ಜೇಮ್ಸ್‌ವೆಬ್‌ ದೂರದರ್ಶಕ | ನಾಳೆ ಬರಲಿರುವ ಚಿತ್ರಗಳಿಗೆ ಕಾಯುತ್ತಿರುವ ಖಗೋಳಾಸಕ್ತರ ಕಣ್ಣುಗಳು

James Webb
  • ಹಬಲ್‌ ನಂತರ ಬಾಹ್ಯಾಕಾಶದಲ್ಲಿ ಹಾರಾಡುವ ಬೃಹತ್‌ ದೂರದರ್ಶಕ
  • ಗೆಲಾಕ್ಸಿಗಳ ಅನೂಹ್ಯ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆಯಲ್ಲಿ ವಿಜ್ಞಾನಿಗಳು

ಕಳೆದ ವರ್ಷ ಡಿಸೆಂಬರ್‌ 25ರಂದು ಅಮೆರಿಕದ ಫ್ರೆಂಚ್‌ ಗಯಾನದಿಂದ ಉಡಾವಣೆಗೊಂಡ ಜೇಮ್ಸ್‌ವೆಬ್‌ ಬಾಹ್ಯಾಕಾಶ ದೂರದರ್ಶಕ ಜುಲೈ 12ರಂದು ತನ್ನ ನಿಗದಿತ ಸ್ಥಳದಿಂದ ಸೆರೆಹಿಡಿದ ಮೊದಲ ಚಿತ್ರಗಳನ್ನು ರವಾನಿಸಲಿದೆ ಎಂದು ನಾಸಾ ತಿಳಿಸಿದೆ.

ಅಂತರಿಕ್ಷದಲ್ಲಿ ತೇಲಾಡುತ್ತಾ ಬಾಹ್ಯಾಕಾಶದ ವಿದ್ಯಮಾನಗಳನ್ನು ಸೆರೆಹಿಡಿಯುತ್ತಿದ್ದ ಹಬಲ್‌ ದೂರದರ್ಶಕದ ಉತ್ತರಾಧಿಕಾರಿ ಎಂದು ಕರೆಯಲಾದ ಜೇಮ್ಸ್‌ವೆಬ್‌ ವಿಶ್ವದ ಹಲವು ರಹಸ್ಯಗಳನ್ನು ಅರಿಯುವುದಕ್ಕೆ ನೆರವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ಬಣ್ಣಿಸಿದ್ದಾರೆ.

Image
James Webb

ಏನಿದು ಜೇಮ್ಸ್‌ ವೆಬ್‌?

ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿದ ಅಂತರಿಕ್ಷ ದೂರದರ್ಶಕ. ಹತ್ತು ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ದೂರದರ್ಶಕ ಸಿದ್ಧಪಡಿಸಲಾಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ನಿಂತು ಅಂತರಿಕ್ಷದ ಚಿತ್ರಗಳನ್ನು ಸೆರೆಹಿಡಿಯುವುದು ಇದರ ಕೆಲಸ. ಈ ಹಿಂದೆ ಇದ್ದ ಹಬಲ್‌ಗಿಂತ 400 ಪಟ್ಟು ಸೂಕ್ಷ್ಮವಾಗಿ ಅತಿನೇರಳೆ ಕಿರಣಗಳನ್ನು ಗ್ರಹಿಸುವಷ್ಟು ಸಾಮರ್ಥ್ಯ ಉಳ್ಳದ್ದು. 2018ರಲ್ಲಿ ಈ ಟೆಲಿಸ್ಕೋಪ್‌ ರೂಪಿಸುವ ಕೆಲಸ ಆರಂಭವಾಗಿ 2021ರಲ್ಲಿ ಪೂರ್ಣಗೊಂಡಿತು.

Image
James webb Spectograph
ಅತಿನೇರಳೆ ಕಿರಣಗಳಿಂದ ಸಂಗ್ರಹಿಸುವ ಮಾಹಿತಿ ಸ್ಪೆಕ್ಟೊಗ್ರಾಫ್‌ ಮೂಲಕ ಹೀಗೆ ಕಾಣುತ್ತದೆ.

ಹೇಗೆ ಕೆಲಸ ಮಾಡುತ್ತದೆ?

21 ಅಡಿ ಸುತ್ತಳತೆಯ, ಷಟ್ಕೋನಾಕಾರದ ಹದಿನೆಂಟು ಫಲಕಗಳನ್ನು ಒಳಗೊಂಡಿರುವ ಇದು, ಸೂರ್ಯನ ಕಿರಣ ನೇರವಾಗಿ ಬೀಳದಂತೆ ಭೂಮಿಯ ನೆರಳಿನಲ್ಲಿ ಇರುವ ಜೇಮ್ಸ್‌ವೆಬ್‌ ದೂರದರ್ಶಕ. ಭೂಮಿ ಸೂರ್ಯನನ್ನು ಸುತ್ತುವಾಗ, ಸುರಕ್ಷಿತ ಅಂತರದಲ್ಲಿ ಈ ದೂರದರ್ಶಕವೂ ಸುತ್ತುತ್ತದೆ. -386 ಡಿಗ್ರಿ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ದೂದರ್ಶಕ, ಅಂತರಿಕ್ಷದಲ್ಲಿ ಹೊಮ್ಮುವ ಅತಿನೇರಳೆ ಕಿರಣಗಳನ್ನು ಗ್ರಹಿಸಿ, ಪರವೀಕ್ಷಿಸುತ್ತದೆ. ಸ್ಪೆಕ್ಟೋಗ್ರಾಫ್‌ ಮೂಲಕ ವಿವಿಧ ಬಣ್ಣಗಳನ್ನಾಗಿ ವಿಭಾಗಿಸಲಾಗುತ್ತದೆ. ಈ ಮೂಲಕ ಸಿಗುವ ಚಿತ್ರಗಳನ್ನು ನಾಸಾಕ್ಕೆ ರವಾನಿಸುತ್ತದೆ.

