ಟ್ರೂಕಾಲರ್ ಹೋಲುವ ಅಪ್ಲಿಕೇಶನ್‌ ತರಲಿರುವ ಭಾರತ ಸರ್ಕಾರ

Truecaller Image
  • ನಕಲಿ ಕರೆಗಳು ಮತ್ತು ಸಂದೇಶಗಳನ್ನು ಗುರುತಿಸುವ ನಿರೀಕ್ಷೆಯಿದೆ
  • ಈ ಅಪ್ಲಿಕೇಶನ್ ವೈಯಕ್ತಿಕ ಡೇಟಾ ವಿವರಗಳನ್ನು ಸಂರಕ್ಷಿಸುತ್ತದೆ

ಟ್ರೂಕಾಲರ್ ಫೀಚರ್ ಹೋಲುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಮುಂದಾಗಿರುವ ಭಾರತ ಸರ್ಕಾರ, ಅನಿರೀಕ್ಷಿತ ಕರೆಗಳು ಮತ್ತು ಡಿಜಿಟಲ್ ವಂಚನೆಗಳಿಂದ ಜನರನ್ನು ದೂರ ಇಡುವ ಗುರಿ ಹೊಂದಿದೆ ಎಂದು ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವರದಿ ಮಾಡಿದೆ.

ಮೊಬೈಲ್ ಬಳಕೆದಾರರ ಕರೆಗಳನ್ನು ಗುರುತಿಸಲು ಮತ್ತು ಸಹಾಯ ಮಾಡುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಕೆಲವು ತಿಂಗಳುಗಳಲ್ಲಿ ಕಾರ್ಯಾಚರಣೆ ಮಾಡಿ, ದೂರಸಂಪರ್ಕ ಇಲಾಖೆಯ ಮಾನದಂಡಗಳ ಪ್ರಕಾರ ಟೆಲಿಕಾಂ ಕಂಪನಿಗಳು ಹೊಂದಿರುವ ಕೆವೈಸಿಯ ಅನುಸಾರ ಮೊಬೈಲ್ ಪರದೆಯ ಮೇಲೆ ಹೆಸರು ಕಾಣಿಸುವಂತೆ ತಂತ್ರಜ್ಞಾನ ಬಳಸಿ ಸಕ್ರಿಯಗೊಳಿಸುತ್ತಿದ್ದೇವೆ ಎಂದು ಟ್ರಾಯ್‌ ಅಧ್ಯಕ್ಷರಾದ ಡಾ ಪಿ ಡಿ ವಘೇಲಾ ತಿಳಿಸಿದ್ದಾರೆ. 

ಟ್ರೂಕಾಲರ್ ಎನ್ನುವುದು ಯಾಕೆ, ಯಾರು ಎಲ್ಲಿಂದ ನಿಮಗೆ ಕರೆ ಮಾಡುತ್ತಿದ್ದಾರೆ ಮತ್ತು ಕರೆಗಳು ಅನಗತ್ಯವಾಗಿ ಬರುತ್ತಿದೆಯಾ ಎಂಬ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸುವ ಒಂದು ಮೊಬೈಲ್ ತಂತ್ರಜ್ಞಾನ. ಈ ತಂತ್ರಜ್ಞಾನಕ್ಕೆ ಪ್ರತಿಯಾಗಿ ಅದೇ ರೀತಿಯ ಮತ್ತೊಂದು ಸರ್ಕಾರಿ ಅಪ್ಲಿಕೇಶನ್ ತರಲು ಭಾರತ ಸರ್ಕಾರ ಮುಂದಾಗಿದೆ.

ದೂರಸಂಪರ್ಕ ಇಲಾಖೆಯಿಂದ ಅನುಮತಿ ಪಡೆದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶೀಘ್ರದಲ್ಲಿಯೇ ಹೊಸ ಅಪ್ಲಿಕೇಶನ್‌ಗೆ ಚಾಲನೆ ಮಾಡುವ ವಿವರ ತಿಳಿಸಿದೆ.

ಈ ಅಪ್ಲಿಕೇಶನ್ ಹೇಗೆ ಪ್ರಯೋಜನಕಾರಿ?

  1. ನಕಲಿ ಕರೆಗಳು ಮತ್ತು ಸಂದೇಶಗಳನ್ನು ಗುರುತಿಸಬಹುದು.
  2. ಡಿಜಿಟಲ್ ವಂಚನೆಗಳನ್ನು ತಡೆಯಬಹುದು.
  3. ಪೋನ್ ನಂಬರ್ ಗುರುತಿಸಲು ಇತರ ಖಾಸಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕಿಲ್ಲ.
  4. ಅಪ್ಲಿಕೇಶನ್ ನಿಮ್ಮ ವೈಯಕ್ತಿಕ ಡೇಟಾ ವಿವರಗಳನ್ನು ಸಂರಕ್ಷಿಸುತ್ತದೆ.

ಕಳೆದ 13 ವರ್ಷಗಳಿಂದ ಅಪ್ಲಿಕೇಶನ್ ಅಭಿವೃದಿಪಡಿಸುವ ಯೋಜನೆ ಹೊಂದಿದ್ದೆವು. ಉನ್ನತ ತಂತ್ರಜ್ಞಾನ ಬಳಸಿ ಇದನ್ನು ತರುತ್ತಿದ್ದೇವೆ. ಬೆದರಿಕೆ ಕರೆಗಳಿಂದ ದೂರ ಮಾಡುವ ಉದ್ದೇಶ ಹೊಂದಿದೆ. ಅಷ್ಟೇ ಅಲ್ಲದೆ, ಮುಂದಿನ ಪೀಳಿಗೆಯೂ ಇದರಿಂದ ಅನುಕೂಲ ಪಡೆಯುವ ಗುರಿ ಹೊಂದಿದ್ದೇವೆ ಎಂದು ಟ್ರಾಯ್‌ ಹೇಳಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್