ಚೀನಿ ಸರಕಿಗೆ ಸಂಕಷ್ಟ| ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಜರ್ಮನಿಯಲ್ಲೂ ನಿಷೇಧ 

China Smartphones Image
  • ನೋಕಿಯಾ ಕಂಪನಿಯ ಪರವಾಗಿ ನ್ಯಾಯಲಯ ತೀರ್ಪು 
  • ವಿವೋ ಮತ್ತು ಒಪ್ಪೋ ಕಂಪನಿಗಳ ಮೇಲೆ ನಿಷೇಧ ಖಚಿತ

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಹಲವು ಸಂಕಷ್ಟ ಎದುರಿಸಬೇಕಿದೆ. ಕಡಿಮೆ ಬೆಲೆಯ ಚೀನಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರತ ಇತ್ತೀಚೆಗೆ ನಿಷೇಧ ಹೇರಿದ ಬೆನ್ನಲ್ಲೇ ಇದೀಗ ಜರ್ಮನಿ ಕೂಡ ನಿಷೇಧದ ಅಸ್ತ್ರ ಪ್ರಯೋಗಿಸಿದೆ.

ಇತ್ತೀಚೆಗೆ ಭಾರತ ಕೂಡ ರೂ.12,OOO ದೊಳಗೆ ಇರುವ ಎಲ್ಲ ಚೀನೀ ಸ್ಮಾರ್ಟ್‌ಫೋನ್‌ಗಳ ಮೇಲೆ ನಿಷೇಧ ಹೇರಿತ್ತು. ಅದರ ಬೆನ್ನೆಲ್ಲೇ ಜರ್ಮನಿ ಕೂಡ ವಿವೋ ಮತ್ತು ಒಪ್ಪೋ ಕಂಪನಿಗಳ ಮೇಲೆ ನಿಷೇಧ ಹೇರಿದೆ. ಜರ್ಮನಿ ಮಾತ್ರವಲ್ಲದೆ ಯುರೋಪ್ ಮತ್ತು ಇತರ ದೇಶಗಳು ನಿಧಾನವಾಗಿ ನಿರ್ಬಂಧಿಸುತ್ತಿವೆ. 

ನಿಷೇಧ ಬರೀ 5ಜಿ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರ. ಸದ್ಯಕ್ಕೆ ಜರ್ಮನಿ ನ್ಯಾಯಾಲಯವು ಮಾರಾಟ ಮಾಡುವುದನ್ನು ತಡೆದಿದೆ. ಅದೇ ರೀತಿ ಯೂರೋಪ್ ಒಕ್ಕೂಟ ಕೂಡ ಮುಂದಿನ ದಿನಗಳಲ್ಲಿ ನಿಷೇಧ ಹೇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. 

ನಿಷೇಧಕ್ಕೆ ಕಾರಣವೇನು?

ನೋಕಿಯಾ ಕಂಪನಿ ತನ್ನ ಸ್ಮಾರ್ಟ್‌ಫೋನ್‌ ಸ್ವಾಮ್ಯದ 5ಜಿ ತಂತ್ರಜ್ಞಾನವನ್ನು ಪರವಾನಗಿ ಇಲ್ಲದೆ ಬಳಸಿದ್ದಕ್ಕಾಗಿ ಒಪ್ಪೋ, ಒನ್ ಪ್ಲಸ್ ಎರಡು ಕಂಪನಿಗಳ ಮೇಲೆ ಮೊಕದ್ದಮೆ ಹೂಡಿತ್ತು. ಕಂಪನಿಗಳು ಉದ್ದೇಶಪೂರ್ವಕವಾಗಿ ಜರ್ಮನ್ ಸೈಟ್‌ಗಳಿಂದ ಎಲ್ಲ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಮಾಡಿ ತೆಗೆದುಹಾಕಿವೆ. ಜತೆಗೆ ಫಿನ್ನಿಷ್ ಕಂಪನಿಯಿಂದ ಯಾವುದೇ ಪರವಾನಗಿಯನ್ನು ಖರೀದಿಸದೆ ಪೇಟೆಂಟ್ ಪಡೆದ 5ಜಿ ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ನೋಕಿಯಾ ಆರೋಪಿಸಿತ್ತು.

ಈ ಸುದ್ದಿ ಓದಿದ್ದೀರಾ? ನೂತನ 5ಜಿ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಲು ಸಿದ್ಧವಾದ ಜಿಯೋ

ಇಷ್ಟೆಲ್ಲಾ ಆದ ಮೇಲೆ ನೋಕಿಯಾ ಕಂಪನಿಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಪರವಾನಗಿ ಇಲ್ಲದೆ 5ಜಿ ತಂತ್ರಜ್ಞಾನವನ್ನು ಒಪ್ಪೋ ಮತ್ತು ಒನ್‌ಪ್ಲಸ್‌ ಕಂಪನಿಗಳು ಬಳಸುತ್ತಿವೆ ಎಂದು ಹೇಳಿತ್ತು. ನಂತರ ನ್ಯಾಯಲಯ, ಎರಡು ದೇಶಗಳ ಮಧ್ಯೆ ಪರವಾನಗಿ ವಿಷಯದಲ್ಲಿ ಒಪ್ಪಂದಕ್ಕೆ ಬರುವಂತೆ ಆದೇಶಿಸಿತ್ತು. ಆದರೆ ಇದಕ್ಕೆ ಒಪ್ಪದೆ, ಚೀನಾ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ನಿಷೇಧ ಹೇರಲಾಗಿದೆ. 

ಹಾಗಾದರೆ ಯುರೋಪ್ ದೇಶದಲ್ಲಿಯೂ ನಿಷೇಧವಾಗುತ್ತ?

ಒಪ್ಪೋ ಮತ್ತು ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ನೋಕಿಯಾ ಹೂಡಿರುವ ಮೊಕದ್ದಮೆಗಳ ಕಾರಣ, ಉಳಿದ ದೇಶಗಳು ಕೂಡ ನಿಷೇಧ ಮಾಡುವ ಸಾಧ್ಯತೆಗಳಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್