ಏಷ್ಯಾ ನೋಟ | ಚೀನಾ ವಿರುದ್ಧ ಗುಡುಗಿದ ಅಮೆರಿಕ ಸೇನಾ ಕಮಾಂಡರ್

  • ಚೀನಾದ ನಡೆ ಆಕ್ರಮಣಕಾರಿ ಎಂದ ಅಮೆರಿಕ
  • ತೈವಾನ್‌ ನಮಗೆ ಸೇರಿದ್ದು ಎಂದಿರುವ ಚೀನಾ

ತೈವಾನ್ ಮೇಲಿನ ಕ್ಷಿಪಣಿ ಹಾರಿಸುವ ಚೀನಾದ ನಿರ್ಧಾರವು ‘ಕೋಣೆಯಲ್ಲಿರುವ ಗೊರಿಲ್ಲಾ’ ಯುದ್ಧದಂತೆ. ಅದನ್ನು ವಿರೋಧಿಸಲೇಬೇಕು ಎಂದು ಅಮೆರಿಕದ ಉನ್ನತ ಸೇನಾ ಕಮಾಂಡರ್ ಕಾರ್ಲ್ ಥಾಮಸ್ ಹೇಳಿದ್ದಾರೆ.

'ಚೀನಾ ಈ ರೀತಿಯ ಸಂಚುಗಳನ್ನು ನಾವು ವಿರೋಧಿಸುವುದು ಮುಖ್ಯವಾಗಿದೆ. ಗೊರಿಲ್ಲಾ ತಂತ್ರದ ಮೂಲಕ ತೈವಾನ್ ಮೇಲೆ ಕ್ಷಿಪಣಿ ಹಾರಿಸಿರುವುದು ನಮಗೆ ತಿಳಿದಿದೆ’ ಎಂದು ಅಮೆರಿಕದ ಸೆವೆಂತ್ ಫ್ಲೀಟ್(7ನೇ ನೌಕಾದಳ)ದ ವೈಸ್ ಅಡ್ಮಿರಲ್ ಕಾರ್ಲ್ ಥಾಮಸ್ ಸಿಂಗಾಪುರದಲ್ಲಿ ಮಂಗಳವಾರ ಹೇಳಿದ್ದಾರೆ.

ಚೀನಾ ಯುದ್ಧ ನೀತಿಯನ್ನು ನಾವು ವಿರೋಧಿಸದಿದ್ದರೆ ಮತ್ತು ಮುಂದುವರಿಯಲು ಬಿಟ್ಟರೆ ಅದು ಸಹಜ ಪ್ರಕ್ರಿಯೆಯಾಗಿ ಬಿಡುತ್ತದೆ. ತೈವಾನ್ ಮೇಲಿಂದ ಕ್ಷಿಪಣಿಗಳನ್ನು ಅಂತಾರಾಷ್ಟ್ರೀಯ ಸಮುದ್ರ ಪ್ರದೇಶಕ್ಕೆ ಹಾರಿಸಿರುವುದು ಅತ್ಯಂತ ಬೇಜವಾಬ್ದಾರಿಯ ಕೃತ್ಯ. ಯಾಕೆಂದರೆ ಈ ಪ್ರದೇಶದಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶವಿದೆ ಮತ್ತು ದಿನಾ ಹಲವು ಹಡಗು ಸಂಚರಿಸುವ ಪ್ರದೇಶವಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಗಾಝಾ ಪಟ್ಟಿಯ ಮೇಲೆ ಮುಂದುವರಿದ ಇಸ್ರೇಲ್‌ ದಾಳಿ: ಐವರು ಮಕ್ಕಳ ಸಾವು

ಈ ತಿಂಗಳಾರಂಭದಲ್ಲಿ ತೈವಾನ್ ಸುತ್ತಮುತ್ತ ಚೀನಾ ನಡೆಸಿದ ಸೇನಾ ಸಮರಾಭ್ಯಾಸದಲ್ಲಿ ಕೆಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ತೈವಾನ್ ರಾಜಧಾನಿ ತೈವಾನ್‌ ಮೇಲೆ ಹಾರಿಹೋಗಿವೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ತೈವಾನ್‌ಗೆ ಎದುರಾದ ಬೆದರಿಕೆಯನ್ನು ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿಗೆ ಹೋಲಿಸಿದ ಥಾಮಸ್, ನೀವು ಇದನ್ನು ವಿರೋಧಿಸದಿದ್ದರೆ ಕ್ರಮೇಣ ದಕ್ಷಿಣ ಚೀನಾ ಸಮುದ್ರದ ಸ್ಥಿತಿಗೆ ತಿರುಗುತ್ತದೆ. ಈಗ ಅಲ್ಲಿ ಚೀನಾದ ಮಿಲಿಟರಿ ನೆಲೆ ಸ್ಥಾಪನೆಗೊಂಡಿದೆ. ಅಲ್ಲಿ ಕ್ಷಿಪಣಿಗಳು, ನೌಕೆಗಳು , ಬೃಹತ್ ರನ್‌ವೇ , ರಾಡಾರ್‌ಗಳು, ಸಂದೇಶವಾಹಕ ವ್ಯವಸ್ಥೆ ಎಲ್ಲವನ್ನೂ ಚೀನಾ ಸ್ಥಾಪಿಸಿದೆ ಎಂದು ಹೇಳಿದ್ದಾರೆ. 'ತೈವಾನ್ ತನಗೆ ಸೇರಿದ್ದು,  ಅಗತ್ಯ ಬಿದ್ದರೆ ಬಲಪ್ರಯೋಗ ನಡೆಸಿಯಾದರೂ ವಶಕ್ಕೆ ಪಡೆಯುವುದಾಗಿ' ಚೀನಾ ಘೋಷಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್