ಆಂಡ್ರಾಯ್ಡ್‌ಗೆ ನೂತನ ಬೀಟಾ ಆವೃತ್ತಿ ಪರಿಚಯಿಸಿದ ವಾಟ್ಸ್ಆ್ಯಪ್; ವಾಬೀಟಾಇನ್ಪೋ ವರದಿ 

Whatsapp Feature Image
  • ವಾಟ್ಸ್ಆ್ಯಪ್ ಈಗ ನೂತನ ಬೀಟಾ ಆವೃತ್ತಿಯಲ್ಲಿ ಲಭ್ಯ
  • ಇನ್ಸ್ಟಾಗ್ರಾಮ್ ರೀತಿ ಕಾರ್ಯನಿರ್ವಹಿಸಲಿರುವ ವೈಶಿಷ್ಟ್ಯ

ಇತ್ತೀಚೆಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿರುವ ವಾಟ್ಸ್ಆ್ಯಪ್, ನೂತನ ಬೀಟಾ ಆವೃತ್ತಿಯನ್ನೂ ಪರಿಚಯಿಸಲು ಮುಂದಾಗಿದೆ. ಬಳಕೆದಾರರು ತಮ್ಮ ಮೋಬೈಲ್‌ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್‌ ನವೀಕರಿಸಬಹುದು ಎಂದು ವಾಟ್ಸ್ಆ್ಯಪ್ ತಿಳಿಸಿದೆ. 

ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಕೀಬೋರ್ಡ್‌ನಲ್ಲಿ ಲಭ್ಯವಿರುವ ಯಾವುದೇ ಎಮೋಜಿಗಳನ್ನು ಬಳಸಿ ಸಂದೇಶಗಳಿಗೆ ಪ್ರತಿಕ್ರಿಯಿಸಲು ಅನುಮತಿಸಿದೆ. ಪ್ರಸ್ತುತ ಬಳಕೆದಾರರಿಗೆ ಕೇವಲ ಆರು ಎಮೋಜಿಗಳು ಮಾತ್ರ ಬಳಸಬಹುದಾಗಿದೆ.

ಈ ವಾಟ್ಸ್ಆ್ಯಪ್ ವೈಶಿಷ್ಟ್ಯ ಜನಸಾಮಾನ್ಯರಿಗೆ ಬಿಡುಗಡೆ ಮಾಡುವ ಮೊದಲು ಪರೀಕ್ಷೆಯ ಹಂತದಲ್ಲಿದೆ. ವಾಬೀಟಾಇನ್ಪೋ ವರದಿಯ ಪ್ರಕಾರ, ಆಂಡ್ರಾಯ್ಡ್ 2.22.15.6 ಮತ್ತು 2.22.15.7 ಗಾಗಿ ವಾಟ್ಸ್ಆ್ಯಪ್ ಬೀಟಾ ಮತ್ತು ಐಓಎಸ್ 22.14.0.71 ಗಾಗಿ ಈ ವೈಶಿಷ್ಟ್ಯವನ್ನು ನೀಡಲಾಗುತ್ತಿದೆ.

ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ  ಆರು ಎಮೋಜಿ ಆಯ್ಕೆಗಳ ಕೊನೆಯಲ್ಲಿ '+' ಚಿಹ್ನೆ ನೋಡಲು ಸಾಧ್ಯವಾಗುತ್ತದೆ, ಇದು ಕೀಬೋರ್ಡ್‌ನಲ್ಲಿ ಲಭ್ಯವಿರುವ ಯಾವುದೇ ಇತರ ಎಮೋಜಿಗಳೊಂದಿಗೆ ಸಂದೇಶಕ್ಕೆ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ.

ಸದ್ಯಕ್ಕೆ, ಈಗ ಲಭ್ಯವಿರುವ ವೈಶಿಷ್ಟ್ಯ, ಇನ್ಸ್ಟಾಗ್ರಾಮ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಬೀಟಾ ಬಳಕೆದಾರರು ವಾಟ್ಸ್ಆ್ಯಪ್ ಚಾಟ್‌ನಲ್ಲಿ ಸಂದೇಶ ಸ್ಪರ್ಶಿಸಿ ಮತ್ತು ಹಿಡಿದಿಟ್ಟುಕೊಳ್ಳುವ ಮೂಲಕ ಸಂದೇಶಕ್ಕೆ ಪ್ರತಿಕ್ರಿಯಿಸಬಹುದು ಎಂದು ವರದಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್