ಯೋಗ ದಿನದ ವಿಶೇಷ | ಇಲ್ಲಿದೆ ಹತ್ತು ಉಚಿತ ಯೋಗ ಅಪ್ಲಿಕೇಶನ್‌ಗಳು

Yoga Day Image

ಪ್ರತಿವರ್ಷ ಜೂನ್ 21ರಂದು ವಿಶ್ವ ಯೋಗದಿನ ಆಚರಿಸಲಾಗುತ್ತಿದೆ. ಹೀಗಿರುವಾಗ, ಮನಸ್ಸು ಮತ್ತು ದೇಹವನ್ನು ಸುಸ್ಥಿತಿಯಲ್ಲಿರಿಸಲು ಯೋಗದ ಅಗತ್ಯ ನಮಗಿರುತ್ತದೆ. ಆದರೆ, ಯೋಗ ಮಾಡುವುದು ಹೇಗೆಂದು ಗೊತ್ತಿಲ್ಲ ಎನ್ನುವುದು ನಿಮ್ಮ ಯೋಚನೆಯಾಗಿದ್ದರೆ, ಚಿಂತೆ ಬಿಡಿ. ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡುವ ಅಪ್ಲಿಕೇಶನ್‌ಗಳ ಸಂಪೂರ್ಣ ವಿವರ ಇಲ್ಲಿದೆ. ನೀವು ಉಚಿತ ಯೋಗಾಸನ ಕಲಿಯಲು ಈ ಅಪ್ಲಿಕೇಶನ್‌ಗಳು ನೆರವಾಗುತ್ತವೆ.

Image
Daily Yoga Image

ಡೈಲಿ ಯೋಗ

ಎಲ್ಲ ವರ್ಗದವರು ಬಳಸುವ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಮನೆಯಲ್ಲಿಯೇ ಯೋಗ ಮಾಡಲು ಸಹಕಾರಿ. 200ಕ್ಕೂ ಅಧಿಕ ಯೋಗ ತರಗತಿಗಳು, 500ಕ್ಕೂ ಹೆಚ್ಚು ಭಂಗಿ ಚಿತ್ರಗಳು ಮತ್ತು 7 ವಿವಿಧ ಭಾಷೆಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. 

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಡೈಲಿ ಯೋಗ  

Image
5 mins Yoga Image

5 ಮಿನಟ್ ಯೋಗ 

ಸದ್ಗುರು ಹೊರತಂದಿರುವ ಅಪ್ಲಿಕೇಶನ್ ಇದಾಗಿದ್ದು, ಡೌನ್‌ಲೋಡ್‌ ಮಾಡಿದ ಕೆಲವು ದಿನಗಳು ಉಚಿತವಾಗಿರುವ ಜೊತೆಗೆ ಮೊದಲ ಐದು ಆಸನ ಚಿತ್ರಗಳು ಉಚಿತ. ಎರಡು ಸೆಷನ್‌ಗಳ ಬಳಿಕ 'ಉಚಿತ' ಅಪ್ಲಿಕೇಶನ್ ಅಲ್ಲ ನಂತರ 780 ರೂಪಾಯಿಗಳು ಕೊಟ್ಟು ಚಂದದಾರಾಗಬೇಕು. 

ಯೋಗ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ 5 ಮಿನಟ್ ಯೋಗ 

Image
Fitter Yoga Image

ಫಿಟ್ಟರ್ 

ಪುಣೆ ಮೂಲದ ಫಿಟ್ನೆಸ್ ಕಂಪನಿಯ ಅಪ್ಲಿಕೇಶನ್ ಇದಾಗಿದೆ, ಆರೋಗ್ಯಕರ ಜೀವನಶೈಲಿಯನ್ನು ಜನರಿಗೆ ಪರಿಚಯಿಸುವುದು ಇದರ ಮೂಲ ಉದ್ದೇಶ. ಉಚಿತ ಯೋಗ ಮತ್ತು ಇತರ ದೈಹಿಕ ವ್ಯಾಯಮಗಳನ್ನು ಪರಿಚಯಿಸಿದೆ. ಯೋಗ ಸಲಹೆಗಳು ಕೂಡ ಲಭ್ಯವಿದ್ದು, ಬಳಕೆದಾರರು ಹಲವು ಪ್ರಯೋಜನ ಪಡೆಯಬಹುದು. 

