ಒಲೆ ಮುಂದೆ ಬೆಂದವರ ಒಡಲ ಸಂಕಟ | ಎರಡನೇ ದಿನಕ್ಕೆ ಬಿಸಿಯೂಟ ನೌಕರರ ಹೋರಾಟ ಮುಂದುವರಿಕೆ

midday meal workers
  • ನೌಕರರ ಸಮಸ್ಯೆಗೆ ಕಿವಿಗೊಡದ ಸರ್ಕಾರದ ವಿರುದ್ಧ ಆಕ್ರೋಶ
  • ರಾಜ್ಯ ಬಿಸಿಯೂಟ ನೌಕರರ ಹೋರಾಟ ಮುಂದುವರಿಕೆ

ಬಿಸಿಯೂಟ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟವನ್ನು ಎರಡನೇ ದಿನಕ್ಕೆ ಮುಂದುವರಿಸಲಾಗುವುದು ಎಂದು ಬಿಸಿಯೂಟ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ಎಂಟು ಜಿಲ್ಲೆಗಳಿಂದ ಸಾವಿರಾರು ಬಿಸಿಯೂಟ ನೌಕರರು ಸೇರಿದ್ದು, ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.  

"ಬಡ ಮಹಿಳೆಯರ ಪ್ರತಿಭಟನೆ ಕುರಿತು ಇದುವರೆಗೂ ಯಾವುದೇ ಜನಪ್ರತಿನಿಧಿಗಳಾಗಲಿ, ಶಿಕ್ಷಣ ಸಚಿವರಾಗಲಿ ಇತ್ತ ಗಮನಹರಿಸಿಲ್ಲ ಹಾಗಾಗಿ ಈ ಹೋರಾಟವನ್ನು ನಾವು ಎರಡನೇ ದಿನಕ್ಕೆ ಮುಂದುವರೆಸುವುದಾಗಿ ತೀರ್ಮಾನಿಸಲಾಗಿದೆ" ಎಂದು ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಈದಿನ.ಕಾಮ್‌ಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

"ಬಿಸಿಯೂಟ ನೌಕರರು ತಮ್ಮ ಬೇಡಿಕೆಗಳಿಗಾಗಿ ಮತ್ತು ಮಾಸಿಕ ವಂತಿಗೆ ಆಧಾರಿತ ನಿವೃತ್ತಿ ವೇತನವನ್ನು ನಿಗದಿಪಡಿಸಬೇಕೆಂದೂ ಹಲವು ವರ್ಷಗಳಿಂದ ಒತ್ತಾಯ ನಡೆಸಿದರೂ ನಿವೃತ್ತಿ ಸೌಲಭ್ಯ ಕೊಡದೇ ರಾಜ್ಯದಲ್ಲಿ 6,500ಕ್ಕೂ ಹೆಚ್ಚಿನ ಬಿಸಿಯೂಟ ನೌಕರರನ್ನು 60 ವರ್ಷ ವಯಸ್ಸಾಗಿದೆ ಎಂದು ಕೆಲಸದಿಂದ ವಜಾ ಮಾಡಲಾಗಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ನಾವು ನಡೆಸುತ್ತಿರುವ ಹೋರಾಟಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದಿರುವುದರಿಂದ ಹೋರಾಟ ಆರಂಭವಾಗಿರುವ ಸ್ಥಳದಲ್ಲಿಯೇ ಅಹೋರಾತ್ರಿ ಹೋರಾಟ ನಡೆಸುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖುದ್ದು ಸಭೆ ನಡೆಸಿ ನೌಕರರ ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ" ಎಂದು ಅವರು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್