ಕೊಡಗು | ಗಾಳಿ ಸಹಿತ ಮಳೆ: ಮರ ಬಿದ್ದು ಕೂಲಿ ಕಾರ್ಮಿಕ ಸಾವು

kodagu
  • ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ
  • ಸ್ಥಳದಲ್ಲಿಯೇ ಮೃತಪಟ್ಟ ಕಾರ್ಮಿಕ ಪ್ರಕಾಶ್

ಕೊಡಗು ಜಿಲ್ಲಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಗಾಳಿಯ ರಭಸಕ್ಕೆ ಮರವೊಂದು ಕೊಲಿ ಕಾರ್ಮಿಕನ ಮೇಲೆ ಬಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಗುಹ್ಯ ಗ್ರಾಮದ ಕಾರ್ಮಿಕ ಕೆ ಕೆ ಪ್ರಕಾಶ್ (45) ಮೃತ ದುರ್ದೈವಿ. ತಾಲೂಕಿನ ಅಮ್ಮತ್ತಿ ಹೊಸಕೋಟದಲ್ಲಿ ಜೋರಾಗಿ  ಗಾಳಿ ಬೀಸಿದ ಪರಿಣಾಮ ಮರ ಬಿದ್ದು, ಘಟನೆ ಸಂಭವಿಸಿದೆ.

ಗುರುವಾರ ಬೆಳಿಗ್ಗೆ ಪ್ರಕಾಶ್‌ ಅವರು ಕೆಲಸಕ್ಕಾಗಿ ಅಮ್ಮತ್ತಿ ಹೊಸಕೋಟದ ಕಾಫಿ ತೋಟಕ್ಕೆ ಹೋಗಿದ್ದಾರೆ. ಕೆಲಸ ಮಾಡುವ ಸಂದರ್ಭದಲ್ಲಿ ಮರವೊಂದು ತಲೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಜ್ಯಾದ್ಯಂತ ಮುಂದುವರೆದ ಮಳೆ ಆರ್ಭಟ: ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ

ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರೆ ಅರ್ಚನಾ ಭಟ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು, ಮರಗಳು ಉರುಳಿಬದ್ದಿವೆ. ಹಲವಾರು ಕಡೆ ಭೂಕುಸಿತ ಉಂಟಾಗಿದೆ. ಅಪಾರ ಪ್ರಮಾಣ ಆಸ್ತಿ ಹಾನಿಯಾಗಿದ್ದು, ಜಾನುವಾರು ಸೇರಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್