ್‌ಗಳನ್ನು ಮಾಸಿಕವಾಗಿ ನವೀಕರಿಸುವ ಸೇವೆ ನೀಡಲಿದೆ. 

ಚಾಟ್ ನಿರ್ವಹಣೆ

ಪ್ರೀಮಿಯಂನಲ್ಲಿ ಹೊಸ ಚಾಟ್ ಪಟ್ಟಿಯ ಪರಿಕರಗಳನ್ನು ಒಳಗೊಂಡಿದೆ. ಬಳಕೆದಾರರು ಡೀಫಾಲ್ಟ್ ಚಾಟ್ ಫೋಲ್ಡರ್‌ನ್ನು ಬದಲಾಯಿಸುವುದರಿಂದ ಅಪ್ಲಿಕೇಶನ್‌ನಲ್ಲಿ ಸಂದೇಶಗಳನ್ನು ಕಸ್ಟಮ್ ಫೋಲ್ಡರ್‌ನಲ್ಲಿ ತೆರೆಯುವ ಜೊತೆಗೆ ಆರ್ಕೈವ್ ಮಾಡಿದ ಚಾಟ್‌ಗಳನ್ನು ಓದಬಹುದು ಹಾಗೂ ನಿಮ್ಮ ಚಾಟ್‌ಗಳು ಗೌಪ್ಯವಾಗಿಡಲಾಗುತ್ತದೆ. 

ಪ್ರೊಫೈಲ್‌ನಲ್ಲಿ ಅನಿಮೇಟೆಡ್ ಸ್ಟಿಕರ್‌ಗಳು

ಪ್ರೀಮಿಯಂ ಬಳಕೆದಾರರು ಪ್ರೊಫೈಲ್‌ನಲ್ಲಿ ಹಾಕಿರುವ ವೀಡಿಯೋವನ್ನು ಚಾಟ್ ಪಟ್ಟಿಯಲ್ಲಿ ಎಲ್ಲ ಸ್ನೇಹಿತರು ಕಾಣಬಹುದು ಹಾಗೂ ವಿವಿಧ ಅನಿಮೇಶನ್‌ಗಳೊಂದಿಗೆ ಲೂಪಿಂಗ್ ಕೂಡ ಲಭ್ಯ. 

ಪ್ರೀಮಿಯಂ ಬ್ಯಾಡ್ಜ್

ಬಳಕೆದಾರರು ಪೀಮಿಯಂ ವೈಶಿಷ್ಟ್ಯಕ್ಕೆ ಚಂದಾದಾರರಾದರೆ ʻಪ್ರೀಮಿಯಂ ಬ್ಯಾಡ್ಜ್‌ಗಳನ್ನು ನೀಡಲಾಗುತ್ತದೆ. ಇದೊಂದು ವಿಶಿಷ್ಟ ಬ್ಯಾಡ್ಜ್ ಆಗಿದ್ದು, ನಿಮ್ಮ ಪ್ರೊಫೈಲ್‌ನಲ್ಲಿ ಕಾಣುವ ಹೆಸರಿನ ಪಕ್ಕದಲ್ಲಿ ಈ ಬ್ಯಾಡ್ಜ್ ನೋಡಬಹುದು ಹಾಗೂ ನಿಮ್ಮ ಸದಸ್ಯರು ಇದನ್ನು ಕಾಣಬಹುದು. 

ಪ್ರೀಮಿಯಂ ಅಪ್ಲಿಕೇಶನ್ ಐಕಾನ್‌ಗಳು

ಪ್ರೀಮಿಯಂ ಬಳಕೆದಾರರು ತಮ್ಮ ವಾಲ್‌ಪೇಪರ್‌ನಲ್ಲಿ ಉತ್ತಮವಾಗಿ ಹೊಂದಿಸುವ ಹಾಗೆ ತಮ್ಮ ಮುಖಪುಟ ಪರದೆಗೆ ಈ ಐಕಾನ್‌ಗಳನ್ನು ಸೇರಿಸಬಹುದಾದ ಹೊಸ ವೈಶಿಷ್ಟ್ಯ ಲಭ್ಯವಿದೆ. ಉದಾಹರಣೆಗೆ ಪ್ರೀಮಿಯಂ ನಕ್ಷತ್ರ, ರಾತ್ರಿ ಆಕಾಶ ಅಥವಾ ಟರ್ಬೊ-ಪ್ಲೇನ್‌ನಂತಹ ಐಕಾನ್‌ಗಳನ್ನು ಆರಿಸಿಕೊಳ್ಳಿ.

ಜಾಹಿರಾತುರಹಿತ ಟೆಲಿಗ್ರಾಮ್

ಗೌಪ್ಯತೆ ಪ್ರಜ್ಞೆಯ ಜಾಹಿರಾತುಗಳು ಟೆಲಿಗ್ರಾಮ್‌ನಲ್ಲಿ ನಿರ್ವಹಣಾ ವೆಚ್ಚ ಬೆಂಬಲಿಸಲು ಸಹಾಯ ಮಾಡುತ್ತದೆ. ಆದರೆ ಟೆಲಿಗ್ರಾಮ್ ಪ್ರೀಮಿಯಂನ ಚಂದಾದಾರರಿಗೆ ಇನ್ನು ಮುಂದೆ ಜಾಹಿರಾತು ಕಾಣಿಸುವುದಿಲ್ಲ.

