ಟ್ವಿಟರ್‌ನಲ್ಲಿ ಸಮುದಾಯವಾರು ವಿಂಗಡಣೆಯ ನೂತನ ಫೀಡ್ ಸೇರ್ಪಡೆ

Twitter Community Image
  • ಫೀಡ್ ವಿಂಗಡಿಸುವ ಮೂಲಕ ಸಮುದಾಯಗಳ ಸೇರ್ಪಡೆ
  • ಟ್ವೀಟ್‌ಗಳನ್ನು ಹೈಲೈಟ್ ಮಾಡಲು ಅನುಮತಿಸುವ ವೈಶಿಷ್ಟ್ಯ

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಮೇಲೆ ಭಾರಿ ಬದಲಾವಣೆಗಳನ್ನು ನೋಡುತ್ತಿದ್ದೇವೆ, ಇತ್ತೀಚಿನ ದಿನಗಳಲ್ಲಿ ಸಮುದಾಯಗಳನ್ನು ವಿಂಗಡಿಸಲು ಟ್ವಿಟರ್ ಸಂಸ್ಥೆ ಮುಂದಾಗಿದ್ದು, ಅವರ ಮೊದಲ ಪ್ರಯತ್ನವೇ ಫೀಡ್ ವಿಂಗಡಿಸುವ ಮೂಲಕ ಸಮುದಾಯಗಳನ್ನು ಸೇರ್ಪಡಿಸುವುದು.

“ಪ್ರಸ್ತುತ, ಈ ಆಯ್ಕೆ ಪ್ರತಿ ಟ್ವಿಟರ್ ಸಮುದಾಯಿಗಳಿಗೆ ಅನುಗುಣವಾಗಿ ಅವರ ಹಿಸ್ಟರಿ ಆಧರಿಸಿ ಟ್ವೀಟ್ ಪ್ರದರ್ಶನ ಮತ್ತು ಅವರ ಟ್ವೀಟ್ ಕೂಡುಗೆಗಳು, ಟ್ವಿಟರ್ ಮೆಲ್ಭಾಗದಲ್ಲಿ ಕಾಣುವ ರೀತಿ ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ” ಎಂದು ಟ್ವಿಟರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದೆ.

ಪ್ರತಿ ವ್ಯಕ್ತಿಯು ಆ ಸಮುದಾಯಕ್ಕೆ ಭೇಟಿ ನೀಡಿದಾಗ, ಅವರು ಆಯ್ಕೆ ಮಾಡುವ ಕ್ಷೇತ್ರವು ಸೆಟ್ಟಿಂಗ್ಸ್‌ನಲ್ಲಿ ಡೀಫಾಲ್ಟ್ ಆಗಿರುತ್ತದೆ. ನಿಮಗೆ ಅನುಗುಣವಾಗಿ ಅದನ್ನು ಬದಲಾಯಿಸಬಹುದು, ಬಳಕೆದಾರರು ತಮ್ಮ ಆದ್ಯತೆಯ ಆಧಾರದ ಮೇಲೆ ಪ್ರತಿ ಸಮುದಾಯಗಳನ್ನು ವೀಕ್ಷಿಸುತ್ತಾರೆ ಮತ್ತು ಕಸ್ಟಮೈಸ್ ಕೂಡ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ನಿಮ್ಮ ಹಿಂದಿನ ಚಟುವಟಿಕೆಯ ಆಧಾರದ ಮೇಲೆ ನೀವು ಆಸಕ್ತಿ ಹೊಂದಿರುವ ವಿಷಯವನ್ನು ಪರಿಶೀಲಿಸಿ ನಿಮಗೆ ಫೀಡ್ ಮಾಡುವ ಕೆಲಸ ಈ ನೂತನ ವೈಶಿಷ್ಟ್ಯ ಮಾಡಲಿದೆ. ಹೀಗೆ ಮಾಡುವುದರಿಂದ ಬಳಕೆದಾರರು ತಮಗೆ ಇಷ್ಟವಾದ ಟ್ವಿಟರ್ ಸಮುದಾಯಗಳಲ್ಲಿ ಭಾಗವಹಿಸಬಹುದು ಮತ್ತು ಉತ್ತಮ ಟ್ವೀಟ್‌ಗಳನ್ನು ಹೈಲೈಟ್ ಮಾಡಲು ಟ್ವಿಟರ್ ಅಲ್ಗಾರಿದಮ್‌ಗಳು ಅನುಮತಿಸುತ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್