ವಿಡಿಯೋ ಕ್ಯಾಪ್ಷನ್ ವೈಶಿಷ್ಟ್ಯ ಪರಿಚಯಿಸಿದ ಟ್ವಿಟರ್ ಸಂಸ್ಥೆ

Twitter caption Image
  • ಈ ವೈಶಿಷ್ಟ್ಯ  ಐಓಎಸ್ ಮತ್ತು ಆಂಡ್ರಾಯ್ಡ್‌ ಎರಡರಲ್ಲೂ ಲಭ್ಯ
  • ಎಲ್ಲ ಭಾಷೆಯ ವಿಡಿಯೋ ನೋಡಲು ಸಹಾಯ ಮಾಡುತ್ತದೆ

ಹಳೆಯ ವಿಡಿಯೋ ಕ್ಯಾಪ್ಷನ್ ವೈಶಿಷ್ಟ್ಯಕ್ಕೆ ಟ್ಟಿಟರ್‌ ಸಂಸ್ಥೆ ಪುನಃ ಮರಳಿದ್ದು, ಮತ್ತೆ ಕಾರ್ಯನಿರ್ವಹಿಸಲು ಶುರು ಮಾಡಿದೆ. ಈ ವೈಶಿಷ್ಟ್ಯವೂ ಐಓಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ವಿಡಿಯೋ ನೋಡಲು ಸಹಾಯ ಮಾಡುತ್ತದೆ. 

ಕ್ಯಾಪ್ಷನ್‌ಗಳು ಲಭ್ಯವಿದ್ದರೆ ವಿಡಿಯೋ ಮೇಲಿನ ಬಲಭಾಗದಲ್ಲಿ ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ "ಲಿಖಿತ ವಿವರಣೆ ನೋಡಲು ಬಯಸುತ್ತೀರಾ" ಎಂಬ ಆಯ್ಕೆಯನ್ನು ಅನುಮತಿಸಿ.

ಕಳೆದ ಏಪ್ರಿಲ್‌ನಲ್ಲಿ, ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರತಿ ವಿಡಿಯೋ ಶೀರ್ಷಿಕೆಗಳಿಗೆ ʻಸಿಸಿʼ ಬಟನ್‌ ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ಟ್ವಿಟರ್ ಸಂಸ್ಥೆ ದೃಢಪಡಿಸಿತು. ಆದರೆ, ಇದು ಸೀಮಿತ ಸಂಖ್ಯೆಯ ಐಪೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು.  ಈಗ ಎಲ್ಲ ಬಳಕೆದಾರರಿಗೂ ಈ ಸೌಲಭ್ಯ ನೀಡಲಾಗಿದೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ಟ್ವಿಟರ್ ಸೀಮಿತ ಸಾಮರ್ಥ್ಯದಲ್ಲಿ (ಸಿಇಎ) ಕ್ಯಾಪ್ಷನ್‌ಗಳನ್ನು ಬೆಂಬಲಿಸುತ್ತದೆ, ಬಳಕೆದಾರರು ತಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಸಾಧನಗಳಲ್ಲಿ ಪ್ರವೇಶಿಸುವಿಕೆ ಸೆಟ್ಟಿಂಗ್‌ ಮೂಲಕ ಮುಚ್ಚಿದ ಕ್ಯಾಪ್ಷನ್‌ಗಳನ್ನು ಆನ್ ಮಾಡುವ ಮೂಲಕ ಸಕ್ರಿಯಗೊಳಿಸಿ ಎಂದು ತಿಳಿಸಿದೆ.

ಕ್ಯಾಪ್ಷನ್‌ ಆಯ್ಕೆಯನ್ನು ವಿಡಿಯೋದಲ್ಲಿ ಬಳಸುವುದು ಹೇಗೆ?

  • ಮೊದಲಿಗೆ ಮೀಡಿಯ ಸ್ಟುಡಿಯೋ ಲೈಬ್ರರಿ ಮೇಲೆ ಕಾಣುವ ವಿಡಿಯೋ ಮೇಲೆ ಕ್ಲಿಕ್ ಮಾಡಿ 
  • ವಿಂಡೋಸ್‌ನಲ್ಲಿ ಕಾಣುವ ಕ್ಯಾಪ್ಷನ್‌ ಆಯ್ಕೆ ಮಾಡಿ
  • ಡ್ರಾಪ್‌ಡೌನ್‌ ಮೆನುವಿನಿಂದ ನಿಮ್ಮ ಕ್ಯಾಪ್ಷನ್‌ ಫೈಲ್‌ನ ಪಠ್ಯ ಭಾಷೆ ಆಯ್ಕೆಮಾಡಿ
  • ಅಪ್ಲೋಡ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಭಾಷೆಯ ಫೈಲ್‌ನ್ನು ಅಳವಡಿಸಿ

ಹೀಗೆ ಮೇಲೆ ಕಾಣುವ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ನೆಚ್ಚಿನ ವಿಡಿಯೋವನ್ನು ನೋಡುತ್ತಾ ಆನಂದಿಸಬಹುದು. 

ನಿಮಗೆ ಏನು ಅನ್ನಿಸ್ತು?
1 ವೋಟ್