
- ಕೋವಿಡ್ ನಂತರ ಭಾರತಕ್ಕೆ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳು
- 23,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ಅಭ್ಯಾಸ
ಸುಮಾರು 1300ಕ್ಕೂ ಹೆಚ್ಚು ಭಾರತದ ವಿದ್ಯಾರ್ಥಿಗಳು ಚೀನಾಗೆ ಮರಳಲು ವೀಸಾಗಳನ್ನು ಪಡೆದಿದ್ದಾರೆ.
ಕೋವಿಡ್ ಪಿಡುಗು ಆರಂಭವಾದ 2020ರ ನಂತರ ಎರಡು ವರ್ಷಗಳ ಕಾಲ ಚೀನಾ ವಿಧಿಸಿದ್ದ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಕಠಿಣ ನಿರ್ಬಂಧಗಳನ್ನು ಈಗ ತೆರವುಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಭಾರತೀಯ ವಿದ್ಯಾರ್ಥಿಗಳು ತಮ್ಮ ಓದನ್ನು ಪುನರಾರಂಭಿಸಲು ತೀರ್ಮಾನಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ವಿಭಾಗದ ಚೀನಾದ ಮಹಾನಿರ್ದೇಶಕ ಲಿಯು ಜಿನ್ಸಾಂಗ್ ಅವರು ಚೀನಾದಲ್ಲಿನ ಭಾರತೀಯ ರಾಯಭಾರಿ ಪ್ರದೀಪ್ ರಾವತ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
“1,300ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಗೆ ಬರಲು ವೀಸಾಗಳನ್ನು ಪಡೆದಿದ್ದಾರೆ. ಇದಕ್ಕಾಗಿ ಸುಮಾರು 300 ಉದ್ಯಮಿಗಳು ಚೀನಾ ಏರ್ಲೈನ್ಸ್ನ ಚಾರ್ಟರ್ಡ್ ವಿಮಾನವನ್ನು ಜೆಜಿಯಾಂಗ್ ಪ್ರಾಂತ್ಯದ ಯಿವು ನಗರಕ್ಕೆ ಕಳುಹಿಸಿದ್ದಾರೆ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಆಸ್ಟ್ರೇಲಿಯ | ಜನಾಂಗೀಯ ದಾಳಿಯಲ್ಲಿ ಭಾರತದ ವಿದ್ಯಾರ್ಥಿಗೆ ಹನ್ನೊಂದು ಬಾರಿ ಚೂರಿ ಇರಿತ, ಪರಿಸ್ಥಿತಿ ಗಂಭೀರ
ಚೀನಾದ ವೈದ್ಯಕೀಯ ಸಂಸ್ಥೆಗಳಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಸ್ವಗೃಹಕ್ಕೆ ತೆರಳಿದ್ದಾರೆ. 23,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಚೀನಾದ ನಾನಾ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳು ಎಂದು ಹೇಳಿಕೆ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳ ವಾಪಸಾತಿಗೆ ಅವಕಾಶ ನೀಡುವಂತೆ ಭಾರತವು ಚೀನಾವನ್ನು ಬಹಳ ಸಮಯದಿಂದ ಭಾರತ ಒತ್ತಾಯಿಸುತ್ತಿದೆ. ಜುಲೈನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾಗೆ ಭಾರತೀಯ ವಿದ್ಯಾರ್ಥಿಗಳ ಮರಳುವಿಕೆ ಬಗ್ಗೆ ಪ್ರಸ್ತಾಪಿಸಿದ್ದರು.