ಕಾರ್ಮಿಕ ನ್ಯಾಯ | ಅಸ್ಟ್ರೇಲಿಯದ ಉಬರ್ ಚಾಲಕರಿಗೆ ರಕ್ಷಣೆ ನೀಡಲು ಉಬರ್ ಸಂಸ್ಥೆ ಒಪ್ಪಂದ

Uber Image
  • ಆಸ್ಟ್ರೇಲಿಯನ್ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡ ಉಬರ್
  • 2017ರಲ್ಲಿ 50ಕ್ಕೂ ಹೆಚ್ಚು ಚಾಲಕರನ್ನು ಕೆಲಸದಲ್ಲಿ ಕೊಲ್ಲಲ್ಪಟ್ಟಿದ್ದಾರೆ

ಆಸ್ಟ್ರೇಲಿಯದಲ್ಲಿ ಡೆಲಿವರಿ ಚಾಲಕರ ಸಾವಿಗೆ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾದ ಎರಡು ವರ್ಷಗಳ ನಂತರ, ರಾಷ್ಟ್ರದ ಸಾರಿಗೆ ನೌಕರರ ಒಕ್ಕೂಟದೊಂದಿಗೆ ಒಪ್ಪಂದಕ್ಕೆ ಬಂದಿರುವ ದೈತ್ಯ ರೈಡ್‌ಶೇರ್ (ವಾಹನ ಆನ್‌ಲೈನ್‌ ಬುಕ್ ಮಾಡಿ ಪ್ರಯಾಣಿಸುವ ವ್ಯವಸ್ಥೆ) ಸಂಸ್ಥೆ ಉಬರ್, ಚಾಲಕರ ವೇತನ ಮತ್ತು ಕೆಲಸದ ಸ್ಥಳದ ರಕ್ಷಣೆ ನೀಡಲು ತೀರ್ಮಾನಿಸಿದೆ. 

ಉಬರ್‌ನ ಒಂದು ಲಕ್ಷ ಚಾಲಕರು ಮತ್ತು ಆಹಾರ ವಿತರಣಾ ಕಾರ್ಮಿಕರಿಗೆ ಹೆಚ್ಚಿನ ರಕ್ಷಣೆ ನೀಡುವ ಕಾನೂನು ಹೋರಾಟಗಳು, ಪ್ರಚಾರಗಳು ಹಾಗೂ ಹಲವು ಮಾತುಕತೆಗಳ ನಂತರ ಪ್ರಬಲ ಆಸ್ಟ್ರೇಲಿಯದ ಕಾರ್ಮಿಕ ಒಕ್ಕೂಟದೊಂದಿಗೆ ಒಪ್ಪಂದವನ್ನು ಮಾಡಿದೆ.

ನೌಕರರ ಸಾರಿಗೆ ಒಕ್ಕೂಟ ಮತ್ತು ಉಬರ್ ಮಂಗಳವಾರ ತಡರಾತ್ರಿ ಒಪ್ಪಂದ ಮಾಡಿಕೊಂಡಿವೆ. ಕೆಲಸಗಾರರ ಸಂಘಟನೆ ರಚಿಸುವುದು ಮತ್ತು ಕೆಲಸದ ಗುಣಮಟ್ಟ ಸುಧಾರಿಸುವ ಹಕ್ಕನ್ನು ಬೆಂಬಲಿಸಿದೆ. ರೈಡ್‌ಶೇರ್‌ ವ್ಯವಸ್ಥೆಗೆ ಸೂಕ್ತ ಮಾನದಂಡಗಳನ್ನು ರಚಿಸಿ ಚಾಲಕರ ವಲಯದಲ್ಲಿ ಹಲವು ಬದಲಾವಣೆ ತರಬೇಕು ಎಂದು ಉಬರ್ ಮತ್ತು ಕಾರ್ಮಿಕ ಒಕ್ಕೂಟವು ಜಂಟಿಯಾಗಿ ಆಸ್ಟ್ರೇಲಿಯನ್ ಸರ್ಕಾರವನ್ನು ಒತ್ತಾಯಿಸಿವೆ.

