75ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿ 'ಭಾರತ ನಮ್ಮ ಮಿತ್ರ ದೇಶ' ಎಂದ ಅಮೆರಿಕ ಅಧ್ಯಕ್ಷ

  • ಅಮೆರಿಕಕ್ಕೆ ಭಾರತ ಉತ್ತಮ ಪಾಲುದಾರ 
  • ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದೆ

75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ಭಾರತೀಯರಿಗೆ ಶುಭಕೋರಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, 'ಭಾರತ ತನ್ನ ಪರಮಾಪ್ತ' ದೇಶವೆಂದು ಬಣ್ಣಿಸಿದ್ದಾರೆ.

'ಮುಂಬರುವ ಸವಾಲುಗಳನ್ನ ಎದುರಿಸಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಅಮೆರಿಕಕ್ಕೆ ಭಾರತ ಉತ್ತಮ ಪಾಲುದಾರ' ಎಂದು ಭಾರತವನ್ನು ಅಭಿನಂದಿಸಿ ಜೋ ಬೈಡನ್‌ ಶುಭ ಕೋರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75 | ಭಾರತದ ಪ್ರಜೆಗಳಾದ ನಾವು; ಸಂವಿಧಾನದ ಮುನ್ನುಡಿಯ ಗಾನ

"ಮಹಾತ್ಮಾ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ನಿರಂತರ ಸಂದೇಶದಿಂದ ಮಾರ್ಗದರ್ಶಿಸಲ್ಪಟ್ಟ ತನ್ನ ಪ್ರಜಾಪ್ರಭುತ್ವದ ಪ್ರಯಾಣವನ್ನು ಗೌರವಿಸಲು ಭಾರತದ ಜನರೊಂದಿಗೆ ಅಮೆರಿಕ ಯಾವುದೇ ಸಂದರ್ಭದಲ್ಲೂ ಬೆನ್ನಿಗೆ ನಿಲ್ಲುತ್ತದೆ ಎಂದು ಹೇಳಿದ್ದು, ಮಾನವ ಸ್ವಾತಂತ್ರ್ಯವನ್ನು ರಕ್ಷಿಸುವುದು ಉಭಯ ದೇಶಗಳ ಗುರಿ ಎಂದಿದ್ದಾರೆ.

ಮುಂದಿನ ವರ್ಷಗಳಲ್ಲಿ ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ನಿಯಮಾಧಾರಿತ ಆದೇಶವನ್ನು ರಕ್ಷಿಸಲು ಒಟ್ಟಾಗಿ ನಿಲ್ಲುತ್ತವೆ ಎಂಬ ವಿಶ್ವಾಸವಿದೆ. ನಮ್ಮ ಜನರಿಗೆ ಹೆಚ್ಚಿನ ಶಾಂತಿ, ಸಮೃದ್ಧಿ ಮತ್ತು ಭದ್ರತೆಯನ್ನು ಬೆಳೆಸುವುದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವ್ಯಾಪಾರವನ್ನು ಗಟ್ಟಿಗೊಳಿಸುವುದು ಮತ್ತು ಪ್ರಪಂಚದಾದ್ಯಂತ ನಾವು ಎದುರಿಸುತ್ತಿರುವ ಸವಾಲುಗಳನ್ನು ಒಟ್ಟಿಗೆ ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಜೋ ಬೈಡನ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್