ವಾರದ ಟೆಕ್ ನೋಟ | ʻಸ್ಟಾರ್ಟ್ಅಪ್ ಸ್ಕೂಲ್ʼ ಆರಂಭಕ್ಕೆ ಮುಂದಾದ ಗೂಗಲ್ ಸಂಸ್ಥೆ

Google India Image
  • ಇದೇ ತಿಂಗಳು ಜುಲೈ 12ರಿಂದ ನಥಿಂಗ್ ಮೊಬೈಲ್ ಲಭ್ಯ 
  • ಶೀಘ್ರದಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ ಒನ್‌ಪ್ಲಸ್‌ ನಾರ್ಡ್ 2ಟಿ

ವಾಟ್ಸ್ಆ್ಯಪ್ ಸಂದೇಶಗಳ ಹಿಸ್ಟರಿ ಸಿಂಕ್ ಫೀಚರ್‌

ಮೆಟಾ ಮಾಲಿಕತ್ವದ ವಾಟ್ಸ್ಆ್ಯಪ್ ಹಲವು ದಿನಗಳಿಂದ ಹೆಚ್ಚು ಫೀಚರ್‌ಗಳನ್ನು ಬೀಟಾ ಆವೃತಿಯಲ್ಲಿ ಪರೀಕ್ಷಿಸುತ್ತಿದೆ. ಇದೀಗ ಸಂದೇಶಗಳನ್ನು ಹಿಸ್ಟರಿ ಜೊತೆಗೆ ಸಿಂಕ್ ಮಾಡುವ ನೂತನ ಬದಲಾವಣೆ ತರಲು ಮುಂದಾಗಿದೆ. 

ಇದಕ್ಕೆ ಸಂಬಂಧಿಸಿ ಸ್ಕ್ರೀನ್ ಶಾಟ್‌ಗಳು ಮತ್ತು ಮಾಹಿತಿಯನ್ನು ವಾಬೀಟಾಇನ್‌ಪೋ ಸಂಸ್ಥೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೀಚರ್‌ನಿಂದ ಬಳಕೆದಾರರು ತಮ್ಮ ವಾಟ್ಸ್ಆ್ಯಪ್‌ನಲ್ಲಿ ಮಾಡಿದ ಹಳೆಯ ಸಂದೇಶಗಳು ಒಳಗೊಂಡಂತೆ ಎಲ್ಲ ಚಾಟ್ಸ್‌ಗಳನ್ನು ಹಿಸ್ಟರಿ ಜೊತೆ ಸಿಂಕ್ ಮಾಡಬಹುದು ಎಂದು ತಿಳಿಸಲಾಗಿದೆ. 

Image
Nothing 11 Image

ಜುಲೈ 12ರಿಂದ ನಥಿಂಗ್ ಮೊಬೈಲ್ ಗ್ರಾಹಕರಿಗೆ ಲಭ್ಯ

ಬಾರಿ ಬೇಡಿಕೆಯಲ್ಲಿ ಮುನ್ನುಗುತ್ತಿರುವ ನಥಿಂಗ್ ಸ್ಮಾರ್ಟ್‌ಪೋನ್‌ ಇದೇ ತಿಂಗಳು ಜುಲೈ 12ರಂದು ಭಾರತದಲ್ಲಿ ಗ್ರಾಹಕರ ಕೈಗೆ ಸಿಗಲಿದೆ, ಜೊತೆಗೆ ʻನಥಿಂಗ್ ಇಯರ್ ಬಡ್ʼ ಕೂಡ ಬಿಡುಗಡೆಯಾಗಲಿದೆ. ಇದರ ಮೊತ್ತ ₹8000 ಸಾವಿರವಿರಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೆ ಈ ನಥಿಂಗ್ ಸ್ಮಾರ್ಟ್‌ಪೋನ್ ಬೆಲೆ ₹30,000 ಸಾವಿರ. ಆಸಕ್ತರು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿ ಮಾಡುವವರಿಗೆ ಫ್ಲಿಪ್‌ಕಾರ್ಟ್‌ ₹2000 ರಿಯಾಯಿತಿ ಕೂಡ ನೀಡಲಿದೆ. 

Image
Google Startup Image

ʻಸ್ಟಾರ್ಟ್ಅಪ್ ಸ್ಕೂಲ್ʼ ಶುರು ಮಾಡಲು ಮುಂದಾದ ಗೂಗಲ್

ಪ್ರತಿ ವರ್ಷ ಸಾವಿರಾರು ಸ್ಟಾರ್ಟ್ಅಪ್‌ಗಳು ಆರಂಭವಾದರೂ ವರ್ಷದ ಅಂತ್ಯದಲ್ಲಿ ಹಲವು ಸ್ಟಾರ್ಟ್ಅಪ್ ಸಂಸ್ಥೆಗಳು ಆರಂಭಿಕ ನಷ್ಟ ಅನುಭವಿಸುತ್ತವೆ. ಇದನೆಲ್ಲ ಸರಿದೂಗಿಸಲು ಗೂಗಲ್ ಸಂಸ್ಥೆ ನೂತನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ʻಸ್ಟಾರ್ಟ್ಅಪ್ ಸ್ಕೂಲ್ʼ ಎಂಬ ಯೋಜನೆ ಶುರು ಮಾಡಲು ಮುಂದಾಗಿದೆ. ಈ ಶಾಲೆಯು ಭಾರತದ ಅನೇಕ ಮೂಲೆಯಲ್ಲಿ ಆರಂಭವಾಗಲಿದೆ. ಭಾಗವಹಿಸುವ ಆಸಕ್ತರು ಇದರಲ್ಲಿ ಭಾಗಿಯಾಗಬಹುದು ಮತ್ತು ಇದು ಎರಡು ತಿಂಗಳ ಕಾರ್ಯಗಾರ ಎಂದು ಗೂಗಲ್ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

Image
Oneplus Nord 2T Image

ಶೀಘ್ರದಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ ಒನ್‌ಪ್ಲಸ್‌ ನಾರ್ಡ್ 2ಟಿ

ಒನ್‌ಪ್ಲಸ್‌ ತಯಾರಕರು ಇತ್ತೀಚೆಗೆ ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ 'ಒನ್‌ಪ್ಲಸ್‌ ನಾರ್ಡ್ 2' ಬಿಡುಗಡೆ ಮಾಡುವ ಮೂಲಕ ಸುದ್ದಿ ಮಾಡಿತ್ತು. ಇದೀಗ ಅದಕ್ಕೆ ಸಂಬಂಧಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು 'ಒನ್‌ಪ್ಲಸ್‌ ನಾರ್ಡ್ 2'ನ ನವೀಕೃತ ರೂಪವಾದ ಟಿ ಸಿರೀಸ್ ಬಿಡುಗಡೆ ಮಾಡಲು ಯೋಚಿಸುತ್ತಿದೆ. ಇದು ಹಲವು ಫೀಚರ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ಈ ಸ್ಮಾರ್ಟ್‌ಪೋನ್‌ ಆನ್‌ಲೈನ್‌ ಅಥವಾ ಒನ್‌ಪ್ಲಸ್‌ ಸ್ಟೋರ್‌ನಲ್ಲಿ ಲಭ್ಯವಿರಲಿದೆ ಮತ್ತು ಇದರ ಮೊತ್ತ ₹28,999 ಸಾವಿರವಿರಲಿದೆ ಎಂದು ಒನ್‌ಪ್ಲಸ್‌ ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್