
- ಉತ್ತರ ಕೊರಿಯಾದಿಂದ ಯಾವುದೇ ರೀತಿಯ ಶಸ್ತ್ರಾಸ್ತ್ರವನ್ನು ರಫ್ತು ಮಾಡಿಲ್ಲ
- ಶೆಲ್ ಮತ್ತು ರಾಕೆಟ್ಗಳನ್ನು ಉತ್ತರ ಕೊರಿಯಾದಿಂದ ಖರೀದಿಸುತ್ತಿರುವ ರಷ್ಯಾ
ರಷ್ಯಾ-ಉಕ್ರೇನ್ ವಿರುದ್ಧದ ಯುದ್ಧಕ್ಕೆ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದೆ ಎಂಬ ಅಮೆರಿಕದ ಆರೋಪವನ್ನು ಉತ್ತರ ಕೊರಿಯ ತಳ್ಳಿ ಹಾಕಿದೆ.
ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರಿಸಲು, ರಷ್ಯಾದ ಬಳಿ ಇದ್ದ ಶಸ್ತ್ರಾಸ್ತ್ರಗಳು ಖಾಲಿಯಾಗಿದೆ. ಹೀಗಾಗಿ ಉತ್ತರ ಕೊರಿಯಾದಿಂದ ರಷ್ಯಾ ಶೆಲ್ ಮತ್ತು ರಾಕೆಟ್ಗಳನ್ನು ಖರೀದಿಸುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು.
ಉತ್ತರ ಕೊರಿಯಾದಿಂದ ಯಾವುದೇ ರೀತಿಯ ಶಸ್ತ್ರಾಸ್ತ್ರವನ್ನು ರಫ್ತು ಮಾಡಿಲ್ಲ. ಮುಂದೆ ಕಳುಹಿಸಿಕೊಡುವ ಅಗತ್ಯವೂ ಇಲ್ಲ ಎಂದು ಉತ್ತರ ಕೊರಿಯ ಪ್ರತಿಕ್ರಿಯಿಸಿದೆ. ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಗೆ ಶಸ್ತ್ರಾಸ್ತ್ರ ಒದಗಿಸುವ ಮತ್ತು ಇತರ ಯಾವುದೇ ಸಹಾಯವನ್ನು ಮಾಡಿಲ್ಲ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಇರಾನ್ ಹಿಜಾಬ್ ಆಂದೋಲನ | ಇಂಟರ್ನೆಟ್ ಸ್ಥಗಿತ; ಎಂಟು ಮಂದಿ ಸಾವು
ಸೆಪ್ಟೆಂಬರ್ನಲ್ಲಿ ಉತ್ತರ ಕೊರಿಯ ರಷ್ಯಾಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡಲಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬಿ ಹೇಳಿಕೆ ನೀಡಿದ್ದರು.
ಉಕ್ರೇನ್ ಗಡಿಯಲ್ಲಿ ಸೇನೆ ಜಮಾವಣೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಷ್ಯಾದಲ್ಲಿರುವ ಮಾಜಿ ಸೈನಿಕರು, ವಿದ್ಯಾರ್ಥಿಗಳು ಹಾಗೂ ಸುಮಾರು 3 ಲಕ್ಷ ಮಂದಿ ದೇಶ ತೊರೆದು ವಿಮಾನಗಳ ಮೂಲಕ ಪಲಾಯನ ಮಾಡಿದ್ದಾರೆ. ಇನ್ನೂ ಹಲವರು ಪಲಾಯನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಮುಂಜಾನೆ ದೂರದರ್ಶನದಲ್ಲಿ ನಾವು ಯಾವುದಕ್ಕೂ ಹೆದರುವುದಿಲ್ಲ. ನಮ್ಮ ದೇಶದ ನಾಗರಿಕರನ್ನು ಕಾಪಾಡುವುದು ನಮ್ಮ ಗುರಿ. ಪೂರ್ಣ ಪ್ರಮಾಣದ ಸೇನೆಯನ್ನು ಡಾನ್ಬಾಸ್ ಪ್ರದೇಶದಲ್ಲಿ ಜಮಾವಣೆ ಮಾಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು.
ಇದಾದ ಬಳಿಕ ರಷ್ಯಾದಿಂದ ಹೊರ ಹೋಗುವ ವಿಮಾನಗಳ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ. ಟರ್ಕಿಯ ಇಸ್ತಾಂಬುಲ್, ಅರ್ಮೇನಿಯ ಹಾಗೂ ಯುರೆವಾನ್ಗೆ ವೀಸಾ ಇಲ್ಲದೇ ರಷ್ಯನ್ನರು ಪ್ರವೇಶ ಮಾಡಬಹುದಾಗಿದೆ. ಕೆಲವರು ದುಬೈಗೆ ಪ್ರಯಾಣ ಮಾಡಲು ಟಿಕೆಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.