
- ಅತಿ ಕಡಿಮೆ ದರದಲ್ಲಿ ʻರಿಯಲ್ಮೀ ನಾರ್ಜೋ 30ಎʼ ಲಭ್ಯ
- ಪೇಟಿಎಂನಲ್ಲಿ ಮೊಬೈಲ್ ರಿಚಾರ್ಜ್ ಮಾಡಿದರೆ ಶುಲ್ಕ ಖಡಿತ

ನಮ್ಮ ಮೆಟ್ರೋ ಮಂದಿಗೆ ಶುಭ ಸುದ್ದಿ; ಸೈಕಲ್ ಕೊಂಡೊಯ್ಯಲು ಸಿಕ್ಕಿದೆ ಅನುಮತಿ
ಮೆಟ್ರೋ ಬಳಕೆದಾರರಿಗೆ ಬಿಎಂಆರ್ಸಿಎಲ್ ನೀಡಿದೆ ಸಿಹಿ ಸುದ್ದಿ. ಇನ್ಮುಂದೆ ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯುವ ಹೊಸ ನಿಯಮ ಪರಿಚಯಿಸಿದೆ. ಪೋಲ್ಡಿಂಗ್ ಸೈಕಲ್ ಅನ್ನು ಮೆಟ್ರೋದ ಕೊನೆಯ ಬೋಗಿಯಲ್ಲಿ ಕೊಂಡೊಯ್ಯುವ ಅನುಮತಿ ನೀಡಲಾಗಿದೆ. 60 ಮಿಲಿ ಮೀಟರ ರಿಂದ 45 ಮಿಲಿ ಮೀಟರ್ ಹೊಂದಿರುವ ಹದಿನೈದು ಕೆಜಿ ತೂಕದ ಸೈಕಲ್ ಕೊಂಡೊಯ್ಯಬಹುದು.
ಹಲವು ಸಂಘ ಸಂಸ್ಥೆಗಳು ಸೈಕಲ್ ರವಾನಿಸಲು ಅವಕಾಶ ಕೊಡುವಂತೆ ಹಲವು ಬಾರಿ ಮೆಟ್ರೋಗೆ ಮನವಿ ಮಾಡಿದ್ದು, ಅದಕ್ಕೆ ಒಪ್ಪಿದ ಬಿಎಂಆರ್ಸಿಎಲ್ ಇದೀಗ ಅನುಮತಿಸಿದೆ. ಅಷ್ಟೇ ಅಲ್ಲದೆ ವಾಯು ಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆಗೆ ಈ ಮೂಲಕ ಪರಿಹಾರ ಸಿಗಲಿದೆ.

ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಈಗ 500ಕ್ಕೂ ಅಧಿಕ ಸದಸ್ಯರನ್ನು ಆಹ್ವಾನಿಸಲು ಅವಕಾಶ
ವಾಟ್ಸ್ಆ್ಯಪ್ ತನ್ನ ಗ್ರೂಪಿನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಗರಿಷ್ಠ ಮಿತಿ 256 ಇದ್ದು, ಅದನ್ನು ಈಗ ದುಪ್ಪಟ್ಟು ಮಾಡಲಾಗಿದೆ. ಅಂದರೆ ಇನ್ನು ಮುಂದೆ ವಾಟ್ಸ್ಆ್ಯಪ್ನಲ್ಲಿ 512 ಸದಸ್ಯರನ್ನು ಗ್ರೂಪಿಗೆ ಸೇರಿಸಬಹುದಾಗಿದೆ. ಇತ್ತೀಚೆಗೆ ಬಂದ ವಾಟ್ಸ್ಆ್ಯಪ್ ವರದಿಯ ಪ್ರಕಾರ ಗ್ರೂಪ್ ಸಂಖ್ಯೆಯ ಜೊತೆಗೆ ಅನೇಕ ವೈಶಿಷ್ಟ್ಯ ಸೇರ್ಪಡಿಸಲಾಗಿದೆ ಹಾಗೂ ಈ ಸೌಲಭ್ಯವು ಐಓಎಸ್, ಆಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿರಲಿದೆ ಎಂದು ʻವಾಬೀಟಾಇನ್ಫೊʼ ಸಂಸ್ಥೆ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಐಟಿ ಹೊಸ ನಿಯಮ | ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶವೇನು?

