ವಾರದ ಟೆಕ್ ನೋಟ | ಯಾವುದೇ ದಾಖಲೆ ನೀಡದೆಯೇ ಸಾಲ ಕೊಡಲಿದೆ ವಾಟ್ಸ್‌ಆ್ಯಪ್

Whatsapp Pay Image
  • ಇದೇ ವರ್ಷ ಆಗಸ್ಟ್‌ನಲ್ಲಿ 25 ನಗರಗಳಿಗೆ ಬರಲಿದೆ 5ಜಿ
  • ಭಾರತಕ್ಕೆ ಲಗ್ಗೆ ಇಟ್ಟ ಐಕ್ಯೂಒಓ 5ಜಿ ಸ್ಮಾರ್ಟ್ ಪೋನ್ 
Image
Microsoft Explorer Image

ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನ್ನು ನವೀಕರಿಸಿದ ಮೈಕ್ರೋಸಾಫ್ಟ್ ಸಂಸ್ಥೆ

ಮೈಕ್ರೋಸಾಫ್ಟ್ ಕಂಪನಿಯು ತನ್ನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನ್ನು ಜೂನ್ 15ರಂದು ಸ್ಥಗಿತಗೊಳಿಸಿದೆ. ಕಳೆದ ವರ್ಷ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನ ಸ್ಥಗಿತ  ಘೋಷಿಸಿದ ನಂತರ ಹಲವು ಪರಿವರ್ತನೆ ಮತ್ತು ಸಾಫ್ಟ್‌ವೇರ್‌ ನವೀಕರಣ ಮಾಡಲು ಮುಂದಾಗಿದ್ದೇವೆ ಎಂದು ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ. ವಿಶ್ವದ ಎಲ್ಲ ದೊಡ್ಡ ಕಂಪನಿಗಳು ಈ ಬ್ರೌಸರ್‌ ಬಳಸುತ್ತಿದ್ದು, ಹೊಸ ಆವೃತ್ತಿಯ ನಂತರ ಎಲ್ಲ ಕಂಪನಿಗಳು ನಿಧಾನವಾಗಿ ಬೇರೆ ಕಂಪನಿಯ ಬ್ರೌಸರ್‌ಗಳಿಗೆ ಮೊರೆಹೋಗುತ್ತಿವೆ. ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಮುಂದಿನ ಆವೃತ್ತಿ ಇಂಟರ್‌ನೆಟ್‌ ಎಡ್ಜ್ ಆಗಿದ್ದು, ಕ್ರೋಮ್ ರೀತಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬ್ರೌಸರ್ ಹೆಚ್ಚು ಕಾರ್ಯನಿರ್ವಹಿಸಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ.

Image
Whatsapp Image

ಯಾವುದೇ ದಾಖಲೆ ಕೊಡದೆ ಸಾಲ ನೀಡಲಿದೆ ವಾಟ್ಸ್‌ಆ್ಯಪ್ ಸಂಸ್ಥೆ

ಕಳೆದ ಹಲವು ದಿನಗಳಿಂದ ಭಾರೀ ವೈಶಿಷ್ಟ್ಯಗಳನ್ನು ಪರಿಚಯಿಸಲಿರುವ ವಾಟ್ಸ್‌ಆ್ಯಪ್ ಸಂಸ್ಥೆ ಇದೀಗ ಹಣಕಾಸು ಸಂಸ್ಥೆಯಾದ ಕ್ಯಾಷೀ ಜೊತೆ ಜಂಟಿಯಾಗಿ ಸಾಲ ನೀಡಲು ಮುಂದಾಗಿದೆ. ವಾಟ್ಸ್‌ಆ್ಯಪ್ ಸಾಲ ಪಡೆಯಲು ಅರ್ಜಿ ತುಂಬಬೇಕಿಲ್ಲ, ದಾಖಲೆ ನೀಡಬೇಕಿಲ್ಲ, ಪರಿಶೀಲನೆ- ತಪಾಸಣೆ ಯಾವುದೂ ಇಲ್ಲ. ವಾಟ್ಸ್‌ಆ್ಯಪ್ ಬ್ಯೂಸಿನೆಸ್ ಖಾತೆಯ ವಹಿವಾಟಿನ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರವಾಗಲಿದೆ. ಇದು ಎಐ ಚಾಲಿತ ಕ್ರೆಡಿಟ್ ಸೌಲಭ್ಯ. ಇಚ್ಛಿಸುವವರು ಚಾಟ್ ಬಾಕ್ಸ್‌ನಲ್ಲಿ ಹಾಯ್ ಎಂದು ಟೈಪ್ ಮಾಡಿ 8097553191 ನಂಬರ್‌ಗೆ ಕಳುಹಿಸಿದರೆ, ಮರುಕ್ಷಣವೇ ಪ್ರತಿಕ್ರಿಯೆ ಬರಲಿದೆ. 

