ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಇನ್ನು 512 ಮಂದಿಗೆ ಅವಕಾಶ!

Whatsapp Feature Image
  • ವಾಟ್ಸಾಪ್‌ ಗ್ರೂಪ್ ನಿರ್ವಾಹಕರು ಈಗ 512 ಸದಸ್ಯರನ್ನು ಆಹ್ವಾನಿಸಬಹುದು
  • ಈ ವೈಶಿಷ್ಟ್ಯವು ಮುಂದಿನ 24 ಗಂಟೆಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯ

ಕಳೆದ ಎರಡು ವಾರದಿಂದ ವಾಟ್ಸಾಪ್‌ನಲ್ಲಿ ಹಲವು ವೈಶಿಷ್ಟ್ಯಗಳು ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಟೆಲಿಗ್ರಾಂಗೆ ಪೈಪೋಟಿ ನೀಡಲಿದೆಯಾ ಎನ್ನುವ ಚರ್ಚೆಯಲ್ಲಿರುವಾಗಲೇ ವಾಟ್ಸಾಪ್‌ ಸಂಸ್ಥೆ, ಗ್ರೂಪ್ ಚಾಟ್‌ಗಳಿಗಾಗಿ ಈ ಹಿಂದೆ 512 ಸದಸ್ಯರನ್ನು ಸೇರಿಸುವ ಯೋಜನೆ ಘೋಷಿಸಿತ್ತು. ಅದು ಈಗ ಕಾರ್ಯರೂಪಕ್ಕೆ ಬರಲಿದೆ ಎಂದು ʻವಾಬೀಟಾಇನ್ಫೊʼ ಸಂಸ್ಥೆ ಟ್ವೀಟ್ ಮಾಡಿದೆ.

ವಾಟ್ಸಾಪ್‌ ತನ್ನ ಗ್ರೂಪಿನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ವಾಟ್ಸಾಪ್‌ನಲ್ಲಿ ಗ್ರೂಪ್ ಗರಿಷ್ಠ ಮಿತಿ 256 ಇದ್ದು, ಅದನ್ನು ಈಗ ದುಪ್ಪಟ್ಟು ಮಾಡಲಾಗಿದೆ. ಅಂದರೆ ಇನ್ನು ಮುಂದೆ ವಾಟ್ಸಾಪ್‌ನಲ್ಲಿ 512 ಸದಸ್ಯರನ್ನು ಗ್ರೂಪಿನಲ್ಲಿ ಸೇರಿಸಬಹುದಾಗಿದೆ.

ಇತ್ತೀಚೆಗೆ ಬಂದ ವಾಟ್ಸಾಪ್‌ ವರದಿಯ ಪ್ರಕಾರ ಗ್ರೂಪ್ ಸಂಖ್ಯೆಯ ಜೊತೆಗೆ ಅನೇಕ ವೈಶಿಷ್ಟ್ಯ  ಸೇರ್ಪಡಿಸಲಾಗಿದೆ ಹಾಗೂ ಈ ಸೌಲಭ್ಯವು ಐಓಎಸ್, ಆಂಡ್ರಾಯ್ಡ್‌ನಲ್ಲಿ ಮತ್ತು ಡೆಸ್ಕ್‌ಟಾಪ್‌ ಬೀಟಾ ಅವೃತ್ತಿಯಲ್ಲಿ ಲಭ್ಯವಿರಲಿದೆ. ವಾಟ್ಸಾಪ್‌ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ್ಯ ಕಾರ್ಯನಿರ್ವಹಿಸಲು ಆರಂಭಿಸಿದೆ.

ಈ ವೈಶಿಷ್ಟ್ಯವನ್ನು  ಪರಿಶೀಲಿಸುವುದು ಹೇಗೆ?

ನೀವು ಈಗಾಗಲೇ ವಾಟ್ಸಾಪ್‌ 'ಗ್ರೂಪ್ ಅಡ್ಮಿನ್' ಆಗಿದ್ದಲ್ಲಿ, ಆ ಗುಂಪಿನ ಚಾಟ್‌ನ್ನು ತೆರೆದು ಗುಂಪಿನ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ನಂತರ ʻಭಾಗವಹಿಸುವವರನ್ನು ಸೇರಿಸಿʼ ಎಂಬ ಆಯ್ಕೆ ಟ್ಯಾಪ್ ಮಾಡಿ ಬಳಿಕ ನಿಮ್ಮ ಗ್ರೂಪಿನ ಸದಸ್ಯರನ್ನು ಆಹ್ವಾನಿಸಿ. ಹೀಗೆ ಮಾಡುವ ಮೂಲಕ ಗ್ರೂಪಿನ ಮಿತಿ ಹೆಚ್ಚಾಗಿರುವುದನ್ನು ಗಮನಿಸಬಹುದು. ಒಂದು ವೇಳೆ ಭಾಗವಹಿಸುವವರ ಗುಂಪಿನ ಮಿತಿಯು ಇನ್ನೂ ಹಳೆಯ ಸಂಖ್ಯೆ ತೋರಿಸಿದರೆ, ಮುಂದಿನ 24 ಗಂಟೆಗಳಲ್ಲಿ ನೀವು ವೈಶಿಷ್ಟ್ಯದ ನವೀಕರಣ ಸ್ವೀಕರಿಸುವ ಸಾಧ್ಯತೆ ಇರಲಿದೆ.

ಈ ಸುದ್ದಿ ಓದಿದ್ದೀರಾ? ಸಂದೇಶ ಕಳುಹಿಸಿದ ಮೇಲೂ ʻಎಡಿಟ್ʼ ಮಾಡುವ ಅವಕಾಶ ಪರಿಚಯಿಸಲಿರುವ ವಾಟ್ಸಪ್

ವಾಟ್ಸಾಪ್‌ ಮೆಟಾ ಮಾಲೀಕತ್ವದ ಕಂಪನಿಯಾಗಿದ್ದು, ಶೀಘ್ರದಲ್ಲೇ ವಾಟ್ಸಾಪ್‌ ಸಂದೇಶಗಳನ್ನು ʻಎಡಿಟ್ʼ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಅನುಮತಿ ನೀಡಲಿದೆ. ಈ ವೈಶಿಷ್ಟ್ಯವು ಐಓಎಸ್, ಆಂಡ್ರಾಯ್ಡ್‌ನಲ್ಲಿ  ಮತ್ತು ಡೆಸ್ಕ್‌ಟಾಪ್‌ ಬೀಟಾ ಆವೃತ್ತಿಯಲ್ಲಿ ಲಭ್ಯವಿರಲಿದೆ ಎಂದು ʻವಾಬೀಟಾಇನ್ಫೊʼ ಸಂಸ್ಥೆ ಮಾಹಿತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್