ವಾಟ್ಸ್ಆ್ಯಪ್‌ನಲ್ಲಿ ನೂತನ ಫೀಚರ್ ಲಭ್ಯ; ಗ್ರೂಪ್ ನಿರ್ವಾಹಕರಿಗೆ ಸಿಹಿ ಸುದ್ದಿ

Whatsapp Feature Image
  • ವಾಟ್ಸ್ಆ್ಯಪ್ ಬೀಟಾ v2.22.17.12 ಫೀಚರ್‌ನಲ್ಲಿ ಅಪ್‌ಡೇಟ್‌ ಲಭ್ಯ
  • ತಪ್ಪು ಮಾಹಿತಿ ತಡೆಯಲು ವಾಟ್ಸ್ಆ್ಯಪ್ ಸಹಾಯ ಮಾಡಲಿದೆ

ವಾಟ್ಸ್ಆ್ಯಪ್ ಸಂಸ್ಥೆ ಇದೀಗ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಸುದ್ದಿಯಲ್ಲಿದೆ. ನೂತನ ಫೀಚರ್‌ನಿಂದ ಗ್ರೂಪ್ ನಿರ್ವಾಹಕರು ತಪ್ಪು ಮಾಹಿತಿಗಳನ್ನು ಹರಡದಂತೆ ತಡೆಯಬಹುದಾಗಿದೆ. 

ಈಗಾಗಲೇ ಈ ಫೀಚರ್ ಪರೀಕ್ಷೆಯ ಹಂತದಲ್ಲಿದ್ದು, ಹಲವು ಬಳಕೆದಾರರ ಸ್ಮಾರ್ಟ್‌ಪೋನ್‌ಗಳಲ್ಲಿ ಕೂಡ ಲಭ್ಯವಿದೆ ಹಾಗೂ ಶೀಘ್ರದಲ್ಲಿ ಎಲ್ಲ ಬಳಕೆದಾರರು ಬಳಸಬಹುದಾಗಿದೆ. ಸಂದೇಶಗಳನ್ನು ಗ್ರೂಪ್ ಅಡ್ಮಿನ್ ಅಳಿಸಿದ ತಕ್ಷಣ ಉಳಿದ ಎಲ್ಲ ಬಳಕೆದಾರರಿಗೆ ನೋಟಿಫಿಕೇಶನ್ ರವಾನೆಯಾಗಿಲಿದೆ. ಅಷ್ಟೇ ಅಲ್ಲದೆ ವಾಟ್ಸ್ಆ್ಯಪ್ ಬೀಟಾ v2.22.17.12 ಫೀಚರ್‌ನಲ್ಲಿ ಈ ಅಪ್‌ಡೇಟ್‌ ಕಾಣಬಹುದು ಎಂದು ವಾಬೀಟಾಇನ್‌ಫೋ ಸಂಸ್ಥೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದಿದೆ. 

ಪ್ರಸ್ತುತ ವಾಟ್ಸ್ಆ್ಯಪ್ ಫೀಚರ್‌ನಲ್ಲಿ ಗ್ರೂಪ್ ನಿರ್ವಾಹಕರು ತಮ್ಮ ಸಂದೇಶಗಳನ್ನು ಮಾತ್ರ ಅಳಿಸುವ ಅನುಮತಿ ನೀಡಲಾಗಿತ್ತು. ಆದರೆ ಶೀಘ್ರದಲ್ಲಿ ಎಲ್ಲ ಸಂದೇಶಗಳನ್ನು ಅಳಿಸುವ ನೂತನ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಗ್ರೂಪ್‌ನಲ್ಲಿ ರವಾನೆಯಾಗುವ ತಪ್ಪು ಮಾಹಿತಿ ತಡೆಯಲು ಸಹಾಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಪ್ರಚಾರವಾಗುತ್ತಿವೆ. ಹೊಸ ಫೀಚರ್‌ ಅಂತಹ ವಿಡಿಯೋ ಅಥವಾ ಚಿತ್ರಗಳನ್ನು ತಡೆಯಲು ಸಹಾಯ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್