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಫಿಟ್ಟರ್ 

Image
yoga Studio App

ಯೋಗ ಸ್ಟುಡಿಯೋ

ನೀವು ಆರಂಭಿಕ ಯೋಗಪಟ್ಟುವಾಗಿದ್ದರೆ ಅಥವಾ ಯೋಗ ತಜ್ಞನರಾಗಿದ್ದರೆ ಈ ಅಪ್ಲಿಕೇಶನ್ ಅಗತ್ಯ. ಹೀಗೆ ಎಲ್ಲ ವಯೋಮಾನದವರಿಗೂ ಹೊಂಡುವ ವಿವಿಧ ಯೋಗಾಸನಗಳನ್ನು ಕಲಿಯಲು ನೆರವಾಗುತ್ತದೆ. ಇದರಲ್ಲಿ 80 ವಿವಿಧ ಯೋಗ, ಧ್ಯಾನ ವಿಡಿಯೋಗಳು ಇರಲಿವೆ. ಪೂರ್ತಿ ವಿಡಿಯೋ ನೋಡಲು ಹಣ ಪಾವತಿಸಿ ಚಂದದಾರರಾಗಬೇಕು.

ಯೋಗ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಯೋಗ ಸ್ಟುಡಿಯೋ

Image
cure fit

ಕ್ಯೂರ್ ಫಿಟ್

ಕ್ಯೂರ್ ಫಿಟ್ ಫಿಟ್ನೆಸ್ ಸ್ಟುಡಿಯೋ ಹೊರತಂದಿರುವ ಈ ಅಪ್ಲಿಕೇಶನ್, ನಿಮಗೆ ಡ್ಯಾನ್ಸ್, ಬಾಕ್ಸಿಂಗ್ ಮತ್ತು ಯೋಗವನ್ನು ದಿನದ ಎಲ್ಲ ವೇಳೆಯಲ್ಲೂ ನೀಡುತ್ತದೆ. ಯೋಗದ ಜತೆಗೆ ಧ್ಯಾನ, ಇತರ ದೈಹಿಕ ವ್ಯಾಯಾಮ ಚಟುವಟಿಕೆ ನೀಡುತ್ತದೆ. 14 ದಿನಗಳ ಉಚಿತ ಟ್ರಯಲ್ ಇದ್ದು, ನಂತರದಲ್ಲಿ ಸೀಮಿತ ವಿಡಿಯೋ ಉಚಿತವಾಗಿ ದೊರೆಯಲಿದೆ. 

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಕ್ಯೂರ್ ಫಿಟ್

Image
simply yoga

ಸಿಂಪ್ಲೀ ಯೋಗ

ಯೋಗ ಆರಂಭಿಸಿದವರಿಗೆ ಈ ಅಪ್ಲಿಕೇಶನ್ ಸೂಕ್ತ. ಏಕೆಂದರೆ ಇದು ವಿಶೇಷವಾಗಿ ಮೊದಲ ಬಾರಿಗೆ 6 ದಿನಚರಿಗಳ ಟ್ರಯಲ್ ನೀಡುವ ಜೊತೆಗೆ ಪ್ರತಿ ಯೋಗಾಸನಕ್ಕೂ 20-60 ನಿಮಿಷಗಳವರೆಗೆ ಸಲಹೆ ನೀಡುತ್ತದೆ. ಪ್ರತಿ ವಿಡಿಯೋ ಸ್ಪಷ್ಟ ಮತ್ತು ನಿಖರ ಸೂಚನೆಯೊಂದಿಗೆ ಬರುತ್ತದೆ. ಭಂಗಿಯನ್ನು ಯಾವಾಗ ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು, ಹಾಗೆಯೇ ಅವುಗಳನ್ನು ಹೇಗೆ ಪ್ರವೇಶಿಸಬೇಕು ಎಂಬ ನಿರ್ದೇಶನ ಕೂಡ ನೀಡಲಿದೆ.

