
- ತಾಲಿಬಾನ್ ಅಧಿಕಾರಿಗಳಿಗೆ ಬ್ಲೂಟಿಕ್ ನೀಡಿದ ಎಲಾನ್ ಮಸ್ಕ್
- ಒಟ್ಟು 631ಕ್ಕೂ ಅಧಿಕ ವಸ್ತುಗಳನ್ನು ಹರಾಜು ಹಾಕಲಾಗುತ್ತಿದೆ
ಕಳೆದ ವರ್ಷ ಎಲಾನ್ ಮಸ್ಕ್ ಟ್ಟಿಟರ್ ಖರೀದಿಸಿದಾಗಿನಿಂದ ಒಂದಲ್ಲಾ ಒಂದು ಕಾರಣಕ್ಕೆ ನಿತ್ಯವೂ ಸುದ್ದಿಯಲ್ಲಿರುವ ಸಂಸ್ಥೆ, ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ.
ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ತನ್ನ ಕಚೇರಿಯ ಬಾಡಿಗೆ ಪಾವತಿಸಲು ಸಾಧ್ಯವಾಗದೇ ಪರಿತಪಿಸುತ್ತಿರುವಾಗಲೇ, ಮಂಗಳವಾರದಿಂದ ಟ್ವಿಟರ್ ಸಂಸ್ಥೆಯ ಹಲವು ವಸ್ತುಗಳ ಹರಾಜು ಆರಂಭವಾಗಿದೆ.
ಪ್ರಸಿದ್ಧ ಬರ್ಡ್ ಲೋಗೋ, ಕಚೇರಿ ಬಳಕೆಯ ವಸ್ತುಗಳಾದ ವೈಟ್ ಬೋರ್ಡ್, ಡೆಸ್ಕುಗಳು, ಕೆಎನ್95 ಮಾಸ್ಕ್ಗಳು ತುಂಬಿರುವ 100 ಬಾಕ್ಸ್ಗಳು, ವಿನ್ಯಾಸ ಮತ್ತು ಚಿತ್ತಾರಗಳಿಂದ ಕೂಡಿರುವ ಕುರ್ಚಿಗಳು, ಕಾಫಿ ಟೇಬಲ್, ಕಾಫಿ ಮಷೀನ್, ಪ್ರಿಂಟಿಂಗ್ ಸಾಧನ, ಡಿಸೈನರ್ ಸೋಫಾ ಸಹಿತ ಒಟ್ಟು 631ಕ್ಕೂ ಅಧಿಕ ವಸ್ತುಗಳನ್ನು ಹರಾಜು ಹಾಕಲಾಗುತ್ತಿದೆ. ಕನಿಷ್ಠ ಮೊತ್ತವನ್ನು 25 ಡಾಲರ್ ಎಂದು ನಿಗದಿಪಡಿಸಲಾಗಿದೆ.
ತಾಲಿಬಾನಿಗಳಿಗೂ ಟ್ವಿಟರ್ ಬ್ಲೂಟಿಕ್
ಯುದ್ಧಪೀಡಿತ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಅಧಿಕಾರಿಗಳಿಗೆ ಎಲಾನ್ ಮಸ್ಕ್ ಒಡೆತನದ ಟ್ವಿಟರ್ನಲ್ಲಿ ಬ್ಲೂಟಿಕ್ ಇರುವ ಅಧಿಕೃತ ಖಾತೆಯನ್ನು ಒದಗಿಸಲಾಗಿದೆ.
ತಾಲಿಬಾನ್ ಸರ್ಕಾರದ ಪ್ರಮುಖ ಆಡಳಿತಗಾರರು ಮತ್ತು ನಾಲ್ವರು ಬೆಂಬಲಿಗರ ಟ್ವಿಟರ್ ಖಾತೆಗೆ ಬ್ಲೂಟಿಕ್ (ದೃಢೀಕೃತ ಖಾತೆ) ಮಾನ್ಯತೆ ನೀಡಲಾಗಿದ್ದು, ಇದರಲ್ಲಿ ಸರ್ಕಾರದ ಮಾಹಿತಿ ಪ್ರಸಾರ ಇಲಾಖೆಯ ಮುಖ್ಯಸ್ಥರಾದ ಹಿದಾಯತ್ ಉಲ್ಲಾ ಹಿದಾಯತ್ ಅವರ ಖಾತೆಯೂ ಸೇರಿದೆ. ಅವರಿಗೆ 1.87 ಲಕ್ಷ ಫಾಲೋವರ್ಸ್ಗಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೆಜಾನ್ ಉದ್ಯೋಗ ಕಡಿತ| ಮತ್ತೆ 2,300 ನೌಕರರನ್ನು ವಜಾ ಮಾಡಿದ ಇ-ಕಾಮರ್ಸ್ ಕಂಪನಿ
ಸರ್ಕಾರದ ನಿತ್ಯ ಚಟುವಟಿಕೆಗಳ ಬಗ್ಗೆ ಹಿದಾಯತ್ ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅವರ ಜತೆಗೆ ಮಾಧ್ಯಮ ನಿಗಾ ಇಲಾಖೆ ಮುಖ್ಯಸ್ಥರಾದ ಅಬ್ದುಲ್ ಹಕ್ ಮೊಹಮ್ಮದ್ ಅವರ ಖಾತೆಗೂ ಬ್ಲೂ ಟಿಕ್ ನೀಡಲಾಗಿದ್ದು, ಸರ್ಕಾರದ ಇಂಥ ಸಾಕಷ್ಟು ಅಧಿಕಾರಿಗಳಿಗೆ ಬ್ಲೂಟಿಕ್ ನೀಡಲಾಗಿದೆ.