ಸೈಬೆರ್ ಒನ್ ಹೆಸರಿನ ಮಾನವ ರೊಬೋಟ್‌ ಪರಿಚಯಿಸಿದ ಶಿಯೋಮಿ

Xiaomi launches humanoid robot CyberOne image
  • ಮುಖ್ಯಸ್ಥರಾದ ಲೀ ಜುನ್ ಅವರಿಗೆ ಹೂ ನೀಡಿದ ʻಸೈಬರ್ ಒನ್ʼ
  • ಮಾನವ ಚಲನೆಯನ್ನು ಅನುಕರಿಸಲು ರೋಬೋ ಅನುವು ಮಾಡಲಿದೆ

ಕಳೆದ ದಿನಗಳ ಹಿಂದೆ ಶಿಯೋಮಿ ಕಂಪನಿ ರೋಬೋಟ್ ನಾಯಿಯನ್ನು ಪರಿಚಯಿಸಿತ್ತು, ಇದೀಗ ಮಾನವ ರೋಬೋಟ್‌ನ್ನು ತಯಾರು ಮಾಡುವ ಮೂಲಕ ಸುದ್ದಿಯಲ್ಲಿದೆ. ಈ ರೋಬೋಟ್ ಮಾನವ ಭಾವನೆಗಳನ್ನು ಪತ್ತೆ ಮಾಡುತ್ತದೆ ಮತ್ತು ಪ್ರಪಂಚದ 3ಡಿ ದೃಶ್ಯ ಪ್ರಾತಿನಿಧ್ಯಗಳನ್ನು ಸಹ ರಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ʻಸೈಬರ್ ಒನ್ʼ ಎಂದು ತಾಂತ್ರಿಕವಾಗಿ ಹೆಸರಿಸಲಾಗಿದೆ. 

ಶಿಯೋಮಿ ಕಾರ್ಯಕ್ರಮದ ವೇದಿಕೆಯ ಮೇಲೆ ಸಂಸ್ಥೆಯ ಮುಖ್ಯಸ್ಥರಾದ ಲೀ ಜುನ್ ಅವರಿಗೆ ಹೂವನ್ನು ನೀಡಲು ಬಂದ ದೃಶ್ಯ ನೋಡುಗರ ಗಮನಸೆಳೆದಿದೆ ಮತ್ತು ಆಶ್ಚರ್ಯ ಉಂಟು ಮಾಡಿದೆ. ಮುಂಚಾಚಿದ ಕಾಲುಗಳು ಮತ್ತು ತೋಳುಗಳನ್ನು ಅಳವಡಿಸಿರುವುದರಿಂದ ರೋಬೋಟ್ ಬೈ-ಪೆಡಲ್ ಚಲನೆಗೆ ಸಮತೋಲನ ನೀಡುತ್ತದೆ. ಇದು 300 ಗರಿಷ್ಠ ಟಾರ್ಕ್ (ಚಲನೆಯ ವೇಗವನ್ನು ಹೆಚ್ಚಿಸುವ ತಂತ್ರಜ್ಙಾನ) ಅನ್ನು ಹೊಂದಿದೆ.

ಈ ರೋಬೋವನ್ನು ಶಿಯೋಮಿ ತನ್ನ ರೋಬೋ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದೆ ಮತ್ತು ಇದು ಹಲವು ರೀತಿಯ ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಮತ್ತು ಅಲ್ಗಾರಿದಮ್‌ಗಳ ನಾವೀನ್ಯತೆ ಒಳಗೊಂಡಿದೆ.

ಈ ಸುದ್ದಿ ಓದಿದ್ದೀರಾ? ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಈಗ ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ ಅಳವಡಿಸಲಾಗಿದೆ

ʻಸೈಬೆರ್ ಒನ್ʼ ರೋಬೋಟ್‌ನ ವಿಶೇಷತೆ

ಸೈಬರ್ ಒನ್ 52 ಕೆಜಿ ತೂಕ, 177 ಸೆಂ.ಮೀ ಎತ್ತರ ಮತ್ತು 168 ಸೆಂ.ಮೀ ತೋಳನ್ನು ಹೊಂದಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಸೈಬರ್ ಒನ್ ವರದಿಯ ಪ್ರಕಾರ ಪ್ರತಿ ಡಿಗ್ರಿಗೆ 0.5 ಎಮ್.ಎಸ್ ನೈಜ ಸಮಯದ ಪ್ರತಿಕ್ರಿಯೆ ವೇಗದೊಂದಿಗೆ ಚಲನೆಯಲ್ಲಿ 21 ಡಿಗ್ರಿ ಹೊಂದಿದೆ, ಇದು ಮಾನವ ಚಲನೆಯನ್ನು ಸುಲಭವಾಗಿ ಅನುಕರಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥ ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್