ಸಂದರ್ಶನ| ಪಠ್ಯ ಪರಿಷ್ಕರಣೆಯಿಂದ ಮಕ್ಕಳಿಗೆ ಒಳಿತಾಗಲ್ಲ ವಿ ಪಿ ನಿರಂಜನಾರಾಧ್ಯ

ವಿ ಪಿ ನಿರಂಜನಾರಾಧ್ಯ ಅವರು ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು. ಶಿಕ್ಷಣ ವ್ಯವಸ್ಥೆ ಹೇಗಿರಬೇಕು, ಮಕ್ಕಳು ಏನನ್ನು ಕಲಿಯಬೇಕು, ಯಾವ ಭಾಷೆಯಲ್ಲಿ ಕಲಿಯಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಬೆರಳೆಣಿಕೆಯ ಜನರಲ್ಲಿ ನಿರಂಜನಾರಾಧ್ಯ ಒಬ್ಬರು. ಅವರು ಈ ದಿನ.ಕಾಮ್ ಜೊತೆ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪಠ್ಯ ಪರಿಷ್ಕರಣಾ ಪ್ರಕ್ರಿಯೆಯು ಅಸಾಂವಿಧಾನಿಕವಾಗಿದೆ, ಅಪ್ರಜಾಸತ್ತಾತ್ಮಕವಾಗಿದೆ; ಸರ್ಕಾರ ರೋಹಿತ್ ಚಕ್ರತೀರ್ಥನನ್ನು ಬೆಂಬಲಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವುತ್ತಿದೆ; ಪಠ್ಯ ಪರಿಷ್ಕರಣೆ ಹೆಸರಲ್ಲಿ ಏನೆಲ್ಲ ನಡೆದಿದೆ ಎಂದು ಗೊತ್ತಾಗಬೇಕಾದರೆ ಸರ್ಕಾರ ತಕ್ಷಣವೇ ಶ್ವೇತ ಪತ್ರ ಹೊರಡಿಸಬೇಕು ಎಂದು ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್