ವಾರದ ಟೆಕ್ ನೋಟ | ಸ್ನಾಪ್‌ಚಾಟ್‌ ಶೀಘ್ರದಲ್ಲೇ ಪ್ರೀಮಿಯಂ ಕಡೆಗೆ 

Snapchat Image
  • ʻಚಾನೆಲ್ ಸ್ವಿಚರ್ʼ ಎಂಬ ನೂತನ ವೈಶಿಷ್ಟ್ಯ ಪರೀಕ್ಷಿಸುತ್ತಿದೆ ಟ್ವಿಚ್ ಸಂಸ್ಥೆ
  • ಜುಲೈ 5ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಆಸುಸ್ ರಾಗ್ 6 

ವಾಟ್ಸ್ಆ್ಯಪ್ ಈಗ ಆನ್‌ಲೈನ್‌ ಸ್ಥಿತಿ ಮರೆಮಾಡಲು ಅನುಮತಿಸಲಿದೆ

ವಾಟ್ಸ್ಆ್ಯಪ್ ಬಳಕೆದಾರರಿಗೆ ತಮ್ಮ ಆನ್‌ಲೈನ್‌ ಸ್ಥಿತಿ ಮರೆಮಾಡಲು ಅನುಮತಿಸಲಿದೆ. ವಾಬೀಟಾಇನ್ಪೋ ಸಂಸ್ಥೆ ಟ್ವಿಟರ್ ಖಾತೆಯಲ್ಲಿ ಸ್ಕ್ರೀನ್‌ಶಾಟ್‌ ಹಂಚಿಕೊಳ್ಳಲಾಗಿದೆ. ಸದ್ಯಕ್ಕೆ ಈ ವೈಶಿಷ್ಟ್ಯವು ಪರೀಕ್ಷೆಯ ಹಂತದಲ್ಲಿದೆ ಎಂದು ತಿಳಿಸಿದೆ. ಇದರ ಜೊತೆಗೆ ಹಲವು ವೈಶಿಷ್ಟ್ಯದೊಂದಿಗೆ ಅಪ್ಲಿಕೇಶನ್‌ನ್ನು ನವೀಕರಣ ಮಾಡಲು ಯೋಚಿಸುತ್ತಿದೆ. 

ಈ ವೈಶಿಷ್ಟ್ಯವು ಇನ್ನೂ ಬಳಕೆದಾರರಿಗೆ ಲಭ್ಯವಿಲ್ಲ, ಏಕೆಂದರೆ ಇನ್ನೂ ಅಭಿವೃದ್ಧಿ ಹಂತದಲ್ಲಿದೆ, ಮೆಟಾ ಮತ್ತು ವಾಟ್ಸ್ಆ್ಯಪ್ ಇದನ್ನು ಬೀಟಾದಲ್ಲಿ ಯಾವಾಗ ಸೇರಿಸಲು ಯೋಜಿಸಿದೆ ಎಂಬುದರ ಕುರಿತು ಇನ್ನೂ ಯಾವುದೇ ವಿವರಗಳಿಲ್ಲ.

Image
Twitcher Image

ʻಟ್ವಿಚ್ ಚಾನೆಲ್ ಸ್ವಿಚರ್ʼ ಎಂಬ ನೂತನ ವೈಶಿಷ್ಟ್ಯ ಪರೀಕ್ಷಿಸುತ್ತಿದೆ ಟ್ವಿಚ್ ಸಂಸ್ಥೆ

ಜನಪ್ರಿಯ ಲೈವ್ ಸ್ಟ್ರೀಮಿಂಗ್ ಮತ್ತು ಮನರಂಜನಾ ವೇದಿಕೆಯಾದ ಟ್ವಿಚ್ ಹೊಸ ವೈಶಿಷ್ಟ್ಯ ಅನ್ವೇಷಿಸಲು ಸಜ್ಜಾಗಿದೆ. ಈ ನೂತನ ಬದಲಾವಣೆಯನ್ನು ʻಚಾನಲ್ ಸ್ವಿಚರ್ʼ ಎಂದು ಕರೆಯಲಾಗುತ್ತದೆ. ಬಳಕೆದಾರರು ಸಿನಿಮಾಗಳನ್ನು ವೀಕ್ಷಿಸಲು ಹುಡುಕುವ ಮೊದಲು ವಿಭಿನ್ನ ಸ್ಟ್ರೀಮ್‌ಗಳ ಪೂರ್ವವೀಕ್ಷಣೆಗಳ ಅಥವಾ ಸಿನಿಮಾ ಟ್ರೈಲರ್‌ ನೋಡುವ ಸಾಮರ್ಥ್ಯ ಹೊಂದಿರುತ್ತಾರೆ. ಈ ವೈಶಿಷ್ಟ್ಯ ಬಳಸುವಾಗ ಬಳಕೆದಾರರಿಗೆ ಯಾವುದೇ ಜಾಹೀರಾತು ಕಾಣುವುದಿಲ್ಲ ಎಂದು ಸಂಸ್ಥೆ ವರದಿ ಮಾಡಿದೆ. 

