ಸಚಿತ್ರ ಸುದ್ದಿ | ಹವಾಮಾನ ಬದಲಾವಣೆ; ಜಗತ್ತಿನ ವಿನಾಶಕ್ಕೆ ದಾರಿ

ಹವಮಾನ ಬದಲಾವಣೆಯಿಂದಾಗಿ ಜಗತ್ತಿಗೆ ದೊಡ್ಡ ಗಂಡಾಂತರ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮಾನವನು ತನ್ನ ಶಕ್ತಿ ಮೀರಿ ಪ್ರಕೃತಿಗೆ ವಿರುದ್ಧವಾಗಿ ಹಲವು ಸಾಹಸಗಳನ್ನು ಕೈಗೊಂಡಾಗ ಈ ರೀತಿಯ ಚಂಡಮಾರುತ, ಪ್ರವಾಹದ ಮೂಲಕ ಮಾನವನಿಗೆ ಪಾಠ ಕಲಿಸಲು ಮುಂದಾಗುತ್ತದೆ. ಅಂತಹ ಕೆಲವು ಘಟನೆಗಳ ಸಚಿತ್ರ ವರದಿ

 

ಹವಾಮಾನ ಬದಲಾವಣೆಯಿಂದಾಗಿ ಆಗಸ್ಟ್ 17, 2021ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ಸೆನ್ ಕೌಂಟಿಯ ಮಿಲ್‌ಫೋರ್ಡ್ ಬಳಿ ಇರುವ ಕಾಡು ಬೆಂಕಿಗೆ ಆಹುತಿಯಾದ ದೃಶ್ಯ. ಬೆಂಕಿಯ ಕೆನ್ನಾಲಗೆ ಚಾಚಿ ಕಾಡು ಹೊತ್ತಿ ಉರಿದಿದೆ. ನದಿಗಳು ಪ್ರವಾಹಕ್ಕೆ ಒಳಗಾದವು. ಮಂಜುಗಡ್ಡೆ ಕರಗಿತು. ತಾಪಮಾನವು ಏರಿತು. 
ಚಿತ್ರಕೃಪೆ: ಎಪಿ

 

Eedina App
ಸರೋಜಾ ಎಂಬ ಚಂಡಮಾರುತದಿಂದ ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ದುರಂತದ ಬಳಿಕ ಅಲ್ಲಿನ ಜನ ಆಹಾರ ಹುಡುಕುತ್ತಿರುವ ದೃಶ್ಯ.
ಚಿತ್ರ ಕೃಪೆ: ರಾಯಿಟರ್ಸ್

 

ಅಪರೂಪದ ಹಿಮಬಿರುಗಾಳಿಯು ಜನವರಿಯಲ್ಲಿ ಸ್ಪೇನ್‌ನಾದ್ಯಂತ ಹಾನಿಯನ್ನುಂಟುಮಾಡಿತು. ಮ್ಯಾಡ್ರಿಡ್‌ನಲ್ಲಿ 50 ಸೆಂ.ಮೀ ಹಿಮ ಸುರಿದಿದೆ. 150,000 ಮರಗಳನ್ನು ಕಡಿಯಲಾಯಿತು. ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಲಾಯಿತು. ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. 
ಚಿತ್ರ ಕೃಪೆ: ರಾಯಿಟರ್ಸ್
ಆಗಸ್ಟ್ 6, 2021 ರಂದು ಗ್ರೀಸ್‌ನ ಅಥೆನ್ಸ್‌ ನಗರದ ಉತ್ತರದ ಎವಿಯಾ ದ್ವೀಪದ ಲಿಮ್ನಿ ಗ್ರಾಮದ ಬಳಿಯ ಕೊಚಿಲಿ ಬೀಚ್‌ನಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು ವ್ಯಕ್ತಿಯೊಬ್ಬರು ವೀಕ್ಷಿಸುತ್ತಿರುವ ದೃಶ್ಯ.

 

AV Eye Hospital ad
ಬೂಟ್ಲೆಗ್ ಫೈರ್ ಇತಿಹಾಸದಲ್ಲಿ ದಾಖಲಾದ  ಒರೆಗಾನ್‌ನ ಮೂರನೇ ಅತಿದೊಡ್ಡ ಕಾಡ್ಗಿಚ್ಚು. ವರ್ಷದ ಎರಡನೇ ಅತಿದೊಡ್ಡ ಅಮೆರಿಕ ಕಾಡ್ಗಿಚ್ಚು. ಇದರಲ್ಲಿ 400,000 ಎಕರೆಗಳಷ್ಟು ಅರಣ್ಯ ಸುಟ್ಟು ನಾಶವಾಗಿತ್ತು. 
ಚಿತ್ರ ಕೃಪೆ: ರಾಯಿಟರ್ಸ್

 

ಆಗಸ್ಟ್‌ನಲ್ಲಿ ಬಿಸಿಗಾಳಿಯಿಂದ ಉಂಟಾದ ಬೆಂಕಿಯು ದಕ್ಷಿಣ ಇಟಲಿಯಾದ್ಯಂತ ವ್ಯಾಪಿಸಿದಂತೆ, ಸಿಸಿಲಿಯ ಒಂದು ಮೇಲ್ವಿಚಾರಣಾ ಕೇಂದ್ರವು 48.8 ಸೆಲ್ಸಿಯಸ್ (119.84 ° F) ತಾಪಮಾನ ವರದಿ ಮಾಡಿದೆ. ಇದು ಯುರೋಪಿಯನ್ ಇತಿಹಾಸದಲ್ಲಿ ದಾಖಲಾದ ಅತೀ ಹೆಚ್ಚು ಬಿಸಿಲು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಚಿತ್ರ ಕೃಪೆ: ರಾಯಿಟರ್ಸ್