2009ರಲ್ಲಿ ಉಬರ್ ಪ್ರಾರಂಭವಾದಾಗಿನಿಂದ ವೇಗವಾಗಿ ಬೆಳೆದಿದೆ ಮತ್ತು ಪೂರ್ಣ ಸಮಯದ ಉದ್ಯೋಗದ ನಿರ್ಬಂಧಗಳಿಲ್ಲದೆ ಹಣ ಗಳಿಸಲು ಜನರಿಗೆ ಹೊಂದಿಕೊಳ್ಳುವ ಮಾರ್ಗವಾಗಿ ಪ್ರಚಾರವಾಗಿದೆ. ಆದರೆ ಉಬರ್ ಚಾಲಕರು ಎದುರಿಸುತ್ತಿರುವ ಪರಿಸ್ಥಿತಿಗಳು ಮತ್ತು ಅಪಾಯಗಳ ಬಗ್ಗೆ ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಯಾಗಿದೆ. ವಿಶೇಷವಾಗಿ ವಾಹನಗಳಿಗೆ/ ಆಹಾರಗಳಿಗೆ ಬೇಡಿಕೆ ಹೆಚ್ಚಾದಾಗ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಲಕರ ಸಾವಿನ ಪ್ರಮಾಣ ಹೆಚ್ಚಾಗಿತ್ತು. 

ಸಾರಿಗೆ ನೌಕರರ ಒಕ್ಕೂಟವು ನಡೆಸಿದ 2020ರ ಸಮೀಕ್ಷೆಯಲ್ಲಿ, 73 ಪ್ರತಿಶತದಷ್ಟು ಆಹಾರ ವಿತರಣಾ ಚಾಲಕರು, ಗಂಭೀರವಾಗಿ ಗಾಯಗೊಂಡಿದ್ದಾರೆ ಅಥವಾ ಕೆಲಸದ ವೇಳೆ ಸಾವನ್ನಪ್ಪಿದ್ದರು. ಹೀಗಾಗಿ ಚಾಲಕರ ಸುರಕ್ಷತೆಯು ಬರೀ ಆಸ್ಟ್ರೇಲಿಯ ಅಥವಾ ಉಬರ್‌ಗೆ ಮಾತ್ರ ಸೀಮಿತವಾಗಿಲ್ಲ" ಎಂದು ಕಂಡುಬಂದಿದೆ.

ಈ ಸುದ್ದಿ ಓದಿದ್ದೀರಾ? ಲಾರಿ ಚಾಲಕರ ಜೀವನ ಸುಧಾರಿಸಲು ಬೇಕಿದೆ ತಂತ್ರಜ್ಞಾನ

ಅಮೆರಿಕದಲ್ಲಿ 2017ರಿಂದ ಉಬರ್ ಮತ್ತು ಲಿಫ್ಟ್ ಸಂಸ್ಥೆಯ ಚಾಲಕರು ಸೇರಿದಂತೆ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ಚಾಲಕರು ಕೆಲಸದ ವೇಳೆ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯದ ನ್ಯಾಯಾಲಯವು ಕಳೆದ ವಾರ ಕ್ಸಿಯಾಜುನ್ ಚೆನ್ ಪ್ರಕರಣದಲ್ಲಿ ತೀರ್ಪು ನೀಡಿದ್ದು, “2020ರಲ್ಲಿ ಆಹಾರ ವಿತರಣಾ ಸೇವೆಗಾಗಿ ಕೆಲಸ ಮಾಡುವಾಗ ಆವರು ಹಂಗ್ರಿ ಪಾಂಡಾ ಸಂಸ್ಥೆಯ ಉದ್ಯೋಗಿಯಾಗಿದ್ದರು. ಗುತ್ತಿಗೆದಾರರಲ್ಲ” ಎಂದು ಉಲ್ಲೇಖಿಸಿದೆ. ಹೀಗಾಗಿ ಅವರ ಕುಟುಂಬಕ್ಕೆ 573,000 ಡಾಲರ್‌ರಷ್ಟು ಪರಿಹಾರ ಪಾವತಿ ನೀಡಲಾಯಿತು. ಇದು ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಚಾಲಕರ ಪರವಾಗಿ ಬಂದಿರುವ ತೀರ್ಪಾಗಿದೆ.

ಕಂಪನಿ ಮತ್ತು ಒಕ್ಕೂಟದ ನಡುವೆ ಎಲ್ಲಾ ಸಮಸ್ಯೆಗಳು ಬಗೆ ಹರಿಯದೆ ಇದ್ದರೂ, ಈಗಿನ ಒಪ್ಪಂದವು "ಕಾರ್ಮಿಕರ ರಕ್ಷಣೆಗೆ ನೆರವಾಗಲಿದೆ ಮತ್ತು ಕಾರ್ಯಪರಿಸರ ಸುಧಾರಿಸುತ್ತದೆ" ಎಂದು ಆಸ್ಟ್ರೇಲಿಯದಲ್ಲಿ ಉಬರ್‌ ಸಂಸ್ಥೆಯ ಜನರಲ್ ಮ್ಯಾನೇಜರ್ ಡೊಮ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್