ಕರ್ನಾಟಕದಲ್ಲಿ ಯಶಸ್ಸು ಕಂಡ ಮಾನವರಹಿತ ಯುದ್ಧ ವಿಮಾನ 

DRDO Aircraft Image
  • ಮಾನವ ರಹಿತ ವಿಮಾನ ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಲಿಸಲಿದೆ
  • ಮುಂದಿನ ದಿನಗಳಲ್ಲಿ ಇಂತಹ ಸಾಕಷ್ಟು ತಂತ್ರಜ್ಞಾನ ಬದಲಾವಣೆಗಳು ಆಗಲಿದೆ

ಕರ್ನಾಟಕದ ಚಿತ್ರದುರ್ಗದಲ್ಲಿ ದೇಶದ ಮೊದಲ ಮಾನವರಹಿತ ಯುದ್ಧ ವಿಮಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍‌ಡಿಒ) ಪರೀಕ್ಷೆ ಮಾಡಿದ್ದು ಯಶಸ್ವಿ ಕಂಡಿದೆ. 

ಶುಕ್ರವಾರ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ಏರೋನಾಟಿಕಲ್ ಪರೀಕ್ಷೆ ನಡೆಸಲಾಗಿದ್ದು, ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ವಿಮಾನ ಟೇಕ್ ಆಫ್, ವೇ ಪಾಯಿಂಟ್ ನ್ಯಾವಿಗೇಷನ್, ಮೃದು ಹಾರಾಟ ಒಳಗೊಂಡಂತೆ ಅತ್ಯುತ್ತಮ ಫಲಿತಾಂಶ ಕಂಡಿದೆ.

ಏನಿದರ ವಿಶೇಷತೆ?
ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಮತ್ತು ಡಿಆರ್‍‌ಡಿಒ ಅಡಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿರುವ ಮಾನವ ರಹಿತ ವಿಮಾನ ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗುತ್ತದೆ.

ಈ ವಿಮಾನ ಹಾರಾಟ ಪರೀಕ್ಷೆ ದೇಶದ ಯುದ್ಧ ವಿಮಾನ ತಂತ್ರಜ್ಞಾನ ಅಭಿವೃದ್ಧಿಗೆ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಕಷ್ಟು ತಂತ್ರಜ್ಞಾನ ಬದಲಾವಣೆಗಳು ಆಗಲಿದೆ ಎಂದು ಅಂದಾಜಿಸಲಾಗಿದೆ. 

ವೈಶಿಷ್ಟ್ಯಗಳು

  • ಇಂಧನ ದಕ್ಷತೆ ಮತ್ತು ರಕ್ಷಣೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ
  • ವಿಮಾನವು ತುಂಬಾ ಕಡಿಮೆ ಗಾಳಿ ಪ್ರತಿರೋಧವನ್ನು ನೀಡಲಿದೆ
  • ಇದು ವಿವಿಧ ಪ್ರತಿಫಲಿತ ವಿಭಾಗಗಳನ್ನು ಹೊಂದಿದ್ದು
  • ರೇಡಿಯೋ ತರಂಗಗಳನ್ನು  ಕಡಿಮೆ ಉಂಟುಮಾಡುತ್ತದೆ

"ಇದು ದೇಶದ ಹೆಮ್ಮೆಯ ವಿಷಯವಾಗಿದೆ, ಇದರಿಂದ ಮುಂದಿನ ದಿನಗಳಲ್ಲಿ ಸೇನೆ ಪಡೆಯ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡುವ ಮೂಲಕ ಆಭಿನಂದನೆ ಸಲ್ಲಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್