ತಿಮ್ಮಪ್ಪನ ತಿರುಪತಿಯಲ್ಲಿ ಹೆರಿಗೆಗೆ ಆಸ್ಪತ್ರೆ ನಕಾರ; ನಡುರಸ್ತೆಯಲ್ಲೇ ಮಗುವಿಗೆ ಜನ್ಮನೀಡಿದ ಬಡ ಗರ್ಭಿಣಿ

women delivary on road
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ
  • ಮಹಿಳೆ ಗರ್ಭಿಣಿ ಎಂದು ತಿಳಿದಿರಲಿಲ್ಲ ಎಂದ ಅಧಿಕಾರಿಗಳು

ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗರ್ಭಣಿಯೊಬ್ಬರು ಆಸ್ಪತ್ರೆಯ ಎದುರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸುವಂತೆ ತಿರುಪತಿ ಜಿಲ್ಲಾಧಿಕಾರಿ ಕೆ.ವೆಂಕಟರಮಣ ರೆಡ್ಡಿ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯು. ಶ್ರೀಹರಿ ಅವರಿಗೆ ಸೂಚನೆ ನೀಡಿದ್ದಾರೆ.

ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆಗ 'ಅಟೆಂಡರ್‌' ಇಲ್ಲದ ಕಾರಣವೊಡ್ಡಿ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದ್ದರು. ಬಳಿಕ ಗರ್ಭಿಣಿ ಹೆರಿಗೆ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆಸ್ಪತ್ರೆ ಅಧಿಕಾರಿಗಳ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

ಅಕ್ಕಪಕ್ಕದಲ್ಲಿನ ಮಹಿಳೆಯರ ಸಹಾಯದಿಂದ ಮಹಿಳೆಗೆ ಹೆರಿಗೆಯಾಗಿದೆ. ಬಳಿಕ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. 

ನಿರ್ಗತಿಕ ಮಹಿಳೆಯನ್ನು ಕಾಂತಾರಿ ಎಂದು ಗುರುತಿಸಲಾಗಿದೆ, ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ದಾಖಲಿಸಲು ನಿರಾಕರಿಸಿದ ನಂತರ ಕೆಲವು ಸ್ಥಳೀಯರ ಸಹಾಯದಿಂದ ತನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಆಸ್ಪತ್ರೆಯ ಅಧಿಕಾರಿಗಳು ಮಹಿಳೆ ತಾನು ಗರ್ಭಿಣಿ ಎಂದು ತಿಳಿಸಿಲ್ಲ ಮತ್ತು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಇರಾನ್‌ ಹಿಜಾಬ್‌ ಆಂದೋಲನ | ಸಾರ್ವಜನಿಕವಾಗಿ ಹಿಜಾಬ್‌ ತೆಗೆದ ನಟಿಯ ಬಂಧನ

ಘಟನೆಯ ಕುರಿತು ಆಸ್ಪತ್ರೆಯ ಅಧಿಕಾರಿಗಳು ಸಮರ್ಥಿಕೊಂಡಿದ್ದು, ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ವೈದ್ಯಕೀಯ ಪರಿಶೀಲನಾ ಅಧಿಕಾರಿ ವೆಂಕಟರಮಣ ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಿರುಪತಿ ಜಿಲ್ಲಾಧಿಕಾರಿ ಕೆ.ವೆಂಕಟರಮಣ ರೆಡ್ಡಿ ಕೂಡ ಡಿಎಚ್‌ಒ ಶ್ರೀಹರಿ ಅವರನ್ನು ಕರೆಸಿದ್ದರು. ಹೆರಿಗೆ ಆಸ್ಪತ್ರೆಯ ಹೊರಗೆ ರಸ್ತೆಯಲ್ಲೇ ಮಹಿಳೆ ಮಗುವಿಗೆ ಜನ್ಮನೀಡಿರುವ ಘಟನೆಯ ಬಗ್ಗೆ ವರದಿ ನೀಡುವಂತೆ ಡಿಎಂಎಚ್‌ಒಗೆ ಸೂಚನೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180