ಯೋಗ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಸಿಂಪ್ಲೀ ಯೋಗ

Image
grookker

ಗ್ರೋಕರ್

ಗ್ರೋಕರ್ ಅತ್ಯುತ್ತಮ ಮತ್ತು ಉಚಿತ ಯೋಗ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಮ್ಮ ದಿನಚರಿಯ ಯೋಗ ಬಳಕೆಗೆ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಯೋಗ, ಧ್ಯಾನ ಮತ್ತು ಸಾಮಾನ್ಯ ಫಿಟ್ನೆಸ್ ಸಲಹೆಗಳು ಹಾಗೂ ಆರೋಗ್ಯಕರ ಅಡುಗೆ ವಿಷಯವನ್ನು ಒಳಗೊಂಡಂತೆ 1000 ವಿಡಿಯೋಗಳನ್ನು ನೀಡಲಿದೆ. ಜೊತೆಗೆ ವಿವಿಧ ಸವಾಲುಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಕೂಡ ವೀಕ್ಷಿಸಬಹುದು. 

ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಗ್ರೋಕರ್ 

Image
down dog

ಡೌನ್ ಡಾಗ್ 

ಡೌನ್ ಡಾಗ್ ಉಚಿತ ಅಪ್ಲಿಕೇಶನ್ ಆಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉನ್ನತ ದರ್ಜೆಯ ಅಪ್ಲಿಕೇಶನ್ ಇದಾಗಿದೆ. ಇದರಲ್ಲಿ ಆರು ಭಾಷೆಯ ತರಬೇತುದಾರರು ಮತ್ತು ವ್ಯಾಯಾಮ ವಿವರಣೆಗಳ ಜೊತೆಗೆ ಒಂಬತ್ತು ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಹಾಗೂ ಹಲವು ವೈಶಿಷ್ಟ್ಯಗಳನ್ನು ಒಳಗೊಂದಿದ್ದು, ಈ ಅಪ್ಲಿಕೇಶನ್ ನಿಜವಾಗಿಯೂ ತಲ್ಲೀನಗೊಳಿಸುವ ಯೋಗ ಭಂಗಿ ಚಿತ್ರಗಳ ಜೊತೆಗೆ ಬಳಕೆದಾರು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. 

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಡೌನ್ ಡಾಗ್ 

Image
Glow Yoga

ಗ್ಲೋ ಯೋಗ ಮತ್ತು ಮೆಡಿಟೇಶನ್

ಯೋಗದೊಂದಿಗೆ ಸಂಗೀತವನ್ನು ಅದ್ಭುತ ಪರಿಣಾಮಕ್ಕೆ ಜೋಡಿಸುವಲ್ಲಿ ಈ ಅಪ್ಲಿಕೇಶನ್ ವಿಶಿಷ್ಟವಾಗಿದೆ. ಈ ಪಟ್ಟಿಯಲ್ಲಿರುವ ಇತರ ಉಚಿತ ಯೋಗ ಅಪ್ಲಿಕೇಶನ್‌ಗಳು ಹಿತವಾದ ಸಂಗೀತವನ್ನು ಬಳಸುತ್ತವೆಯಾದರೂ, ಈ ಅಪ್ಲಿಕೇಶನ್ ಇನ್ನೂ ಹೆಚ್ಚು ವೈಶಿಷ್ಟ್ಯ ನೀಡಲಿದೆ. ಇದರಲ್ಲಿ ಶಿಕ್ಷಕರು ಪ್ರಮಾಣೀಕರಿಸಲ್ಪಟ್ಟಿದ್ದಾರೆ ಮತ್ತು ಪ್ರಪಂಚದಾದ್ಯಂತ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಈ ಅಪ್ಲಿಕೇಶನ್ ಅದರ ಶೋಧನೆ ಕಾರ್ಯಗಳಿಗಾಗಿ ಹೆಚ್ಚು ಒತ್ತು ನೀಡಲಿದೆ, ಇದು ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಒತ್ತಡ ಕಡಿಮೆ ಮಾಡುವಂತಹ ನಿರ್ದಿಷ್ಟ ವರ್ಗಗಳನ್ನು ಹುಡುಕಲು ನಿಮಗೆ ಅನುವು ಮಾಡಿಕೊಡುತ್ತದೆ.