 

ಜುಲೈನಲ್ಲಿ ಮೂರು ದಿನಗಳಲ್ಲಿ, ಚೀನಾದ ಝೆಂಗ್‌ಝೌನಲ್ಲಿ 24.3 ಇಂಚುಗಳಷ್ಟು ಮಳೆಯು ಅದರ ವಾರ್ಷಿಕ ಸರಾಸರಿಗೆ ಸರಿಸುಮಾರು ಸಮನಾಗಿರುತ್ತದೆ. ಈ ಮಳೆಯು ಸಾರಿಗೆ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಚೀನಾ ದೇಶಕ್ಕೆ ಅಪಾರ ನಷ್ಟವನ್ನು ಉಂಟು ಮಾಡಿತ್ತು.
ಚಿತ್ರ ಕೃಪೆ: ರಾಯಿಟರ್ಸ್

 

ಉತ್ತರ ಅಲ್ಜೀರಿಯಾದ ಅರಣ್ಯ ಪ್ರದೇಶದಲ್ಲಿ  ಸೃಷ್ಟಿಯಾದ ಕಾಡ್ಗಿಚ್ಚಿನಿಂದ ಕನಿಷ್ಠ 65 ಜನರನ್ನು ಸಾವನ್ನಪ್ಪಿದರು. ಅಲ್ಜೀರಿಯ ಇತಿಹಾಸದಲ್ಲಿ ದಾಖಲಾದ ಅತ್ಯಂತ ವಿನಾಶಕಾರಿ ಜ್ವಾಲೆ ಎಂದು ಇದನ್ನು ಕರೆಯಲಾಗಿದೆ.
ಚಿತ್ರ ಕೃಪೆ: ರಾಯಿಟರ್ಸ್

 

​​ಮಾರ್ಚ್ 23, 2021ರಂದು ಆಸ್ಟ್ರೇಲಿಯಾದ ಸಿಡ್ನಿಯ ಹೊರವಲಯದಲ್ಲಿರುವ ಲಂಡನ್‌ಡೆರಿಯಲ್ಲಿ ಮನೆಯೊಂದು ಪ್ರವಾಹದ ನೀರಿನಿಂದ ಆವೃತವಾಗಿರುವ ದೃಶ್ಯ. ಇದು ಆಸ್ಟ್ರೇಲಿಯದ ಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂ ಸೌತ್ ವೇಲ್ಸ್‌ನಲ್ಲಿ ಅಪಾರ ಹಾನಿ ಉಂಟುಮಾಡಿತ್ತು. 
ಚಿತ್ರಕೃಪೆ: ಎಪಿ

 

ಯುರೋಪ್‌, ಜರ್ಮನಿ, ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಸುಮಾರು 200 ಜನರು ಸಾವನ್ನಪ್ಪಿದರು. ಹವಾಮಾನ ಬದಲಾವಣೆ ಎಂಬುದು ಪ್ರವಾಹವನ್ನು ಶೇಕಡಾ 20ರಷ್ಟು ಹೆಚ್ಚು ಪ್ರಬಲವಾಗಿ ಸಂಭವಿಸುವಂತೆ ಮಾಡುತ್ತದೆ ಎಂದು  ವಿಜ್ಞಾನಿಗಳು ಹೇಳಿದ್ದಾರೆ.
ಚಿತ್ರ ಕೃಪೆ: ರಾಯಿಟರ್ಸ್

 

ಮೆಡಿಟರೇನಿಯನ್‌ನಲ್ಲಿ, ಬೇಸಿಗೆಯ ಬಿಸಿಯಿಂದಾಗಿ ತೀವ್ರವಾದ ಬೆಂಕಿ ಹರಡಿತು. ಇದು ಅಲ್ಜೀರಿಯಾ, ಗ್ರೀಸ್ ಹಾಗೂ ಟರ್ಕಿಯಲ್ಲಿ ಸಾವಿರಾರು ಜನರು ತಮ್ಮ ಮನೆಗಳನ್ನು ಸ್ಥಳಾಂತರಿಸುವಂತೆ ಮಾಡಿತ್ತು. ಗ್ರೀಸ್‌ನಲ್ಲಿ ಇಬ್ಬರು ಮತ್ತು ಅಲ್ಜೀರಿಯಾದಲ್ಲಿ ಕನಿಷ್ಠ 65 ಜನರು ಸಾವನ್ನಪ್ಪಿದರು. 
ಚಿತ್ರ ಕೃಪೆ: ರಾಯಿಟರ್ಸ್

 

ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ಪ್ರಕಾರ, ದಕ್ಷಿಣ ಸುಡಾನ್‌ 60 ವರ್ಷಗಳಲ್ಲೇ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಸತತವಾಗಿ ಮೂರು ವರ್ಷದ ಪ್ರವಾಹದಿಂದ ಸುಮಾರು 780,000 ಮಂದಿ ದೇಶ ತೊರೆದರು. ತಾಪಮಾನ ಹೆಚ್ಚಾದರೆ ಪ್ರವಾಹ ಹೆಚ್ಚಾಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಚಿತ್ರ ಕೃಪೆ: ರಾಯಿಟರ್ಸ್
ನಿಮಗೆ ಏನು ಅನ್ನಿಸ್ತು?
9 ವೋಟ್
eedina app