
- ಭಾರತೀಯ ಮೂಲದ ಇನ್ನೊಬ್ಬ ಅಭ್ಯರ್ಥಿ ಸಂದೀಪ್ ಶ್ರೀವಾತ್ಸವ್ಗೆ ಟೆಕ್ಸಾಸ್ನಲ್ಲಿ ಸೋಲು
- ರಾಜ್ಯಗಳ ಶಾಸನ ಸಭೆಗಳಿಗೂ ಹಲವಾರು ಮಂದಿ ಭಾರತೀಯ ಮೂಲದವರು ಆಯ್ಕೆ
ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಹೌಸ್ ಆಫ್ ರೆಪ್ರಸೆಂಟಿಟೀವ್ಸ್ಗೆ (ಕೆಳಮನೆ) ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಹಾಗೂ ಉದ್ಯಮಿ ಶ್ರೀ ಥಾಣೇದಾರ್ ಆಯ್ಕೆಯಾಗಿದ್ದಾರೆ.
ಮಿಷಿಗನ್ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಸೋಲಿಸುವ ಮೂಲಕ ಥಾಣೇದಾರ್ (67) ಅವರು ಈ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಭಾರತೀಯ ಮೂಲದವರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಷ್ಯಾ- ಉಕ್ರೇನ್ ಯುದ್ಧ | ತೈಲ ಖರೀದಿಗೆ ಸಮರ್ಥನೆ ನೀಡಿದ ಜೈ ಶಂಕರ್; ಪುಟಿನ್ ಜೊತೆ ಝೆಲೆನ್ಸ್ಕಿ ಮಾತುಕತೆ
ರಾಜಾ ಕೃಷ್ಣಮೂರ್ತಿ(49) ಇಲಿನಾಯ್ಸ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶಿಸಿದ್ದಾರೆ. ಕ್ಯಾಲಿಫೋರ್ನಿಯಾದಿಂದ ರೋ ಖನ್ನಾ(46) 3ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಪ್ರಮೀಳಾ ಜಯಪಾಲ್ (57) ವಾಷಿಂಗ್ಟನ್ನಿಂದ ಆಯ್ಕೆಯಾಗಿದ್ದಾರೆ.
ರಾಜ್ಯಗಳ ಶಾಸನ ಸಭೆಗಳಿಗೂ ಹಲವಾರು ಮಂದಿ ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ. ಮೇರಿಲ್ಯಾಂಡ್ನಲ್ಲಿ ಅರುಣಾ ಮಿಲ್ಲರ್ ಲೆಫ್ಟಿನೆಂಟ್ ಗವರ್ನರ್ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮೂಲದವರು. ಆದರೆ ಭಾರತೀಯ ಮೂಲದ ಇನ್ನೊಬ್ಬ ಅಭ್ಯರ್ಥಿ ಸಂದೀಪ್ ಶ್ರೀವಾತ್ಸವ್ ಅವರು ಟೆಕ್ಸಾಸ್ನಲ್ಲಿ ಸೋಲು ಅನುಭವಿಸಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯ ಶೇ. 1ರಷ್ಟಿರುವ ಭಾರತೀಯ ಮೂಲದವರು ಈ ಮಧ್ಯಂತರ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.