
- ಚೀನಾದ ರಾಷ್ಟ್ರೀಯ ಭದ್ರತೆಯು ಅಪಾಯ ಎದುರಿಸುತ್ತಿದೆ
- ದೇಶ ರಕ್ಷಿಸಲು ಮಿಲಿಟರಿ ಸಿದ್ಧವಾಗಬೇಕಿದೆ ಎಂದ ಜಿನ್ಪಿಂಗ್
ಚೀನಾದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ. ಯುದ್ಧಕ್ಕೆ ಸಿದ್ಧರಾಗಿ, ಹೋರಾಡಿ ಗೆಲ್ಲಿ ಎಂದು ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕರೆ ನೀಡಿದ್ದಾರೆ.
ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ಸಿ ಜಿನ್ಪಿಂಗ್, ಚೀನಾದ ಶಕ್ತಿಯನ್ನು ವಿಶ್ವಕ್ಕೆ ತೋರಿಸುವ ಕಾಲ ಬಂದಿದೆ. ಯುದ್ಧ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು ತನ್ನ ಎಲ್ಲ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಸೇನೆಗೆ ಆದೇಶಿಸಿದ್ದಾರೆ.
ಬುಧವಾರ ಜಿನ್ಪಿಂಗ್ ಚೀನಾ ಸೇನೆಯನ್ನುದ್ದೇಶಿಸಿ ಮಾತನಾಡಿದ್ದು, ಜಗತ್ತು ಒಂದು ಶತಮಾನದಲ್ಲಿ ಕಾಣದಿರುವ ತೀವ್ರವಾದ ಬದಲಾವಣೆಗಳಿಗೆ ಒಳಗಾಗುತ್ತಿದೆ. ಚೀನಾದ ರಾಷ್ಟ್ರೀಯ ಭದ್ರತೆಯು ಅಪಾಯ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ದೇಶವನ್ನು ರಕ್ಷಿಸಲು ಮಿಲಿಟರಿ ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ಜಗತ್ತು | ಚೀನಾದಲ್ಲಿ ಲಾಕ್ಡೌನ್ ವಿರುದ್ಧ ಪ್ರತಿಭಟನೆ : ಏಳು ಮಂದಿ ಬಂಧನ
ಯುದ್ಧ ಸನ್ನದ್ಧತೆಗಾಗಿ ತನ್ನ ಎಲ್ಲಾ ಕೆಲಸಗಳನ್ನು ನಿರ್ವಹಿಸಲು, ಹೋರಾಡಲು, ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅದರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಇಡೀ ಸೇನೆಯು ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಹೇಳಿದ್ದಾರೆ.
69 ವರ್ಷದ ಕ್ಸಿ ಜಿನ್ ಪಿಂಗ್ ಅವರನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಮ್ಸಿ) ಮುಖ್ಯಸ್ಥರಾಗಿ ಮರುನೇಮಕಗೊಳಿಸಲಾಗಿದೆ. ಪಕ್ಷದ ಮುಖ್ಯಸ್ಥ, ಮಿಲಿಟರಿ ಮತ್ತು ಪ್ರೆಸಿಡೆನ್ಸಿಯ ಮೂರು ಪ್ರಬಲ ಹುದ್ದೆಗಳನ್ನು ಹೊಂದಿರುವ ಕ್ಸಿ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಹೊರತುಪಡಿಸಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅಧಿಕಾರದಲ್ಲಿ ಮುಂದುವರಿಯುವ ಏಕೈಕ ನಾಯಕರಾಗಿದ್ದಾರೆ.