ಅಕ್ಟೋಬರ್‌ನಿಂದ ಹಳೆಯ ಐಫೋನ್ ಮಾಡೆಲ್‌ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯಾಚರಣೆ ಸ್ಥಗಿತ

Whatsapp Feature Image
  • ಐಒಎಸ್ 10 ಮತ್ತು 11ಕ್ಕೆ ಮಾತ್ರ ಅನ್ವಯವಾಗಲಿದೆ
  • ಆಕ್ಟೋಬರ್ 24ಕ್ಕೆ ಐಪೋನ್‌ನಲ್ಲಿ ಕಾರ್ಯಾಚರಣೆ ಅಂತ್ಯ

ಕೆಲವು ಹಳೆಯ ಮಾದರಿಗಳ ಐಫೋನ್‌ನಲ್ಲಿ ಮೆಟಾ ಮಾಲೀಕತ್ವದ ಅಪ್ಲಿಕೇಶನ್ ವಾಟ್ಸ್ಆ್ಯಪ್ ಶೀಘ್ರದಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ. ವಾಬೀಟಾಇನ್‌ಫೋ ನೀಡಿರುವ ವರದಿಯ ಪ್ರಕಾರ ಆಕ್ಟೋಬರ್ 24ಕ್ಕೆ ಐಪೋನ್ ಹಳೆಯ ಮಾದರಿಗಳಲ್ಲಿ ಕಾರ್ಯಾಚರಣೆ ಅಂತ್ಯ ಮಾಡಲಿದೆ, ಇದು ಐಒಎಸ್ 10 ಮತ್ತು 11ಕ್ಕೆ ಮಾತ್ರ ಅನ್ವಯ ಎಂದು ಹೇಳಿದೆ. 

ಇತ್ತೀಚಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ವಾಟ್ಸ್ಆ್ಯಪ್ ಈಗಾಗಲೇ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸುವ ಮೂಲಕ ಎಚ್ಚರಿಸುತ್ತಿದೆ. ಇದಾಗ್ಯೂ ವಾಟ್ಸ್ಆ್ಯಪ್ ಸೇವೆಯನ್ನು ಬಳಸುವುದನ್ನು ಮುಂದುವರಿಸಲು ಬಯಸಿದರೆ ಐಫೋನ್ ಬಳಕೆದಾರರು ಐಒಎಸ್ 12 ಅಥವಾ ನಂತರದ ಆವೃತ್ತಿಯನ್ನು ಹೊಂದಿರಬೇಕು ಎಂದು ವಾಟ್ಸ್ಆ್ಯಪ್ ತನ್ನ ಸಹಾಯ ಕೇಂದ್ರ ಪುಟದಲ್ಲಿ ಈ ಹಿಂದೆ ಸ್ಪಷ್ಟಪಡಿಸಿದೆ. 

ಆದಾಗ್ಯೂ, ತ್ವರಿತ ಸಂದೇಶ ಕಳುಹಿಸುವ ಸಾಫ್ಟ್‌ವೇರ್‌ ಅನ್ನು ಬಳಸುವುದನ್ನು ಮುಂದುವರಿಸಲು, ಆಂಡ್ರಾಯ್ಡ್ ಬಳಕೆದಾರರು ಆಂಡ್ರಾಯ್ಡ್ 4.1 ಅಥವಾ ನಂತರದ ಆವೃತ್ತಿಯನ್ನು ಹೊಂದಿರಬೇಕು ಎಂದು ತಿಳಿಸಿದೆ. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ 2.7 ಕೋಟಿ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಖಾತೆಗಳ ಮೇಲೆ ಕ್ರಮ ಕೈಗೊಂಡಿದೆ!

ಹಾಗಾದರೆ ಪ್ರಸ್ತುತ ಅವೃತ್ತಿಗೆ ನವೀಕರಿಸುವುದು ಹೇಗೆ?

ಈಗಾಗಲೇ ಬಳಕೆದಾರರಿಗೆ ಇದಕ್ಕೆ ಸಂಬಂಧಿಸಿದಂತೆ ಯಾವುದಾದರು ನೋಟಿಫಿಕೇಶನ್ ಬಂದಿದ್ದರೆ, ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್ಸ್‌ಗೆ ಹೋಗಿ ಮೋಬೈಲ್‌ನ್ನು ಈಗಿನ ಆವೃತ್ತಿ ಐಒಎಸ್ 12ಗೆ ನವೀಕರಿಸಿ. ಇನ್ನು ಮುಂದೆ ಐಒಎಸ್ 10 ಮತ್ತು 11 ಸಂಪೂರ್ಣವಾಗಿ ಸ್ಥಗಿತವಾಗಿಲಿದೆ. ಸದ್ಯಕ್ಕೆ ಇದು ಐಫೋನ್ 5 ಮತ್ತು ಐಫೋನ್ 5ಸಿ ಸ್ಮಾರ್ಟ್‌ಫೋನ್‌ ಬಳಸುವ ಗ್ರಾಹಕರಿಗೆ ಮಾತ್ರ ಸಮಸ್ಯೆಯಾಗಲಿದೆ ಎಂದು ತಿಳಿಸಿದೆ. 

ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ಇನ್ನು ಹೆಚ್ಚು ಭದ್ರತೆ ಹೊಂದಲು ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಅದಕ್ಕೆ ಸಂಬಂಧಿಸಿ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲಾಗುವುದು ಎಂದಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್