ಲಾಗ್‌ಇನ್‌ ವೈಶಿಷ್ಟ್ಯವನ್ನು ಪರಿಚಯಿಸಲಿದೆ ವಾಟ್ಸ್ಆ್ಯಪ್; ವಾಬೀಟಾಇನ್‌ಫೋ ವರದಿ

Whatsapp Feature Image
  • ಲಾಗಿನ್‌ ಅನುಮೋದನೆ ಎಂಬ ನೂತನ ವೈಶಿಷ್ಟ್ಯ ಬಿಡುಗಡೆ
  • ವಾಟ್ಸ್ಆ್ಯಪ್ ಈಗ ಇನಷ್ಟು ಭದ್ರತೆಗೊಳಿಸಲು ತೀರ್ಮಾಣ

ವಾಟ್ಸ್ಆ್ಯಪ್ ಸಂಸ್ಥೆ ಬಳಕೆದಾರರ ಮಾಹಿತಿಯನ್ನು ಭದ್ರತೆಗೊಳಿಸುವ ಉದ್ದೇಶದಿಂದ ನೂತನ್ ಲಾಗ್‌ಇನ್‌ ವೈಶಿಷ್ಟ್ಯವನ್ನು ಪರಿಚಯಿಸಲಿದೆ. 

ಸಾಮಾಜಿಕ ಮಾಧ್ಯಮದಲ್ಲಿ ಸೈಬರ್ ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಭದ್ರತೆಗೊಳಿಸುವ ಕಾರಣದಿಂದಾಗಿ ನೂತನ ಫೀಚರನ್ನು ಹೊರತರಲಿದೆ. ಅದಕ್ಕೆ ಲಾಗಿನ್ ಅನುಮೋದನೆ ಎಂದು ಹೆಸರಿಡಲಾಗಿದೆ. 

ಏನಿದು ಲಾಗಿನ್ ಅನುಮೋದನೆ?

ಬಳಕೆದಾರರು ತಮ್ಮ ವಾಟ್ಸ್ಆ್ಯಪ್‌ನ ಖಾತೆಯನ್ನು ವರ್ಗಾಯಿಸಲು ಅಥವಾ ಬ್ಯಾಕಪ್ ಮಾಡಿಕೊಳ್ಳಲು ಬಯಸಿದರೆ ತಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಲಾಗ್ಇನ್ ಮಾಡಬೇಕು. ಒಮ್ಮೆ ಲಾಗಿನ್ ಆದ ಬಳಿಕ ಬಳಕೆದಾರರ ಮೊಬೈಲ್ ಸಂಖೈಗೆ ಓಟಿಪಿ ನಂಬರ್ ಬರಲಿದೆ. ಅದನ್ನು ಅಲ್ಲಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಬಳಕೆದಾರರ ಖಾತೆಯು ಭದ್ರತೆಯಿಂದ ಇರುತ್ತದೆ ಮತ್ತು ಅಪರಿಚಿತ ವ್ಯಕ್ತಿ ಯಾರಾದರೂ ಅವರ ಖಾತೆಯನ್ನು ಲಾಗ್‌ಇನ್‌ ಮಾಡಲು ಪ್ರಯತ್ನಿಸಿದರೆ ಬಳಕೆದಾರರಿಗೆ ಅಲರ್ಟ್ ಮಾಡುವ ಕೆಲಸವನ್ನು ಈ ಫೀಚರ್ ಮಾಡಲಿದೆ ಎಂದು ʻವಾಬೀಟಾಇನ್‌ಫೋʼ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಅಷ್ಟೇ ಅಲ್ಲದೆ ಯಾವ ಸಮಯ, ದಿನಾಂಕ ಮತ್ತು ಸ್ಥಳ ಕೂಡ ಇದರಲ್ಲಿ ಕಾಣಬಹದು. ಸದ್ಯಕ್ಕೆ, ಈ ವೈಶಿಷ್ಟ್ಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಬಳಕೆದಾರರಿಗೆ ಬಳಸಲು ಅನುಮತಿಸಲಿದೆ ಎಂದು ವಾಟ್ಸ್ಆ್ಯಪ್‌ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಭಾರತದ ಡಿಜಿಟಲ್ ಪಾವತಿ ವಲಯದಲ್ಲಿ ಆರ್ಥಿಕ ವಂಚನೆ ಶೇ.42ರಷ್ಟು ಏರಿಕೆ: ಸಮೀಕ್ಷಾ ವರದಿ

ವಾಟ್ಸ್ಆ್ಯಪ್ ಇನ್ನೂ ಹಲವು ಫೀಚರ್‌ಗಳಾದ ʻಡಬಲ್ ವೇರಿಫಿಕೇಶನ್ʼ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಹಲವು ನೂತನ ಪ್ರಯೋಗವನ್ನು ಮಾಡುತ್ತಿದೆ. ಶೀಘ್ರದಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್