ಯೋಗ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಗ್ಲೋ ಯೋಗ ಮತ್ತು ಮೆಡಿಟೇಶನ್

Image
track yoga

ಟ್ರ್ಯಾಕ್ ಯೋಗ

ನೀವು ಎಂದಾದರೂ ಪ್ರೇರಣೆಯ ಕೊರತೆ ಕಂಡುಕೊಂಡರೆ ಮತ್ತು ಜೀವನದಲ್ಲಿ ಕೆಲವು ಪ್ರೋತ್ಸಾಹಗಳ ಅಗತ್ಯವಿದ್ದರೆ, ಟ್ರ್ಯಾಕ್ ಯೋಗವು ನಿಮಗಾಗಿ ಅತ್ಯುತ್ತಮ ಮತ್ತು ಉಚಿತ ಯೋಗ ಅಪ್ಲಿಕೇಶನ್ ಆಗಿದೆ. ಯೋಗ ಭಂಗಿಯನ್ನು ಯಾವಾಗ ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು, ಹಾಗೆಯೇ ಅವುಗಳನ್ನು ಹೇಗೆ ಪ್ರವೇಶಿಸಬೇಕು ಎಂಬ ಸಂಪೂರ್ಣ ನಿರ್ದೆಶನ ಕೂಡ ಈ ಅಪ್ಲಿಕೇಶನ್ ನೀಡಲಿದೆ.

ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಟ್ರ್ಯಾಕ್ ಯೋಗ 

Image
Asana Rebel Image

ಆಸನ ರೆಬೆಲ್

ಜೀವನಶೈಲಿ ಬದಲಾವಣೆ ಮಾಡಲು ಬಯಸಿದರೆ ಆಸನ ರೆಬೆಲ್‌ವೊಂದು ಅತ್ಯುತ್ತಮ ಉಚಿತ ಯೋಗ ಅಪ್ಲಿಕೇಶನ್. ಇದು ಆಹಾರದ ಸಲಹೆಗಳು, ವ್ಯಾಯಾಮ ಮತ್ತು ಯೋಗ ವೀಡಿಯೋಗಳನ್ನು ನೀಡಲಿದೆ. ಸುಸ್ಥಿರ ಜೀವನಶೈಲಿ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುವ ಗುರಿಯನ್ನು ಈ ಅಪ್ಲಿಕೇಶನ್ ಹೊಂದಿದೆ ಮತ್ತು ಇದು ಆರೋಗ್ಯಕ್ಕೆ ಎಲ್ಲ ಒಳಗೊಳ್ಳುವ ವಿಧಾನ ತೆಗೆದುಕೊಳ್ಳುತ್ತದೆ ಹಾಗೂ ಉಚಿತವಾಗಿದೆ. ಇದಿಷ್ಟು ಯೋಗದಿನದ ವಿಶೇಷ ಉಚಿತ ಯೋಗ ಅಪ್ಲಿಕೇಶನ್‌ಗಳು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ ಆಸನ ರೆಬೆಲ್

ನಿಮಗೆ ಏನು ಅನ್ನಿಸ್ತು?
1 ವೋಟ್