
- ಗ್ರೂಪ್ ನಿರ್ವಾಹಕರು ಸದಸ್ಯರ ಸಂದೇಶಗಳನ್ನು ಅಳಿಸಬಹುದು
- ಭಾರತದಲ್ಲಿ ಬಿಡುಗಡೆಯಾದ ಒನ್ಪ್ಲಸ್ 10ಟಿ ಸ್ಮಾರ್ಟ್ಫೋನ್
ಎಆರ್ ಸ್ಮಾರ್ಟ್ ಗ್ಲಾಸ್ ಪರಿಚಯಿಸಿದ ಶಿಯೋಮಿ ಸಂಸ್ಥೆ

ಮೆಟಾ ವೇದಿಕೆಗೆ ಲಗ್ಗೆಯಿಡಲಿರುವ ಶಿಯೋಮಿ ಸಂಸ್ಥೆ ನೂತನ ಆಗ್ಮೆಂಟೆಡ್ ರಿಯಾಲಿಟಿ ಹೊಂದುವ ʻಮಿಜಿಯಾʼ ಹೆಸರಿನ 3ಡಿ ಗ್ಲಾಸ್ಗಳನ್ನು ಪರಿಚಯಿಸಲಿದೆ, ಸ್ನಾಪ್ಡ್ರಾಗನ್ 8 ಪ್ರೊಸೆಸರ್ ಗ್ಲಾಸ್ಗಳ ಜೊತೆಗೆ 3 ಜಿಬಿ ರಾಮ್ ಮತ್ತು 32 ಜಿಬಿ ಶೇಖರಣಾ ಸಾಮರ್ಥ್ಯವನ್ನು ಈ ಗ್ಲಾಸ್ ಹೊಂದಿವೆ. ಇದರ ಮೊತ್ತ ಭಾರತದಲ್ಲಿ ಸುಮಾರು ₹29,000ಯಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಲೈವ್ ಶಾಪಿಂಗ್ ವೈಶಿಷ್ಟ್ಯ ಸ್ಥಗಿತಗೊಳಿಸಿದ ಫೇಸ್ಬುಕ್

ಫೇಸ್ಬುಕ್ ಸದ್ಯಕ್ಕೆ ರೀಲ್ಸ್ ಮತ್ತು ವಿಡಿಯೋ ವಿಭಾಗವನ್ನು ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಲೈವ್ ಶಾಪಿಂಗ್ ವೈಶಿಷ್ಟ್ಯವನ್ನು ಕೆಲಕಾಲ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಈ ಲೈವ್ ಶಾಪಿಂಗ್ ವೈಶಿಷ್ಟ್ಯವು ಬಳಕೆದಾರರಿಗೆ ಆನ್ಲೈನ್ ಉದ್ಯಮ ವಹಿವಾಟಿಗೆ ಸಹಾಯ ಮಾಡುತ್ತಿತ್ತು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಫೀಚರ್ಗಳನ್ನು ಬಿಡುಗಡೆ ಮಾಡುವ ಮೂಲಕ ಇದನ್ನು ಪುನಃ ನವೀಕರಿಸಿ ತರುವುದಾಗಿ ಸಂಸ್ಥೆ ತಿಳಿಸಿದೆ.
ಗ್ರೂಪ್ ನಿರ್ವಾಹಕರು ಸದಸ್ಯರ ಸಂದೇಶಗಳನ್ನು ಅಳಿಸಬಹುದು; ವಾಬೀಟಾಇನ್ಫೋ ವರದಿ
📝 WhatsApp beta for Android 2.22.17.12: what's new?
— WABetaInfo (@WABetaInfo) July 29, 2022
WhatsApp is releasing a feature that lets group admins delete any message for everyone, available to some lucky beta testers!https://t.co/bBlPVKxWkQ
ವಾಟ್ಸ್ಆ್ಯಪ್ ಗ್ರೂಪ್ ನಿರ್ವಾಹಕರಿಗೆ ಸಂದೇಶ ಅಳಿಸುವ ನೂತನ ವೈಶಿಷ್ಟ್ಯ ಪರಿಚಯಿಸಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯುವ ಒಂದು ಪ್ರಯತ್ನ ಎಂದು ತಿಳಿಸಿದೆ. ಪ್ರಸ್ತುತ, ವಾಟ್ಸ್ಆ್ಯಪ್ ಫೀಚರ್ನಲ್ಲಿ ಗ್ರೂಪ್ ನಿರ್ವಾಹಕರು ತಮ್ಮ ಸಂದೇಶಗಳನ್ನು ಮಾತ್ರ ಅಳಿಸುವ ಅನುಮತಿ ನೀಡಲಾಗಿತ್ತು. ಆದರೆ ಶೀಘ್ರದಲ್ಲಿ ಎಲ್ಲ ಸಂದೇಶಗಳನ್ನು ಅಳಿಸುವ ನೂತನ ಆಯ್ಕೆಯನ್ನು ನೀಡಲಾಗುವುದು ಎಂದು ವಾಬೀಟಾಇನ್ಫೋ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಗೂಗಲ್ ಡೂಡಲ್ ಕೊಡುಗೆ
ಭಾರತದಲ್ಲಿ ಬಿಡುಗಡೆಯಾದ ಒನ್ಪ್ಲಸ್ 10ಟಿ ಸ್ಮಾರ್ಟ್ಫೋನ್
ಒನ್ಪ್ಲಸ್ ಕಂಪನಿಯು ತನ್ನ ನೂತನ ಸ್ಮಾರ್ಟ್ಫೋನ್ ಅವೃತ್ತಿಯಾದ 10ಟಿಯನ್ನು ಆಧಿಕೃತ ಯೂಟ್ಯೂಬ್ ಖಾತೆಯಲ್ಲಿ ಪರಿಚಯಿಸಿದೆ. ಇದೀಗ ಭಾರತದಲ್ಲಿ ಕೂಡ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಬೆಲೆ ₹49,999 ದಿಂದ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಆಸಕ್ತರು ಅಮೆಜಾನ್ನಲ್ಲಿ ಖರೀದಿಸಬಹುದು.
ವೈಶಿಷ್ಟ್ಯಗಳು
ಪ್ರೊಸೆಸರ್ - ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 8+ ಜನರೇಷನ್
ಪರದೆ - 6.7 ಇಂಚಿನ ಪೂರ್ಣ ಎಚ್ಡಿ, 394 ಪಿಪಿಐ
ಮೆಮೊರಿ - 12 ಜಿಬಿ ರಾಮ್, 256 ಜಿಬಿ ಸಂಗ್ರಹಣೆ
ಬ್ಯಾಟರಿ - 4800 ಎಂಎಎಚ್
ಹಿಂಬದಿಯ ಕ್ಯಾಮೆರಾ - 50 ಎಂಪಿ + 16 ಎಂಪಿ + 2 ಎಂಪಿ ಕ್ಯಾಮೆರಾ
ಮುಂಭಾಗದ ಕ್ಯಾಮೆರಾ – 34 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹49,999