ಅಮೆರಿಕ-ರಷ್ಯಾ ಪರಮಾಣು ಯುದ್ಧವಾದರೆ 5 ಶತಕೋಟಿ ಮಂದಿ ಸಾವು: ವರದಿ

  • ಪರಮಾಣು ಯುದ್ಧ ಸಂಭವಿಸದಂತೆ ನಾವು ತಡೆಯಬೇಕು
  • ಆಹಾರ ಉತ್ಪಾದನೆಯ ಮೇಲೆ ವಿನಾಶಕಾರಿ ಪರಿಣಾಮ

ಒಂದು ವೇಳೆ ಅಮೆರಿಕ ಮತ್ತು ರಷ್ಯಾ ನಡುವೆ ಪೂರ್ಣ ಪ್ರಮಾಣದ ಪರಮಾಣು ಯುದ್ಧ ಸಂಭವಿಸಿದರೆ 5 ಶತಕೋಟಿ ಮಂದಿ ಸಾವನ್ನಪ್ಪಬಹುದು ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ವರದಿ ಬಹಿರಂಗ ಪಡಿಸಿದೆ. ಪರಮಾಣು ಯುದ್ಧದ ನಂತರ ಜಾಗತಿಕ ಕ್ಷಾಮ ಉಂಟಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪರಮಾಣು ಯುದ್ಧ ಮಾರಣಾಂತಿಕ ಸ್ಫೋಟಗಳಿಂದ ಸಂಭವಿಸುವ ಸಾವು-ನೋವುಗಳನ್ನು ಮೀರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕ-ರಷ್ಯಾ ನಡುವಿನ ಪೂರ್ಣ ಪ್ರಮಾಣದ ಪರಮಾಣು ಯುದ್ಧ ಮನುಕುಲದ ಅರ್ಧದಷ್ಟನ್ನು ನಾಶಗೊಳಿಸಬಹುದು ಎಂದು ‘ನೇಚರ್ ಫುಡ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ವಿಜ್ಞಾನಿಗಳ ತಂಡ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ? ಈಜುಕೊಳ ನಿರ್ಮಾಣ: ವಿವಾದದಲ್ಲಿ ಸಿಲುಕಿಕೊಂಡ ಇಂಗ್ಲೆಂಡ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್‌

ಪರಮಾಣು ಶಸ್ತ್ರಾಸ್ತ್ರಗಳ ಸ್ಫೋಟದಿಂದ ಉಂಟಾಗುವ ಬೆಂಕಿಯಿಂದಾಗಿ ವಾತಾವರಣದಲ್ಲಿ ಸೇರುವ ಮಾಲಿನ್ಯವು ಜಾಗತಿಕ ಆಹಾರ ಉತ್ಪಾದನೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು. ಇದರಿಂದಾಗಿ ದೀರ್ಘಕಾಲ ಆಹಾರದ ಕೊರತೆ ಉಂಟಾಗುತ್ತದೆ ಎಂದು ಎಂದು ವಿಜ್ಞಾನಿಗಳ ತಂಡ ಅಂದಾಜಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಐದು ವರ್ಷದವರೆಗೆ ಬೆಳೆ ಇಳುವರಿಯಲ್ಲಿ ಸುಮಾರು 7% ಕುಸಿತಕ್ಕೆ ಕಾರಣವಾಗಬಹುದು. ಆದರೆ ಅಮೆರಿಕ-ರಷ್ಯಾ ಯುದ್ಧವು 3ರಿಂದ 4 ವರ್ಷದಲ್ಲೇ ಆಹಾರ ಉತ್ಪಾದನೆಯಲ್ಲಿ 90%ದಷ್ಟು ಕುಸಿತಕ್ಕೆ ಕಾರಣವಾಗುತ್ತದೆ.

ಪ್ರಸ್ತುತ ಪಶು ಆಹಾರವಾಗಿ ಬಳಸುವ ಬೆಳೆಯನ್ನು ಬಳಸುವುದು ಅಥವಾ ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದರಿಂದ ಸಂಘರ್ಷದ ನಂತರದ ಸಮಸ್ಯೆಗೆ ತುಸು ಪರಿಹಾರ ಒದಗಿಸಬಹುದೇ ಎಂಬ ಬಗ್ಗೆಯೂ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಪರಮಾಣು ಯುದ್ಧ ಸಂಭವಿಸದಂತೆ ನಾವು ತಡೆಯಬೇಕು ಎಂಬ ವಿಷಯವನ್ನು ಈ ಅಂಕಿ ಅಂಶ ನಮಗೆ ತಿಳಿಸುತ್ತದೆ ಎಂದು ವಿವಿಯ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ಅಲಾನ್ ರೊಬೊಕ್ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್