400ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

wipro-lays-off-over-400-freshers-for-poor-performance
  • ಕಳಪೆ ಪ್ರದರ್ಶನ ನೀಡಿದ 452 ಹೊಸ ಉದ್ಯೋಗಿಗಳನ್ನು ಕೈಬಿಟ್ಟ ವಿಪ್ರೋ
  • ನಿರ್ದಿಷ್ಟ ಪ್ರಾವೀಣ್ಯತೆ ಅಗತ್ಯವೆಂದು ಸಿಬ್ಬಂದಿಗಳಿಗೆ ಕೊಕ್ ನೀಡಿದ ಸಂಸ್ಥೆ

ತರಬೇತಿಯ ನಂತರವೂ ಆಂತರಿಕ ಮೌಲ್ಯಮಾಪನದಲ್ಲಿ ಪದೇಪದೆ ಕಳಪೆ ಪ್ರದರ್ಶನ ನೀಡಿದ 400ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಐಟಿ ಸೇವೆಗಳನ್ನು ಒದಗಿಸುವ ಪ್ರಮುಖ ಕಂಪನಿ ವಿಪ್ರೋ ಹೇಳಿದೆ.

ಈ ಮೂಲಕ ಇತ್ತೀಚಿನ ವಾರಗಳಲ್ಲಿ ಸಿಬ್ಬಂದಿಗಳನ್ನು ಕಡಿಮೆಗೊಳಿಸಿರುವ ಗೂಗಲ್, ಅಮೆಜಾನ್‌, ಸ್ವಿಗ್ಗಿಯ ಹೆಜ್ಜೆಯನ್ನು ವಿಪ್ರೋ ಕೂಡ ಅನುಸರಿಸಿದೆ.

"ವಿಪ್ರೋದಲ್ಲಿ, ಅತ್ಯುನ್ನತ ಮಾನದಂಡಗಳನ್ನು ಹಿಡಿದಿಟ್ಟುಕೊಳ್ಳುವ ವಿಚಾರದಲ್ಲಿ ಹೆಮ್ಮೆಪಡುತ್ತೇವೆ. ಮಾನದಂಡಗಳಿಗೆ ಅನುಗುಣವಾಗಿ, ನಮಗಾಗಿ ನಾವು ಹೊಂದಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ. ಪ್ರತಿಯೊಬ್ಬ ಪ್ರವೇಶ ಮಟ್ಟದ ಉದ್ಯೋಗಿಗಳು ಗೊತ್ತುಪಡಿಸಿದ ಕೆಲಸದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಪ್ರಾವೀಣ್ಯತೆ ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ.

ತರಬೇತಿಯ ನಂತರವೂ ಮೌಲ್ಯಮಾಪನದಲ್ಲಿ ಪದೇಪದೆ ಕಳಪೆ ಪ್ರದರ್ಶನ ನೀಡಿದ 452 ಹೊಸ ಉದ್ಯೋಗಿಗಳನ್ನು ನಾವು ಕೈಬಿಟ್ಟಿದ್ದೇವೆ ಕಂಪನಿ ತಿಳಿಸಿದೆ.

ಆಂತರಿಕ ಪರೀಕ್ಷೆಗಳಲ್ಲಿ ವಿಫಲರಾದ ಎಲ್ಲಾ ಉದ್ಯೋಗಿಗಳಿಗೆ ಕಂಪನಿಯು ವಜಾ ಮಾಡಿದ ಪತ್ರಗಳನ್ನು ನೀಡಿದೆ. ಅವರು ಸಾಕಷ್ಟು ತರಬೇತಿಯ ಹೊರತಾಗಿಯೂ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಕಂಪನಿ ಹೇಳಿದೆ. ಕಂಪನಿಯ ಆಂತರಿಕ ಪರೀಕ್ಷೆಗಳಲ್ಲಿ ವಿಫಲರಾದ ಎಲ್ಲಾ ಉದ್ಯೋಗಿಗಳಿಗೆ ವಜಾ ಮಾಡಿದ ಪತ್ರಗಳನ್ನು ನೀಡಿದೆ. 

ಸಾಕಷ್ಟು ತರಬೇತಿಯ ಹೊರತಾಗಿಯೂ ಅವರು ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಕಂಪನಿ ಹೇಳಿದೆ. 

ಈ ಸುದ್ದಿ ಓದಿದ್ದೀರಾ? ಟ್ವಿಟರ್‌ ಬಿಕ್ಕಟ್ಟು | ಬಾಡಿಗೆ ಪಾವತಿಸಲು ಕಚೇರಿ ಸಾಮಗ್ರಿ ಹರಾಜಿಗಿಟ್ಟ ಎಲಾನ್‌ ಮಸ್ಕ್

 ಉದ್ಯೋಗಿಗಳು ತರಬೇತಿ ವೆಚ್ಚದ ₹75,000ಗಳನ್ನು ಪಾವತಿಸಲು ಹೊಣೆಗಾರರಾಗಿದ್ದಾರೆ ಎಂದು ವಜಾಗೊಳಿಸುವ ಪತ್ರದಲ್ಲಿ ಬರೆಯಲಾಗಿದ್ದು, ಆದರೆ, ಮೊತ್ತವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗಿಗಳ ಮಾರ್ಗದರ್ಶನ- ಮರುತರಬೇತಿ 

ಮೌಲ್ಯಮಾಪನ ಪ್ರಕ್ರಿಯೆಯು ವ್ಯವಸ್ಥಿತ ಮತ್ತು ಸಮಗ್ರವಾಗಿದ್ದು, ಕಂಪನಿಯಿಂದ ಉದ್ಯೋಗಿಗಳ ಮಾರ್ಗದರ್ಶನ, ಮರುತರಬೇತಿ ಮತ್ತು ಪ್ರತ್ಯೇಕತೆಯಂತಹ ಕ್ರಮಗಳ ಸರಣಿಯನ್ನು ಅನುಸರಿಸುತ್ತದೆ ಎಂದು ಹೇಳಲಾಗಿದೆ.

ಕಂಪನಿ ಇತ್ತೀಚೆಗೆ ಮುಂದಿನ ಆರ್ಥಿಕ ವರ್ಷಕ್ಕೆ ನೇಮಕಾತಿ ಮುಂದುವರಿಸುವುದಾಗಿ ಹೇಳಿದ್ದರೂ, ತನ್ನ ಹೊಸ ಉದ್ಯೋಗಿಗಳಿಗೆ ಆನ್‌ಬೋರ್ಡಿಂಗ್ ಪ್ರಕ್ರಿಯೆ ವಿಳಂಬಗೊಳಿಸುತ್ತಿರುವ ಕುರಿತು ಹಲವಾರು ಮಾಧ್ಯಮ ವರದಿಗಳಿವೆ. ಆದರೆ, ಈಗಾಗಲೇ ನೀಡಿರುವ ಆಫರ್‌ಗಳಿಗೆ ತಾವು ಬದ್ಧರಾಗಿದ್ದೇವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app