ಟ್ವಿಟರ್‌- ಮೆಟಾ ನಂತರ ಗೂಗಲ್‌ ಸರದಿ; 10 ಸಾವಿರ ಮಂದಿ ವಜಾಗೆ ಸಿದ್ಧತೆ

Twitter - Meta selected Now it's Google's turn; Ready to remove 10 thousand people
  • ಉದ್ಯೋಗಿಗಳಿಗೆ ಮಿತಿ ಮೀರಿ ವೇತನ ನೀಡುತ್ತಿರುವ ಆಲ್ಫಾಬೆಟ್‌ ಕಂಪನಿ
  • 1,87,000 ಮಂದಿ ಉದ್ಯೋಗಿಗಳನ್ನು ಹೊಂದಿರುವ ಗೂಗಲ್‌ನ ಮಾತೃಸಂಸ್ಥೆ

ಟ್ವಿಟರ್‌, ಮೆಟಾ ಹಾಗೂ ಅಮೆಜಾನ್‌ ಬಳಿಕ ಆಲ್ಫಾಬೆಟ್‌ನ ಹತ್ತು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಹೂಡಿಕೆ ಮಾಡಿರುವ ಕ್ರಿಸ್ಟೋಫ‌ರ್‌ ಹಾನ್‌ ಕಂಪನಿಯಲ್ಲಿ ಸಾಧನೆ ತೋರಿಸದೇ ಇರುವ ಕೆಲಸಗಾರರನ್ನು ತೆಗೆದು ಹಾಕಬೇಕು ಎಂಬ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಕಂಪನಿ ಉದ್ಯೋಗಿಗಳಿಗೆ ಮಿತಿ ಮೀರಿ ಸಂಬಳ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾನೇಜರ್‌ಗಳಿಗೆ ತೃಪ್ತಿದಾಯಕ ಸಾಧನೆ ಮಾಡದಿರುವ ಉದ್ಯೋಗಿಗಳನ್ನು ವರ್ಗೀಕರಿಸಲು ಸೂಚನೆ ನೀಡಲಾಗಿದೆ. ಮ್ಯಾನೇಜರ್‌ಗಳು ಸೂಚಿಸುವವರನ್ನು ತೆಗೆದು ಹಾಕಲಾಗುತ್ತದೆ. ಗೂಗಲ್‌ನ ಮಾತೃಸಂಸ್ಥೆಯಲ್ಲಿ 1,87,000 ಮಂದಿ ಉದ್ಯೋಗಿಗಳಿದ್ದಾರೆ.

ಗ್ರೀನ್‌ ಕಾರ್ಡ್‌ಗೆ ಆತಂಕ

ಮತ್ತೂಂದೆಡೆ, ಎಚ್‌- 1ಬಿ ವೀಸಾ ಮೂಲಕ ತೆರಳಿದ ಭಾರತೀಯ ಸಾಫ್ಟ್‌ವೇರ್‌ ವೃತ್ತಿಪರರಿಗೆ ಆತಂಕ ಉಂಟಾಗಿದೆ. ಮೆಟಾ, ಅಮೆಜಾನ್‌ ಹಾಗೂ ಟ್ವಿಟರ್‌ ಸೇರಿದಂತೆ ಹಲವು ಕಂಪನಿಗಳು 45 ಸಾವಿರ ಮಂದಿಯನ್ನು ಅಮೆರಿಕದಲ್ಲಿ ನಿಯೋಜಿಸಿವೆ.

ಮೆಟಾ ಮತ್ತು ಟ್ವಿಟರ್‌ ಕಂಪನಿಗಳೇ 350 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದವು. ಅವರಿಗೆ ಕೆಲಸ ಕಳೆದುಕೊಂಡ 60 ದಿನಗಳ ಒಳಗಾಗಿ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಜತೆಗೆ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೂ ಆತಂಕದ ಸ್ಥಿತಿ ಉಂಟಾಗಿದೆ.

ಉದ್ಯೋಗ ಕಡಿತಗೊಳಿಸಿದ ಕಂಪನಿಗಳು

ಅಮೆರಿಕದಲ್ಲಿ ಹಣದುಬ್ಬರ ಮಿತಿಮೀರಿದ್ದು, ಮುಂದಿನ ವರ್ಷದಲ್ಲಿ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಅಮೆರಿಕದ ಕಾರ್ಪೊರೇಟ್ ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿವೆ.

ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ ಬಡ್ಡಿದರ ಅಧಿಕಗೊಳಿಸಿದೆ. ಇದರ ಅಂಗವಾಗಿ ಕಾರ್ಪೊರೇಟ್ ಕಂಪನಿಗಳು ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸಿವೆ.

ಈ ಸುದ್ದಿ ಓದಿದ್ದೀರಾ? ಅಮೆರಿಕದಲ್ಲಿ ಸರಣಿ ಗುಂಡಿನ ದಾಳಿಗಳು; ಯುವಕರ ಮಾನಸಿಕ ಸ್ಥಿತಿಯ ಬಗ್ಗೆ ಕಳವಳ

ಅಕ್ಟೋಬರ್‌ನಲ್ಲಿ ಅಮೆರಿಕದ ಕಂಪನಿಗಳು ದೇಶಾದ್ಯಂತ ಸುಮಾರು 33,843 ಉದ್ಯೋಗ ಕಡಿತಗೊಳಿಸಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ವಜಾ ಪ್ರಮಾಣ ಶೇ. 13ರಷ್ಟು ಅಧಿಕವಾಗಿದೆ. 2021ರ ಫೆಬ್ರವರಿ ಬಳಿಕ ಗರಿಷ್ಠ ಮಟ್ಟದ ಉದ್ಯೋಗ ಕಡಿತಗೊಂಡಿದೆ. ಇ- ಕಾಮರ್ಸ್ ದೈತ್ಯ ಕಂಪನಿಯಾದ ಅಮೆಜಾನ್‌ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ್ದರೂ, ಅಂಕಿ- ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ.

ಮೆಟಾ ಪ್ಲಾಟ್‍ಫಾರಂ ಶೇ. 13ರಷ್ಟು ಉದ್ಯೋಗಿಗಳನ್ನು (11 ಸಾವಿರ ಮಂದಿಯನ್ನು ವಜಾ ಮಾಡಿದೆ). ಜಾಹೀರಾತು ಮಾರುಕಟ್ಟೆ ದುರ್ಬಲಗೊಂಡಿರುವ ಮತ್ತು ವೆಚ್ಚ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಮೆಟಾ ತಿಳಿಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180