ವಾಟ್ಸ್ಆ್ಯಪ್‌ ʻವ್ಯೂ ಒನ್ಸ್ʼನಲ್ಲಿ ಸ್ಕ್ರೀನ್‌ಶಾಟ್‌ ನಿರ್ಬಂಧ | ವಾಬೀಟಾಇನ್‌ಫೋ ವರದಿ

Whatsapp Feature Image
  • ಗ್ರೂಪ್ ಸದಸ್ಯರ ಗರಿಷ್ಠ ಸಂಖ್ಯೆಯನ್ನು 512ಕ್ಕೆ ಹೆಚ್ಚಿಸಲಾಗಿದೆ
  • ವ್ಯೂ ಒನ್ಸ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ನಿರ್ಬಂಧಿಸಿದ ವಾಟ್ಸ್ಆ್ಯಪ್

ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸ್ಆ್ಯಪ್, ಇದೀಗ ಸ್ಕ್ರೀಶಾಟ್‌ಗಳನ್ನು ನಿರ್ಬಂಧಿಸಿದೆ. 

ಇತ್ತೀಚೆಗೆ ಬಳಕೆದಾರರ ಮಾಹಿತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ,  ಆದ್ದರಿಂದ ಮಾಹಿತಿಯ ಗೌಪ್ಯತೆ ಕಾಪಾಡಲು ವಾಟ್ಸ್ಆ್ಯಪ್ ಇನ್ನೂ ಮೂರು ನೂತನ ವೈಶಿಷ್ಟ್ಯವನ್ನು ಪರಿಚಯಿಸಿದೆ. 

ಈ ಸುದ್ದಿ ಓದಿದ್ದೀರಾ? ಜಾಗತಿಕವಾಗಿ ಗೂಗಲ್ ಸರ್ಚ್ ಎಂಜಿನ್‌ ಕೆಲಕಾಲ ಸ್ಥಗಿತ; ಬಳಕೆದಾರರಿಂದ ಆಕ್ರೋಶ 

ಈ ಹಿಂದೆ ʻವ್ಯೂ ಒನ್ಸ್ʼ (ಒಮ್ಮೆ ತೆರೆದು ನೋಡುವುದು) ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸ್ಆ್ಯಪ್, ಅದರಲ್ಲಿ ಸ್ಕ್ರೀನ್‌ಶಾಟ್‌ ತೆಗೆಯಬಹುದಾಗಿತ್ತು ಆದರೆ ಇದೀಗ ಮಾಡಿರುವ ನವೀಕರಣದ ನಂತರ, ಇನ್ನು ಮುಂದೆ ಬಳಕೆದಾರರು ʻವ್ಯೂ ಒನ್ಸ್ʼ ತೆರೆದ ಬಳಿಕ ಫೋಟೋ ಅಥವಾ ಸಂದೇಶಗಳಲ್ಲಿ ಸ್ಕ್ರೀನ್‌ಶಾಟ್‌ ತೆಗೆಯದ ಹಾಗೇ ನಿರ್ಬಂಧಿಸಿದೆ. ಇದರಿಂದ ಬಳಕೆದಾರರು ಯಾವುದೇ ತರಹದ ತಂತ್ರಜ್ಞಾನ ಬಳಸಿ ವಾಟ್ಸ್ಆ್ಯಪ್‌ನಲ್ಲಿ ಮಾಹಿತಿಯನ್ನು ಕದಿಯಲು ಅಸಾಧ್ಯ ಎಂದು ತಿಳಿಸಲಾಗಿದೆ. 

ಇದರ ಜತೆ ಬಳಕೆದಾರರ ಗೌಪ್ಯತೆಯನ್ನು ಕಾಪಾಡಲು ʻಇಂಟರ್‌ಲಾಕಿಂಗ್‌ ಲೇಯರ್ʼ ರಕ್ಷಣೆಯನ್ನು ವಾಟ್ಸ್ಆ್ಯಪ್ ಒಳಗೊಂಡಿದೆ, ಇದು ಇನ್ನಷ್ಟು ಹೆಚ್ಚು ಸಂದೇಶಗಳಿಗೆ ರಕ್ಷಣೆ ನೀಡುತ್ತದೆ. ಅಲ್ಲದೆ ಗ್ರೂಪ್ ಸದಸ್ಯರ ಗರಿಷ್ಠ ಸಂಖ್ಯೆಯನ್ನು 512ಕ್ಕೆ ಹೆಚ್ಚಿಸಲಾಗಿದೆ. ವಿಡಿಯೊ ಕಾಲ್‌ನಲ್ಲಿ ಬೇರೆಯವರು ಮಾತನಾಡುವುದನ್ನು, ಸಂದೇಶ ಕಳಿಸುವುದನ್ನು ಮ್ಯೂಟ್ ಮಾಡಬಹುದಾಗಿದೆ. 

ಈ ಅಪ್‌ಡೇಟ್‌ಗಳು ಬೀಟಾ ಆವೃತ್ತಿ ಅವರಿಗೆ ಮಾತ್ರ ಲಭ್ಯವಿದ್ದು, ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ಮಾರ್ಕ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್