Image
Twitter Plus Image

ಸ್ನಾಪ್‌ಚಾಟ್‌ ಶೀಘ್ರದಲ್ಲೇ ಪ್ರೀಮಿಯಂ ಕಡೆಗೆ

ಯುವಕ- ಯುವತಿಯರ ಅಚ್ಚುಮೆಚ್ಚಾದ ಪೋಟೋ ಕ್ಲಿಕ್ ಮಾಡಿ ಪೋಸ್ಟ್ ಮಾಡುವ ಅಪ್ಲಿಕೇಶನ್ ಆದ ಸ್ನಾಪ್‌ಚಾಟ್‌, ಈಗ ಪ್ರೀಮಿಯಂ ಕಡೆಗೆ ಸಾಗುತ್ತಿದೆ. ಇದೇ ಮುಂದಿನ ವಾರದಿಂದ ಈ ವೈಶಿಷ್ಟ್ಯವು ಬಳಕೆದಾರರಿಗೆ ಲಭ್ಯವಿದ್ದು, ಈ ಬದಲಾವಣೆಗೆ ʻಸ್ನಾಪ್‌ಚಾಟ್‌ ಪ್ಲಸ್ʼ ಎಂದು ನಾಮಕರಣ ಮಾಡಲಾಗಿದೆ ಮತ್ತು ಈ ಸೌಲಭ್ಯ ಅನುಭವಿಸಲು ಪ್ರತಿ ತಿಂಗಳು ₹315 ಪಾವತಿಸಿ ಚಂದಾದಾರರಾಗಬೇಕಿದೆ.

Image
Asus Rog 6 Image

ಜುಲೈ 5ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಆಸುಸ್ ರಾಗ್ 6 

ಇತ್ತೀಚಿಗೆ ಅಷ್ಟೇ ಆಸುಸ್ 5 ಸ್ಮಾರ್ಟ್‌ಪೋನ್‌ ಪರಿಚಯಿಸಿದ ಆಸುಸ್ ಕಂಪನಿ, ಇದೀಗ ಅದರ ನವೀಕರಣ ರೂಪವಾದ ಆಸುಸ್ ರಾಗ್ 6ನ್ನು ಭಾರತದಲ್ಲಿ ಜುಲೈ 5ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಪೊನ್‌ ಕಾರ್ಯಗಳ ಕುರಿತು ಸಂಪೂರ್ಣ ವಿವರವನ್ನು ಕಂಪನಿಯು ತಮ್ಮ ಯೂಟ್ಯೂಬ್ ಖಾತೆಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಆಸುಸ್ ತನ್ನ ಮುಂದಿನ ಗೇಮಿಂಗ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

ವೈಶಿಷ್ಟ್ಯಗಳು 

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ ಜನ್ 1 ಚಿಪ್ಸೆಟ್
ಪರದೆ - 6.78 ಇಂಚಿನ ಪೂರ್ಣ ಎಚ್ಡಿ
ಮೆಮೊರಿ - 16 ಜಿಬಿ ರಾಮ್, 1 ಟಿಬಿ ಸಂಗ್ರಹಣೆ
ಬ್ಯಾಟರಿ -  6,000 ಎಂಎಎಚ್ 
ಹಿಂಬದಿಯ ಕ್ಯಾಮೆರಾ - 64 ಎಂಪಿ + 16 ಎಂಪಿ + 5 ಎಂಪಿ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 24 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹59,999

ನಿಮಗೆ ಏನು ಅನ್ನಿಸ್ತು?
1 ವೋಟ್