ಏಷ್ಯಾ ನೋಟ | ತೈವಾನ್‌ ಜಲಸಂಧಿ ಮೇಲಿನ ಹಿಡಿತ: ಅಮೆರಿಕ, ಚೀನಾ ವಾಗ್ವಾದ

  • ಜಲಸಂಧಿಯಲ್ಲಿ ನಮ್ಮ  ಸೇನಾಬಲ ಹೆಚ್ಚಿಸಲಾಗಿದೆ 
  • ಸಾರ್ವಜನಿಕ ಪ್ರಚೋದನೆ ಕ್ರಮ ಎಂದ ಚೀನಾ   

ಅಂತಾರಾಷ್ಟ್ರೀಯ ಜಲಮಾರ್ಗವಾಗಿ ತೈವಾನ್ ಜಲಸಂಧಿ ಮಾರ್ಗದ ಸ್ಥಾನಮಾನವನ್ನು ದೃಢಪಡಿಸುವ ಇತ್ತೀಚಿನ ಜಂಟಿ ಕಾರ್ಯಾಚರಣೆಯ ಭಾಗವಾಗಿ ಅಮೆರಿಕ- ಕೆನಡಾ ಯುದ್ಧನೌಕೆ ತೈವಾನ್ ಜಲಸಂಧಿಯ ಮೂಲಕ ಸಾಗಿದೆ ಎಂದು ವರದಿಯಾಗಿದೆ.

ತೈವಾನ್ ಮತ್ತು ವಿಶ್ವದ ಅತ್ಯಂತ ಜನನಿಬಿಡ ಜಲಮಾರ್ಗಗಳಲ್ಲಿ ಒಂದಾಗಿರುವ ತೈವಾನ್ ಜಲಸಂಧಿಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. ಆದರೆ ಇದನ್ನು ನಿರಾಕರಿಸುತ್ತಿರುವ ಅಮೆರಿಕ, ತೈವಾನ್ ಜಲಸಂಧಿಯಲ್ಲಿ ಜಲಸಂಚಾರಕ್ಕೆ ಮುಕ್ತ ಸ್ವಾತಂತ್ರ್ಯವಿರಬೇಕು. ಇದು ಅಂತಾರಾಷ್ವ್ರಿಯ ಜಲಮಾರ್ಗ ಎಂದು ಪ್ರತಿಪಾದಿಸುತ್ತಿದ್ದು ಅಮೆರಿಕದ ಈ ನಡೆಯನ್ನು ಪಾಶ್ಚಿಮಾತ್ಯ ಮಿತ್ರದೇಶಗಳು ಬೆಂಬಲಿಸಿವೆ.

ಅಮೆರಿಕದ ಯುದ್ಧನೌಕೆ ಯುಎಸ್‌ಎಸ್ ಹಿಗ್ಗಿನ್ಸ್ ಮತ್ತು ರಾಯಲ್ ಕೆನಡಾ ನೌಕಾಸೇನೆಯ ಹಡಗು ಸೆಪ್ಟಂಬರ್ 20ರಂದು ಅಂತರಾಷ್ಟ್ರೀಯ ಕಾನೂನಿನಂತೆ ತೈವಾನ್ ಜಲಸಂಧಿಯ ಮೂಲಕ ವಾಡಿಕೆಯ ಸಂಚಾರ ನಡೆಸಿದೆ ಎಂದು ಅಮೆರಿಕದ ನೌಕಾಪಡೆ ಘೋಷಿಸಿದೆ.

ಈ ಸುದ್ದಿ ಓದಿದ್ದೀರಾ? ಜಗತ್ತಿನ ಮೂರನೇ ಆರ್ಥಿಕತೆಯಾಗಲಿದೆ ಭಾರತ : ʼಜೊತೆಯಾಗಿ ಕೆಲಸ ಮಾಡೋಣʼ ಎಂದ ಇಂಗ್ಲೆಂಡ್‌

ತೈವಾನ್ ಜಲಸಂಧಿ ಮೂಲಕದ ಈ ವಾಡಿಕೆಯ ಸಂಚಾರವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೊ-ಪೆಸಿಫಿಕ್ ವಲಯಕ್ಕೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಹೇಳಿದ್ದಾರೆ. ಏಷ್ಯಾ ಪೆಸಿಫಿಕ್ ವಲಯದ ಬದಲು ಇಂಡೊ-ಪೆಸಿಫಿಕ್ ವಲಯ ಎಂದು ಉಲ್ಲೇಖಿಸಿದ್ದಾರೆ.

ಅಮೆರಿಕ ಮತ್ತು ಕೆನಡಾ ಈ ನಡೆ ಸಾರ್ವಜನಿಕ ಪ್ರಚೋದನೆಯ ಕ್ರಮ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಜಲಸಂಧಿಯಲ್ಲಿ ನಮ್ಮ ಪಡೆಯನ್ನು ಗರಿಷ್ಟ ಎಚ್ಚರಿಕೆಯ ಮಟ್ಟದಲ್ಲಿ ಇರಿಸಲಾಗಿದ್ದು ಎಲ್ಲಾ ಬೆದರಿಕೆ ಮತ್ತು ಪ್ರಚೋದನೆಯನ್ನು ದೃಢವಾಗಿ ಎದುರಿಸುತ್ತೇವೆ. ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿತ್ತೇವೆ ಎಂದು ಚೀನಾ ಸೇನೆಯ ವಕ್ತಾರ ಕರ್ನಲ್ ಶಿ ಯೀ ಹೇಳಿಕೆ ಉಲ್ಲೇಖಿಸಿ ಸಿಸಿಟಿವಿ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್