ಎಲ್ಲರಿಗೂ ಲಭ್ಯವಿದೆ ಈ ಸೇವೆಗಳು 

ಗ್ರೂಪಿಗೆ ಪ್ರವೇಶಿಸಲು ಅನುಮತಿ

ಸಾರ್ವಜನಿಕ ಗ್ರೂಪ್‌ಗಳಿಗೆ ಈಗ ಸೇರಲು ಎಲ್ಲರನ್ನೂ ಸಕ್ರಿಯಗೊಳಿಸಲಾಗಿದೆ ಮತ್ತು ಗ್ರೂಪ್ ನಿರ್ವಾಹಕರು ಹೊಸ ಸದಸ್ಯರನ್ನು ಚಾಟ್‌ನಲ್ಲಿ ಬರೆಯಲು ಅನುಮೋದಿಸುವ ಮೊದಲು ಪರಿಶೀಲಿಸಲು ಅವಕಾಶ ನೀಡುತ್ತದೆ. ಗುಂಪನ್ನು ತೆರೆಯುವ ಬಳಕೆದಾರರು ಸೇರಲು ವಿನಂತಿಯನ್ನು ಟ್ಯಾಪ್ ಮಾಡಬಹುದು, ನಿರ್ವಾಹಕರು ಮಾತ್ರ ಪ್ರವೇಶಿಸಬಹುದಾದ ಪಟ್ಟಿಗೆ ತಮ್ಮ ವಿನಂತಿ ಸೇರಿಸಬಹುದು.

ಚಾಟ್‌ಗಳಿಗೆ ಪರಿಶೀಲನಾ ಬ್ಯಾಡ್ಜ್‌ಗಳು

ಸಾರ್ವಜನಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಗ್ರೂಪ್, ಚಾನಲ್‌ನ್ನು ಪರಿಶೀಲಿಸಬಹುದು. ದೃಢೀಕೃತ ಮೂಲದಿಂದ ಸಂದೇಶಗಳು ಬರುತ್ತಿವೆ ಎಂದು ಬಳಕೆದಾರರಿಗೆ ತೋರಿಸಲು ಪರಿಶೀಲನೆ ಬ್ಯಾಡ್ಜ್ ನೀಡಲಾಗುತ್ತದೆ. ಈ ಬ್ಯಾಡ್ಜ್‌ಗಳು ಈಗ ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತವೆ.

ಈ ಸುದ್ದಿ ಓದಿದ್ದಿರಾ? ಭಾರತದ ಟೆಲಿಕಾಂ ವಲಯದಲ್ಲಿ ದೊಡ್ಡ ʻಜಿʼಗಿತ!

ಆಂಡ್ರಾಯ್ಡ್‌ನಲ್ಲಿ ಚಾಟ್‌ಗಳನ್ನು ನವೀಕರಿಸಲಾಗಿದೆ

ಈ ಅಪ್ಡೇಟ್ ಐಒಎಸ್‌ಗೆ ಸಮಾನವಾಗಿ ಆಂಡ್ರಾಯ್ಡ್‌ನಲ್ಲಿ ಚಾಟ್ ನವೀಕರಿಸಲಾಗಿದೆ. ಈಗ ನೀವು ಸಂಪೂರ್ಣ ಚಾಟ್‌ನ್ನು ಓದುವ ಜೊತೆಗೆ ಸ್ಕ್ರಾಲ್ ಕೂಡ ಮಾಡಬಹುದು. ಚಾಟ್‌ನಲ್ಲಿ ಮ್ಯೂಟ್ ಮಾಡಲು, ಪಿನ್ ಮಾಡಲು ಅಥವಾ ಅಳಿಸಲು ಹೊಸ ಬಟನ್‌ಗಳನ್ನು ಸೇರಿಸಲಾಗಿದೆ.

ಆಂಡ್ರಾಯ್ಡ್‌ನಲ್ಲಿ ವೀಡಿಯೋಗಳ ಸ್ವಯಂಚಾಲಿತ ಡೌನ್‌ಲೋಡ್‌

ವೀಡಿಯೋಗಳನ್ನು ಸ್ವಯಂಚಾಲಿತವಾಗಿ ಗ್ಯಾಲರಿಗೆ ಡೌನ್‌ಲೋಡ್‌ ಮಾಡುವ ಆಯ್ಕೆಯನ್ನು ನವೀಕರಿಸಲಾಗಿದೆ. ಬಳಕೆದಾರರು ಗ್ರೂಪ್‌ಗಳಲ್ಲಿ ಅಥವಾ ಚಾನಲ್‌ಗಳೊಂದಿಗೆ ಚಾಟ್‌ ಮಾಡಲೆಂದು ಈ ವೈಶಿಷ್ಟ್ಯಗಳನ್ನು ಅಳವಡಿಸಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್