ಟ್ವೀಟ್ ಎಡಿಟ್ | ನೂತನ ಎಡಿಟ್‌ ಫೀಚರ್ ಪರಿಚಯಿಸಲಿದೆ ಟ್ವಿಟರ್‌

Twitter Edit Image
  • ಚಂದಾದಾರರಿಗೆ ಮಾತ್ರ ಬಳಸಲು ಅನುಮತಿ
  • ಎಡಿಟ್‌ ಮಾಡಲು ಕೇವಲ 30 ನಿಮಿಷ ಕಾಲಾವಧಿ

ಕೆಲವು ವಾಕ್ಯಗಳನ್ನು ಟ್ವೀಟ್ ಬರೆದು ಅಭಿಪ್ರಾಯ ವ್ಯಕ್ತಪಡಿಸುವ ಸಾಮಾಜಿಕ ಜಾಲತಾಣದ ವೇದಿಕೆಯಾದ ಟ್ವಿಟರ್ ಇದೀಗ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದೆ. 

ಈ ಹಿಂದೆ ಬಳಕೆದಾರರು ಒಮ್ಮೆ ಟ್ವೀಟ್ ಮಾಡಿದ ತಕ್ಷಣ ಅದರಲ್ಲಿ ಏನಾದರು ದೋಷ ಕಂಡುಬಂದರೆ ಅದನ್ನು ಎಡಿಟ್ ಮಾಡುವ ಆಯ್ಕೆ ಹೊಂದಿರಲಿಲ್ಲ, ಆದರೆ ಇದೀಗ ಟ್ವಿಟರ್ ʻಟ್ವೀಟ್ ಎಡಿಟ್ʼ ಮಾಡುವ ನೂತನ ಫೀಚರ್ ಪರಿಚಯಿಸಲಿದೆ.

ಇದಕ್ಕೆ ಸಂಬಂಧಿಸಿ ಟ್ವಿಟರ್ ತಮ್ಮ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಫೀಚರ್ ಮಾಸಿಕ ಚಂದಾದಾರಿಕೆ ಪಾವತಿಸಿದ ಚಂದಾದಾರರಿಗೆ ಮಾತ್ರ ಬಳಸಲು ಅನುಮತಿಸಲಿದೆ ಎಂಬ ವದಂತಿಗಳೂ ಹರಡಿವೆ.

ಟ್ವಿಟರ್ ಪ್ರಕಾರ, "ಮುದ್ರಣ ದೋಷಗಳನ್ನು ಸರಿಪಡಿಸುವುದು, ತಪ್ಪಿದ ಟ್ಯಾಗ್‌ಗಳನ್ನು ಸೇರಿಸುವುದು ಮತ್ತು ಇತರ ಕೆಲವು ಎಡಿಟ್‌ಗಳನ್ನು ಮಾಡಲು ಅಲ್ಪಾವಧಿವರೆಗೆ ಅವಕಾಶ ಒದಗಿಸಲಾಗುವುದು. ಅಂದರೆ ಒಂದು ಟ್ವೀಟ್ ಎಡಿಟ್ ಮಾಡಲು ಕೇವಲ 30 ನಿಮಿಷ ನೀಡಲಾಗುವುದು” ಎಂದು ಟ್ವಿಟರ್ ತಿಳಿಸಿದೆ. 

ಈ ಸುದ್ದಿ ಓದಿದ್ದೀರಾ? ಅಕ್ಟೋಬರ್‌ನಿಂದ ಹಳೆಯ ಐಫೋನ್ ಮಾಡೆಲ್‌ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯಾಚರಣೆ ಸ್ಥಗಿತ

ಬಳಕೆದಾರರು ಧೀರ್ಘಕಾಲದಿಂದ ವಿನಂತಿಸುತ್ತಿದ ಫೀಚರ್ ಇದಾಗಿದ್ದು, ಪರೀಕ್ಷಾ ಗುಂಪಿನ ಭಾಗವಾಗಿರದವರೂ ಟ್ವೀಟ್ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಎಡಿಟ್ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಟ್ವೀಟ್ ಪ್ರಕಟಿಸಿದ ನಂತರ ಬದಲಾವಣೆ ಮಾಡಲು ಅನುಮತಿಸುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್