ಆನ್‌ಲೈನ್ ಫುಡ್‌ ಡೆಲಿವರಿ ಆ್ಯಪ್ ಝೊಮ್ಯಾಟೋ, ಸ್ವಿಗ್ಗಿ ಸೇವೆಯಲ್ಲಿ ವ್ಯತ್ಯಯ

  • ಕಳೆದ ಎರಡು ಗಂಟೆಯಿಂದ ಆಹಾರ ಬುಕ್‌ ಮಾಡಲು ಸಾಧ್ಯವಾಗುತ್ತಿಲ್ಲ
  • ತಾಂತ್ರಿಕ ತೊಡಕನ್ನು ನಿವಾರಿಸುತ್ತಿರುವುದಾಗಿ ತಿಳಿಸಿದ ಕಂಪನಿಗಳು

ತಾವಿರುವಲ್ಲಿಗೆ ಬಿಸಿಬಿಸಿ ಆಹಾರ ತಲುಪಿಸುವ ಆನ್‌ಲೈನ್ ಫುಡ್‌ ಡೆಲಿವರಿ ಅಪ್ಲಿಕೇಷನ್‌ಗಳಾದ (ಆ್ಯಪ್) ಝೊಮ್ಯಾಟೋ ಮತ್ತು ಸ್ವಿಗ್ವಿ, ಬುಧವಾರ ಮಧ್ಯಾಹ್ನ ಭಾರತದ ಹಲವು ನಗರಗಳಲ್ಲಿ ಏಕಕಾಲದಲ್ಲಿ ಸ್ಥಗಿತಗೊಂಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಎರಡು ಗಂಟೆಯಿಂದ ಈ ಆ್ಯಪ್‌ಗಳಲ್ಲಿ ಊಟ ಕಾಯ್ದಿರಿಸಲು ಮತ್ತು ಊಟದ ಮೆನು ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ದಾಖಲಿಸುತ್ತಿದ್ದಾರೆ. ಡೌನ್ ಡಿಟೆಕ್ಟರ್‌ನಲ್ಲಿ ಝೊಮ್ಯಾಟೋ ಆ್ಯಪ್ ಸರ್ವರ್ ಡೌನ್ ಆಗಿರುವ ಬಗ್ಗೆ ವಿವರಗಳಿದ್ದು, ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ 3544 ದೂರುಗಳು ದಾಖಲಾಗಿವೆ.

Image
Zomato

ಇದಕ್ಕೆ ಸಂಬಂಧಿಸಿದಂತೆ ಎರಡೂ ಕಂಪನಿಗಳ ಗ್ರಾಹಕ ಸೇವಾ ವಿಭಾಗವು ಬಳಕೆದಾರರ ಸಂದೇಶಗಳಿಗೆ ಪ್ರತಿಕ್ರಿಯಿಸಿದ್ದು,  ಆ್ಯಪ್‌ನಲ್ಲಿ ಉಂಟಾಗಿರುವ ತಾತ್ಕಾಲಿಕ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್