ವಿಎಲ್‌ಸಿ ಮೀಡಿಯಾ ಪ್ಲೇಯರ್‌ ನಿರ್ಬಂಧಿಸಿದ ಕೇಂದ್ರ ಮಾಹಿತಿ ಸಚಿವಾಲಯ

VLC Media Player Banned India
  • ಭಾರತದಲ್ಲಿ ವಿಎಲ್‌ಸಿ ಮೀಡಿಯಾ ಸಾಫ್ಟ್‌ವೇರ್‌ಗೆ ನಿರ್ಬಂಧ
  • ವಿಎಲ್‌ಸಿ ಸಾಫ್ಟ್‌ವೇರ್‌ಗೆ ಸಂಬಂಧಿಸಿ ಸ್ಪಷ್ಟ ಮಾಹಿತಿ ದೊರಕಿಲ್ಲ

ಹೆಚ್ಚು ಕಂಪನಿಗಳು ಮತ್ತು ಅಧಿಕ ಬಳಕೆದಾರರು ಬಳಸುವ ಮೀಡಿಯಾ ಸಾಫ್ಟ್‌ವೇರ್‌ ಆಗಿರುವ ವಿಎಲ್‌ಸಿ ಪ್ಲೇಯರ್‌ ಅನ್ನು ಸೂಕ್ತ ಕಾರಣ ನೀಡದೆ ಕೇಂದ್ರ ಸರ್ಕಾರ ಭಾರತದಲ್ಲಿ ನಿರ್ಬಂಧಿಸಿದೆ. 

ಎರಡು ತಿಂಗಳ ಹಿಂದೆಯೇ ವಿಎಲ್‌ಸಿ ಮೀಡಿಯಾವನ್ನು ಭಾರತದ ಮಾಹಿತಿ ಸಚಿವಾಲಯ ನಿಷೇಧಿಸಿತ್ತು. ಆದರೆ ಇದೀಗ ಅದನ್ನು ಬಳಕೆದಾರರು  ಆ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. 

ಏನಿದು ವಿಎಲ್‌ಸಿ ಮೀಡಿಯಾ?

ಈ ಸಾಫ್ಟ್‌ವೇರ್‌ ಅನ್ನು ವಿಡಿಯೋಲಾನ್ ಸಂಸ್ಥೆ ಅಭಿವೃದ್ಧಿಪಡಿಸಿತ್ತು. ಪ್ರತ್ಯೇಕವಾಗಿ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿರುವ ವಿಡಿಯೋಗಳನ್ನು ತೆರೆಯಲು ಸಹಾಯ ಮಾಡುವ ಸಾಫ್ಟ್‌ವೇರ್‌ ಇದಾಗಿದ್ದು, ಮೂಲತಃ ಇದು ಪ್ಯಾರಿಸ್ ಮೂಲದ ಕಂಪನಿ. ಅಷ್ಟೇ ಅಲ್ಲದೆ, ಇದು ಎಲ್ಲ ಕಂಪ್ಯೂಟರ್‌ನಲ್ಲಿ ತಯಾರಕರೇ ಅಳವಡಿಸಿದ ಸಾಫ್ಟ್‌ವೇರ್‌. 

ಆದರೆ ಮಾಹಿತಿಗಳ ಪ್ರಕಾರ ವಿಎಲ್‌ಸಿ ಸಾಫ್ಟ್‌ವೇರ್‌ ಅನ್ನು ಚೀನಾ ದೇಶದ ಕೆಲವು ಹ್ಯಾಕರ್‌ಗಳು ಬಳಸುತ್ತಿರುವುದಾಗಿ ಕಂಡುಬಂದ ಕಾರಣ ಸೈಬರ್ ದಾಳಿ ತಡೆಯಲು ಭಾರತದ ಮಾಹಿತಿ ಸಚಿವಾಲಯ ಇದನ್ನು ನಿರ್ಬಂಧಿಸಿದೆ ಎಂದು ತಿಳಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿಯನ್ನು ಸರ್ಕಾರ ಸುದ್ದಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ.

ಇಂದಿಗೂ ಸರ್ಕಾರ ವಿಎಲ್‌ಸಿ ಸಾಫ್ಟ್‌ವೇರ್‌ಗೆ ಸಂಬಂಧಿಸಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಹಲವು ಬಳಕೆದಾರರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಸ್ತುತ, ನೋಡುವುದಾದರೆ ವಿಎಲ್‌ಸಿ ಸಾಫ್ಟ್‌ವೇರ್‌ ಅನ್ನು ಸರ್ಕಾರ ನಿರ್ಬಂಧಿಸಿದರೂ ಹಲವು ಬಳಕೆದಾರರು ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ. ಉಳಿದ ಬಳಕೆದಾರರಿಗೆ ಬಳಸಲು ಅನುಮತಿಸುತ್ತಿಲ್ಲ. ಜತೆಗೆ ಜಿಯೋ, ವೋಡಾಫೋನ್ ಮತ್ತು ಏರ್‌ಟೆಲ್‌ ಬಳಕೆದಾರರಿಗೆ ಇದು ಸಂಪೂರ್ಣವಾಗಿ ನಿರ್ಬಂಧವಾಗಿದೆ ಎಂದು ತಿಳಿದುಬಂದಿದೆ. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಸ್ಯಾಮ್‌ಸಂಗ್‌ ಫೋಲ್ಡ್ ಮತ್ತು ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ

2020ರಲ್ಲಿ, ಭಾರತ ಸರ್ಕಾರವು ಪಬ್‌ಜಿ ಗೇಮ್‌, ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌ ಮೊದಲಾಗಿ ನೂರಾರು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ವಾಸ್ತವವಾಗಿ, ಬಿಜಿಎಮ್ಐ ಎಂದು ಕರೆಯಲ್ಪಡುವ ಪಬ್‌ಜಿ ಗೇಮಿಂಗ್ ಮೊಬೈಲ್‌ನ ಆವೃತ್ತಿಯನ್ನು ಇತ್ತೀಚೆಗೆ ಭಾರತದಲ್ಲಿ ನಿಷೇಧಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಇದಕ್ಕೆ ಪ್ರತ್ಯೇಕ ಕಾರಣವಿದ್ದವು. ಆದರೆ ವಿಎಲ್‌ಸಿ ನಿರ್ಬಂಧಿಸಲು ಯಾವುದೇ ಕಾರಣವಿಲ್ಲ ಎಂದು ಬಳಕೆದಾರರು ಟೀಕಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್