ಪೋಷಕರು, ಶಿಕ್ಷಕರಿಗಾಗಿ ಮೊಬೈಲ್‌ ಆ್ಯಪ್ ಬಿಡುಗಡೆ ಮಾಡಿದ ತಿರುಪ್ಪೂರ್‌ ಕಾರ್ಪೊರೇಷನ್‌ ಶಾಲೆ

ಪೋಷಕರು ಮತ್ತು ಶಿಕ್ಷಕರ ನಡುವೆ ಡಿಜಿಟಲ್ ಸಂಪರ್ಕಕೊಂಡಿಯಾಗಿ  ಮೊಬೈಲ್‌ ಆ್ಯಪ್ ಬಿಡುಗಡೆ ಮಾಡಿದ ತಿರುಪ್ಪೂರ್‌ ಮಹಾನಗರ ಪಾಲಿಕೆ ಪ್ರಾಥಮಿಕ ಶಾಲೆ

ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ದೈನಂದಿನ ಮಾಹಿತಿ ಮತ್ತು ಶೈಕ್ಷಣಿಕ ವೀಡಿಯೋಗಳನ್ನು  ಪೋಷಕರೊಂದಿಗೆ ಹಂಚಿಕೊಳ್ಳುವ ಸಲುವಾಗಿ ತಮಿಳುನಾಡಿನ ತ್ರಿಪುರ ಜಿಲ್ಲೆಯ ಪೂಲುವಂಪಟ್ಟಿ ಮಹಾನಗರ ಪಾಲಿಕೆ ಪ್ರಾಥಮಿಕ ಶಾಲೆಯು ಮೊಬೈಲ್ ಅಪ್ಲೀಕೇಷನ್‌ ಬಿಡುಗಡೆ ಮಾಡಿದೆ.

ಪೋಷಕರು ಮತ್ತು ಶಿಕ್ಷಕರ ನಡುವೆ ಡಿಜಿಟಲ್ ಸಂಪರ್ಕಕೊಂಡಿಯಾಗಲಿರುವ ʻಪೇರೆಂಟ್ಸ್ ಆ್ಯಪ್ʼ ಮತ್ತು ʻಟೀಚರ್ಸ್ ಆ್ಯಪ್ʼ ವಿದ್ಯಾರ್ಥಿಗಳ ಡಿಜಿಟಲ್ ಡೈರಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಅವರ ಕಲಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ತಿರುಪ್ಪೂರ್ ಮೇಯರ್ ಎನ್. ದಿನೇಶ್ ಕುಮಾರ್ ತಿಳಿಸಿದರು. 

ಶಾಲೆಯಲ್ಲಿ ನಡೆದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಉದ್ದೇಶಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿರುವ ಶಾಲೆಯ ಕ್ರಮವನ್ನು ಶ್ಲಾಘಿಸಿದರು. 

ತಮಿಳುನಾಡು ರಾಜಕೀಯ, ಸಿನಿಮಾ, ಭಾಷೆ ಸೇರಿದಂತೆ ಹಲವಾರು ವಿಷಯಗಳ ಕಾರಣಕ್ಕೆ ಮುನ್ನೆಲೆಗೆ ಬರುತ್ತಿರುತ್ತದೆ. ಪ್ರಸ್ತುತ ತಿರುಪ್ಪೂರ್ ನಗರದ ಕಾರ್ಪೊರೇಷನ್‌ ಶಾಲೆಯೊಂದು ಮಕ್ಕಳ ಶಿಕ್ಷಣಕ್ಕೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಸ್ತುತ ಸುದ್ದಿಯಲ್ಲಿದೆ.  

1954ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 423 ಬಾಲಕರು ಮತ್ತು 444 ಬಾಲಕಿಯರು ಸೇರಿ ಒಟ್ಟು 865 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಮುಖ್ಯೋಪಾದ್ಯಾಯರು ಸೇರಿದಂತೆ ಒಟ್ಟು 11 ಮಂದಿ ಶಿಕ್ಷಕರಿದ್ದಾರೆ.

ಆ್ಯಂಡ್ರಾಯ್ಡ್ ಆಧಾರಿತ ಈ ಮೊಬೈಲ್ ಆ್ಯಪ್ ಅನ್ನು ಚೆನ್ನೈ ಮೂಲದ ಸಂಸ್ಥೆಯೊಂದು ಉಚಿತವಾಗಿ ಅಭಿವೃದ್ಧಿಪಡಿಸಿದೆ ಎಂದು ಶಾಲಾ ಶಿಕ್ಷಕರಾದ ಪಿ. ಮಣಿಕಂದ ಪ್ರಭು ತಿಳಿಸಿದರು. 

ʻʻನಮ್ಮ ಶಾಲೆಯ ದಾಖಲಾತಿ ಮತ್ತು ಕಾರ್ಯಕ್ಷಮತೆಯನ್ನು ಮೆಚ್ಚಿರುವ ಸಂಸ್ಥೆಯು ನಮ್ಮ ಶಾಲೆಗಾಗಿ ಉಚಿತವಾಗಿ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಪೋಷಕರು ಮತ್ತು ಶಿಕ್ಷಕರ ನಡುವೆ ಡಿಜಿಟಲ್ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ಪೋಷಕರನ್ನು ವಿಚಾರಿಸಬಹುದು. ಪೋಷಕರು ತಮ್ಮ ಮಕ್ಕಳು ರಜೆ ತೆಗೆದುಕೊಳ್ಳುವ ಬಗ್ಗೆ ಶಿಕ್ಷಕರಿಗೆ ಅರ್ಜಿಯ ಮೂಲಕ ತಿಳಿಸಬಹುದಾಗಿದೆʼʼ ಎಂದರು.

ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಿದ ರೋಬೊ ಟೀಚರ್‌

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ʻಈಗಲ್‌ʼ ರೋಬೊ ವಿದ್ಯಾರ್ಥಿಗಳಿಗೆ ಪಾಠ ಮಾಡಿದೆ. ಪಾಠ- ಪ್ರವಚನಗಳಲ್ಲಿ ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ, ಕಲಿಕೆಯನ್ನು ಸುಲಭವಾಗಿಸುವಂತಹ ಈಗಲ್‌ ರೋಬೊ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ನಡೆಯಿತು. 

ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೊದ ಸಾಮರ್ಥ್ಯ ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ದೊರಕಿಸಲು ಇಂತಹ ರೋಬೊಗಳಿದ್ದರೆ ಒಳ್ಳೆಯದು’ ಎಂದು ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್