Image
James Webb
ಜೇಮ್ಸ್‌ವೆಬ್‌ ಕಳಿಸಿದ ಪ್ರಾಯೋಗಿಕ ಚಿತ್ರ

ಈ ದೂರದರ್ಶಕ ಚಿತ್ರಗಳಿಗೇಕೆ ಇಷ್ಟು ಮಹತ್ವ?

ಇದೇ ಮೊದಲ ಬಾರಿಗೆ ಖಗೋಳದ ಅತ್ಯಂತ ಆಳದ, ಸಂಗತಿಗಳನ್ನು ಜೇಮ್ಸ್‌ ಬಿಚ್ಚಿಡಲಿದೆ ಎಂಬ ಕುತೂಹಲ, ಖಗೋಳ ವಿಜ್ಞಾನಿಗಳಿಗಿದೆ. ವೆಬ್‌ ದೂರದರ್ಶಕ ತನ್ನ ಪ್ರಯಾಣದುದ್ದಕ್ಕೂ ಸೆರೆ ಹಿಡಿದ ದೃಶ್ಯಗಳನ್ನು ನೋಡಿ ನಾಸಾ ವಿಜ್ಞಾನಿಗಳು ಕಣ್ಣೀರಾಗಿದ್ದಾರೆ ಎಂದು ವರದಿಯಾಗಿತ್ತು! ವೆಬ್‌ ದೂರದರ್ಶಕ ಅಂತರಿಕ್ಷ ಕುರಿತು ದೃಷ್ಟಿಕೋನವನ್ನೇ ಬದಲಿಸಬಹುದು ಎಂಬ ಕಾತರದಿಂದ ಜುಲೈ 12ನೇ ತಾರೀಕಿಗಾಗಿ ವಿಜ್ಞಾನಿಗಳು ಕಾಯುತ್ತಿರುವುದಕ್ಕೆ ಕಾರಣ, ಅಚ್ಚರಿ ದೃಶ್ಯಗಳು ಸಿಗಬಹುದು ಎಂಬುದು.

Image
James Webb

ಸೌರವ್ಯೂಹದಾಚೆಗಿನ ಗೆಲಾಕ್ಸಿಗಳಲ್ಲಿ ಇಣುಕಿ ನೋಡಲು ಸಾಧ್ಯವಿದೆ ಎಂಬ ಕುತೂಹಲವೂ ವಿಜ್ಞಾನಿಗಳಿಗಿದೆ. ವೆಬ್‌ ದೂರದರ್ಶಕದಿಂದ ಚಿತ್ರಗಳ ಜೊತೆಗೆ ಸ್ಪೆಕ್ಟ್ರಾ ಕೂಡ ಲಭ್ಯವಾಗಲಿದೆ. ಸ್ಪೆಕ್ಟ್ರಾ, ಅಂತರಿಕ್ಷದಲ್ಲಿರುವ ಅಣು ಮತ್ತು ಕಣಗಳಿಂದ ಹೊಮ್ಮಿದ ಮಾಹಿತಿಯನ್ನು ಸಂಗ್ರಹಿಸಿಕೊಡುತ್ತದೆ. ಉದಾಹರಣೆಗೆ; ನಕ್ಷತ್ರಗಳ ರಾಸಾಯನಿಕ ಸಂಯೋಜನೆ ಇರಬಹುದು, ದೂರದ ಗೆಲಾಕ್ಸಿಯಲ್ಲಿ ಇದ್ದಿರಬಹುದಾದ ಅನಿಲವಾಗಿರಬಹುದು, ಗ್ರಹಗಳು ಸುತ್ತುತ್ತಿರುವ ನಕ್ಷತ್ರಗಳ ಪರಿಸರವಿರಬಹುದು.

ಯಾರು ಈ ಜೇಮ್ಸ್‌?

-380 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿರುವ ಈ ದೂರದರ್ಶಕಕ್ಕೆ ನಾಸಾದ ಮಾಜಿ ಆಡಳಿತಾಧಿಕಾರಿ ಜೇಮ್ಸ್‌ವೆಬ್‌ ಅವರನ್ನು ಇಡಲಾಗಿದೆ. ಜೇಮ್ಸ್‌, ಅಪೊಲೊ ನೌಕೆ ಉಡಾವಣೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್