Image
5G Network

ಇದೇ ವರ್ಷ ಆಗಸ್ಟ್‌ನಲ್ಲಿ ಬರಲಿದೆ 25 ನಗರದಲ್ಲಿ 5ಜಿ

ಇತ್ತೀಚಿಗಷ್ಟೇ 5ಜಿ ಟೆಸ್ಟ್ ಬೆಡ್ ಪರಿಚಯಿಸಿದ ಮದ್ರಾಸ್ ತಂತ್ರಜ್ಞಾನ ಸಂಸ್ಥೆ ಶೀಘ್ರದಲ್ಲಿ 5ಜಿ ಬರಲಿದೆ ಎಂದು ಘೋಷಿಸಿತ್ತು. ಆ ಕಾಲ ಈಗ ಬಂದಿದೆ. ಇದೇ ಆಗಸ್ಟ್‌ನಲ್ಲಿ ಭಾರತಕ್ಕೆ ಲಗ್ಗೆ ಇದಲ್ಲಿದೆ. 5ಜಿ ನೆಟ್‌ವರ್ಕ್‌ ಎಂದು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಸದ್ಯಕ್ಕೆ ಭಾರತದಲ್ಲಿ ಇರುವ ಡೇಟಾ ದರವು ಜಾಗತಿಕ ಮಟ್ಟದಲ್ಲಿ ಇರುವ ಸರಾಸರಿ ದರಕ್ಕಿಂತಲೂ ಕಡಿಮೆ ಇದೆ. "ಭಾರತದಲ್ಲಿ ಈಗಲೂ 1 ಜಿಬಿ ಡೇಟಾ ದರ 2 ಡಾಲರ್ ಇದೆ. ಜಾಗತಿಕವಾಗಿ 1 ಜಿಬಿ ಡೇಟಾ ದರವು 25 ಡಾಲರ್ ಇದೆ. ಹೀಗಾಗಿ 10 ಪಟ್ಟು ಏರಿಕೆ ಮಾಡಿದರೂ ಜಾಗತಿಕ ದರಕ್ಕಿಂತಲೂ ಕಡಿಮೆಯೇ ಇರಲಿದೆ. ದೆಹಲಿ, ಹೈದರಾಬಾದ್, ಮುಂಬೈ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಟವರ್ ಶೀಘ್ರದಲ್ಲಿ ಅಳವಡಿಸಲಾಗುವುದು" ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Image
iQOO Neo 6 Smartphone Image

ಭಾರತಕ್ಕೆ ಲಗ್ಗೆ ಇಟ್ಟ ಐಕ್ಯೂಒಓ ನಿಯೋ 6 5ಜಿ ಸ್ಮಾರ್ಟ್ ಪೋನ್ 

ಚೀನಾ ಉತ್ಪಾದಕರಿಂದ ತಯಾರಾದ ಐಕ್ಯೂಒಓ ನಿಯೋ 6 5ಜಿ ಸ್ಮಾರ್ಟ್ ಪೋನ್ ಭಾರತದ ಮಾರುಕಟೆಯಲ್ಲಿ ಲಭ್ಯವಿದೆ. ಈ 5ಜಿ ಸ್ಮಾರ್ಟ್ ಪೋನ್ ಹಲವು ವೈಶಿಷ್ಟ್ಯಗಳನ್ನು ಒಳಗೊಂದಿದ್ದು, ಅಮೆಜಾನ್‌ನಲ್ಲಿ ಖರೀದಿಸಬಹುದು. 

ವೈಶಿಷ್ಟ್ಯಗಳು

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 ಆಕ್ಟಾ ಕೋರ್ 
ಪರದೆ - 6.6 ಇಂಚಿನ ಪೂರ್ಣ ಎಚ್ಡಿ, 399 ಪಿಪಿಐ
ಮೆಮೊರಿ - 12 ಜಿಬಿ ರಾಮ್, 256 ಜಿಬಿ ಸಂಗ್ರಹಣೆ
ಬ್ಯಾಟರಿ - 4700 ಎಂಎಎಚ್ 
ಹಿಂಬದಿಯ ಕ್ಯಾಮೆರಾ - 64 ಎಂಪಿ + 13 ಎಂಪಿ + 2 ಎಂಪಿ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 16 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹29,999

ನಿಮಗೆ ಏನು ಅನ್ನಿಸ್ತು?
1 ವೋಟ್