ಅತಿ ಕಡಿಮೆ ದರದಲ್ಲಿ ʻರಿಯಲ್ಮೀ ನಾರ್ಜೋ 30ಎʼ ಲಭ್ಯ
ರಿಯಲ್ಮೀ ಪರಿಚಯಿಸಿದ ನಾರ್ಜೋ ಸಿರೀಸ್ನಲ್ಲೇ ಈ ಸ್ಮಾರ್ಟ್ಪೋನ್ ಅತ್ಯುತ್ತಮ. ಈ ಮೊಬೈಲ್ ನಿಮಗೆ ಹತ್ತು ಸಾವಿರದೊಳಗೆ ಲಭ್ಯ . 4ಜಿಬಿ ರಾಮ್ ಮತ್ತು 64ಜಿಬಿ ಸಂಗ್ರಹಣೆಯೊಂದಿಗೆ ಮೀಡಿಯಾ ಟೆಕ್ ವೈಶಿಷ್ಟ್ಯ ಮತ್ತು ಚಿಪ್ಸೆಟ್ ಆಕ್ಟಾ- ಕೋರ್ ಸಿಪಿಯುವನ್ನು ಹೊಂದಿದೆ. ʻಕಾಲ್ ಆಫ್ ಡ್ಯೂಟಿʼಯಂತಹ ಆಟಗಳನ್ನು ಆಡುವ ಸಾಮರ್ಥ್ಯವನ್ನು ಈ ಸ್ಮಾರ್ಟ್ಪೋನ್ ಒಳಗೊಂದಿದೆ. 13MP ಪ್ರೈಮರಿ ಕ್ಯಾಮರಾದ ಲೆನ್ಸ್ ಜೊತೆಗೆ ಉತ್ತಮ- ಬೆಳಕಿನ ಸೌಲಭ್ಯ ಕೂಡ ಇದರಲ್ಲಿ ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ದೃಶ್ಯಗಳನ್ನು ಶೂಟ್ ಮಾಡುವ ಸಾಮರ್ಥ್ಯದ ಜೊತೆಗೆ 6,000 ಎಂ.ಏ.ಎಚ್ ಬ್ಯಾಟರಿ ಮತ್ತು 6.5 ಇಂಚಿನ ಪರದೆಯನ್ನು ನೀಡುತ್ತದೆ.

ಪೇಟಿಎಂನಲ್ಲಿ ಮೊಬೈಲ್ ರಿಚಾರ್ಜ್ ಮಾಡಿದರೆ ಶುಲ್ಕ
ಪೇಮೆಂಟ್ ಮಾಡುವ ಎಲ್ಲ ಅಪ್ಲಿಕೇಶನ್ ನಿಧಾನವಾಗಿ ಶುಲ್ಕ ವಿಧಿಸುವ ಕಡೆಗೆ ವಾಲುತ್ತಿವೆ. ಈಗ ಬಳಕೆದಾರರು ಮಾಡುವ ಯಾವುದೇ ರಿಚಾರ್ಜ್ಗೆ ಶುಲ್ಕ ವಿಧಿಸಲಾಗುವುದು ಎಂದು ಪೇಟಿಎಂ ಸಂಸ್ಥೆ ವರದಿ ಮಾಡಿದೆ. ಈ ವೈಶಿಷ್ಟ್ಯ ಶೀಘ್ರದಲ್ಲೇ ಎಲ್ಲ ಬಳಕೆದಾರರ ಸ್ಮಾರ್ಟ್ಪೋನ್ಗಳಲ್ಲಿ ಲಭ್ಯ ಎಂದು ಘೋಷಿಸಿದೆ. ಬರೀ ಪೇಟಿಎಂ ಮಾತ್ರವಲ್ಲ, ಎಲ್ಲ ರೀತಿಯ ಪಾವತಿ ವಹಿವಾಟು ಮಾಡುವ ಅಪ್ಲಿಕೇಶನ್ಗಳು ಶುಲ್ಕ ವಿಧಿಸುವ ನಿರ್ಧಾರ ತೆಗೆದುಕೊಂಡಿವೆ.