ಕಾರುಗಳಲ್ಲಿ ಇನ್ಮುಂದೆ ನಾಲ್ಕು 'ಏರ್‌ಬ್ಯಾಗ್‌' ಕಡ್ಡಾಯ: ಕೇಂದ್ರ ಸೂಚನೆ

Car Airbags Image
  • ಪ್ರತಿ 'ಏರ್‌ಬ್ಯಾಗ್‌'ಗೆ 800₹ ಆಗಲಿರುವುದರಿಂದ ಕಾರುಗಳ ದರ ಏರಿಕೆ ಸಾಧ್ಯತೆ
  • ಭಾರತವು 2030ರ ವೇಳೆಗೆ ಒಂದು ಕೋಟಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಗುರಿ

ವಾಹನಗಳು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಆಗುವ ಅಪಘಾತವನ್ನು ತಡೆಯಲು ಕೇಂದ್ರ ಸರ್ಕಾರ ಪ್ರತಿ ವಾಹನಗಳಲ್ಲಿ ಏರ್‌ಬ್ಯಾಗ್‌ ಕಡ್ಡಾಯ ಎಂದು ಆಟೋಮೊಬೈಲ್ ತಯಾರಕರಿಗೆ ಸೂಚನೆ ಹೊರಡಿಸಿದೆ. 

ಪ್ರತಿ ಏರ್‌ಬ್ಯಾಗ್‌ಗೆ 800ರೂ ಆಗಲಿದೆ. ಆದ್ದರಿಂದ ಅಟೋಮೊಬೈಲ್ ತಯಾರಕರು ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ನಾಲ್ಕು ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ನಿಗಮದ ಸಚಿವ ನಿತಿನ್ ಗಡ್ಕರಿ ತಿಳಿಸಿದರು. 

Eedina App

ಮುಂದಿನ ದಿನಗಳಲ್ಲಿ ವಾಹನಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಏರ್‌ಬ್ಯಾಗ್‌ ಬೆಲೆ ಕೂಡ ಸೇರಿಸಲಾಗುವುದು. ಇದರಿಂದ ವಾಹನಗಳ ದರ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇರಲಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ನಾಲ್ಕು ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡುವುದರಿಂದ ಕಂಪನಿಗಳ ಮೇಲೆ ಇನ್ನು ಹೆಚ್ಚು ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ವಾಹನಗಳಲ್ಲಿ ಈಗಾಗಲೇ ಎರಡು ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಗಿದೆ ಮತ್ತು ಇನ್ನು ಹೆಚ್ಚು ತುರ್ತು ಭದ್ರತೆ ವಹಿಸಲು ಪ್ರಯಾಣಿಕರ ಜಾಗದಲ್ಲಿ ಕೂಡ ಏರ್‌ಬ್ಯಾಗ್‌ ಅಳವಡಿಸಬೇಕು, ಈ ಹೊಸ ನಿಬಂಧನೆಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸುವ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಪೂರಕ ಪ್ರಶ್ನೆಗೆ ಸಚಿವ ಗಡ್ಕರಿ ಉತ್ತರಿಸಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಭಾರತದ ಡಿಜಿಟಲ್ ಪಾವತಿ ವಲಯದಲ್ಲಿ ಆರ್ಥಿಕ ವಂಚನೆ ಶೇ.42ರಷ್ಟು ಏರಿಕೆ: ಸಮೀಕ್ಷಾ ವರದಿ

ಈ ಹಿಂದೆ ನೀಡಿದ ಕರಡು ಸೂಚನೆಯ ಪ್ರಕಾರ ಅಕ್ಟೋಬರ್ ವೇಳೆಗೆ ಇದಕ್ಕೆ ಸಂಬಂಧಿಸಿದ ನಿಬಂಧನೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಇದರಿಂದ ಇಂಧನ ರಹಿತ ಭಾರತಕ್ಕೆ ನಾವೆಲ್ಲ ಕೊಡುಗೆ ನೀಡಬೇಕು ಮತ್ತು ಅಟೋ ಮೊಬೈಲ್ ವಲಯದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರ ಪ್ರಮಾಣವು ಶೇ. 35ರಷ್ಟು ಏರಿಕೆ ಕಂಡಿದೆ.

ಶೀಘ್ರವೇ ಭಾರತದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡಲು ಕೇಂದ್ರ ಯೋಜನೆ ಹಾಕಿಕೊಂಡಿದೆ. ಜೊತೆಗೆ ಭಾರತವು 2030ರ ವೇಳೆಗೆ ಒಂದು ಕೋಟಿ ಎಲೆಕ್ಟ್ರಿಕ್ ವಾಹನಗಳ ನೋಂದಣಿಯನ್ನು ಸಾಧಿಸುತ್ತದೆ ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app