ವಾರದ ಟೆಕ್ ನೋಟ | ಫೋನ್‌ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ ನಥಿಂಗ್ ಸ್ಮಾರ್ಟ್‌ಫೋನ್‌

Nothing 11 Image
  • ವಿಂಡೋಸ್ 8ಕ್ಕೆ ವಿದಾಯ ಹೇಳಿದೆ ಮೈಕ್ರೋಸಾಫ್ಟ್ ಸಂಸ್ಥೆ 
  • ಭಾರತಕ್ಕೆ ಲಗ್ಗೆಯಿಟ್ಟ ಪೋಕೋ ಎಫ್4 5ಜಿ ಸ್ಮಾರ್ಟ್‌ಫೋನ್‌  

ಫೋನ್‌ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ ನಥಿಂಗ್ ಸ್ಮಾರ್ಟ್‌ಫೋನ್‌

ಮೊಬೈಲ್ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆಯ ನಿರೀಕ್ಷೆ ಮೂಡಿಸಿದ ನಥಿಂಗ್ ಸ್ಮಾರ್ಟ್ ಫೋನ್‌ ಈಗ ಎಲ್ಲ ಫೋನ್‌ ಪ್ರಿಯರನ್ನು ಆಕರ್ಷಿಸುತ್ತಿದೆ. ಸದ್ಯಕ್ಕೆ ಮೊಬೈಲ್ ಮಾರುಕಟ್ಟೆ ಆಳುತ್ತಿರುವ ಐಫೋನ್, ಶವೋಮಿ ಮತ್ತು ಸ್ಯಾಮ್ಸಂಗ್‌ನಂತಹ ಪ್ರಸಿದ್ಧ ಕಂಪನಿಗಳಿಗೆ ಪೈಪೋಟಿ ನೀಡಲಿದೆ. ಮುಂದಿನ ತಿಂಗಳು ಜುಲೈ 12ರಂದು ರಾತ್ರಿ 8:30ಕ್ಕೆ ನಥಿಂಗ್ ಸ್ಮಾರ್ಟ್‌ಫೋನ್‌ ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಭಾರತದಲ್ಲಿ ಪ್ರಿ ಬುಕಿಂಗ್ ಕೂಡ ಶುರುವಾಗಿದೆ. ಅಚ್ಚರಿ ಎಂದರೆ ಪ್ರಿ ಆರ್ಡರ್ ಮಾಡಬೇಕಾದರೆ ಪಾಸ್ ಪಡೆಯಬೇಕಂತೆ.

ಹೆಚ್ಚಿನ ಮಾಹಿತಿಗಾಗಿ ಓದಿ - ಭಾರತಕ್ಕೆ ಲಗ್ಗೆಯಿಟ್ಟ ನಥಿಂಗ್ ಸ್ಮಾರ್ಟ್ ಫೋನ್

Image
windows 8 Image

ವಿಂಡೋಸ್ 8ಕ್ಕೆ ವಿದಾಯ ಹೇಳಿದೆ ಮೈಕ್ರೋಸಾಫ್ಟ್ ಸಂಸ್ಥೆ 

ವಿಂಡೋಸ್ 8ನ್ನು ನಿಲ್ಲಿಸಲು ಮೈಕ್ರೋಸಾಫ್ಟ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಮತ್ತು ಬಳಕೆದಾರರಿಗೆ ಎಚ್ಚರಿಕೆ ಕಳುಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೈಕ್ರೋಸಾಫ್ಟ್ ಪ್ರಕಾರ, ಕಂಪನಿಯು 10 ಜನವರಿ 2023ರ ವೇಳೆಗೆ ವಿಂಡೋಸ್ ಆವೃತ್ತಿಯನ್ನು ನಿಲ್ಲಿಸುತ್ತಿದೆ. ಬಳಕೆದಾರರು ಹಳೆಯ ಆವೃತ್ತಿ ಬಳಸಿದಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಯಾವುದೇ ಭದ್ರತೆ ನೀಡುವುದಿಲ್ಲ ಎಂದಿದೆ. ಹೊಸ ಆವೃತ್ತಿಗೆ ನವೀಕರಿಸಿದಲ್ಲಿ ನೀವು ಇನ್ನೂ ಹೆಚ್ಚು ಭದ್ರತಾ ಮತ್ತು ಇತರ ಗುಣಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತೀರಿ ಎಂದು ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ. 

Image
Poco F4 Smartphone Image

ಭಾರತಕ್ಕೆ ಲಗ್ಗೆಯಿಟ್ಟ ಪೋಕೋ ಎಫ್4 5ಜಿ ಸ್ಮಾರ್ಟ್‌ಫೋನ್‌  

ಪ್ರತಿ ವಾರ ಕಡಿಮೆ ಎಂದರೂ ಮೂರರಿಂದ ನಾಲ್ಕು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತವೆ. ಅದೇ ರೀತಿ ಈ ಬಾರೀ ಪೋಕೋ ಸಂಸ್ಥೆ ನೂತನ ವೈಶಿಷ್ಟ್ಯ ಮತ್ತು ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ. ಉತ್ತಮ ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್ ಕೂಡ ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. 

ವೈಶಿಷ್ಟ್ಯಗಳು 

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 
ಪರದೆ - 6.67 ಇಂಚಿನ ಪೂರ್ಣ ಎಚ್‌ಡಿ
ಮೆಮೊರಿ - 12 ಜಿಬಿ ರಾಮ್, 256 ಜಿಬಿ ಸಂಗ್ರಹಣೆ
ಬ್ಯಾಟರಿ - 4500 ಎಂಎಎಚ್ 
ಹಿಂಬದಿಯ ಕ್ಯಾಮೆರಾ - 64 ಎಂಪಿ + 8 ಎಂಪಿ + 2 ಎಂಪಿ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 20 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹27,999

ನಿಮಗೆ ಏನು ಅನ್ನಿಸ್ತು?
0 ವೋಟ್