ಉಗ್ರ ರಾಷ್ಟ್ರೀಯತೆ ಹೆಸರಿನಲ್ಲಿ ಮರೆಯಾಗುತ್ತಿರುವ ಪ್ರಜಾಪ್ರಭುತ್ವ

ಫ್ರಾನ್ಸ್‌ನ ಸಾಮಾಜಿಕ ಚಿಂತಕ ರೂಸೊ, ವಾಲ್ಟೇರ್‌ರಂತಹ ದಾರ್ಶನಿಕರಿಂದ ಆರಂಭವಾದ ರಾಷ್ಟ್ರೀತಯೆ ಎಂಬ ಚರ್ಚೆ ಯುರೋಪ್‌ನಲ್ಲಿ ಹಲವು ರೂಪಗಳನ್ನು ಪಡೆಯುವ ಮೂಲಕ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಕೈಸೇರಿ ನಾಗರಿಕರನ್ನು ನಡುಗಿಸಿತ್ತು. ಇದೀಗ ಭಾರತದಲ್ಲಿ ರಾಷ್ಟ್ರೀಯತೆಯ ವ್ಯಾಖ್ಯಾನ ಅಲ್ಪಸಂಖ್ಯಾತರ ಮೇಲೆ ದಾಳಿಗಳವರೆಗೆ ಬೆಳೆದು ನಿಂತಿದೆ.

ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶಗಳಲ್ಲಿ ದೊಂಬಿಗಳು, ಹತ್ಯೆಗಳು ನಡೆಯುವುದು ಜಾಗತಿಕವಾಗಿ ವರದಿಯಾಗುತ್ತಲೇ ಇದೆ. ಭಾರತದ 75ನೇ ಸ್ವಾತಂತ್ರ್ಯದ ಆಚರಣೆ ಈಗಷ್ಟೇ ಮುಗಿದಿದ್ದು, ಈ ಸಮಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಎಲ್ಲ ಭಾರತೀಯರು ಪುನರ್‌ ಮನನ ಮಾಡಿಕೊಳ್ಳುವ ಅಗತ್ಯವಿದೆ. ಸ್ವತಂತ್ರ ಭಾರತ ನಿರ್ಮಾಣದ ಕಲ್ಪನೆಯಲ್ಲಿ ರೂಪುಗೊಂಡ ರಾಷ್ಟ್ರೀಯತೆ, ಇಂದು ಹೊಸ ಕೋಮುವಾದಿ ರೂಪ ಪಡೆದಿರುವುದು ಪ್ರಜಾಪ್ರಭುತ್ವದ ನಾಶಕ್ಕೆ ಕಾರಣವಾಗುವ ಆತಂಕ ಸೃಷ್ಟಿಯಾಗಿದೆ.

ರಾಷ್ಟ್ರೀಯತೆ ಎಂಬುದು ಹದಿನೆಂಟು, ಹತ್ತೊಂಬತ್ತನೆಯ ಶತಮಾನದ ಪ್ರಮುಖ ಸರಕಾಗಿತ್ತು. ನೂರಾರು ವಿದ್ವಾಂಸರ, ರಾಜಕೀಯ ಧುರೀಣರ ಭಾವುಕತೆ ಬೆರೆತ ಬೌದ್ಧಿಕತೆಯ ವ್ಯಾಖ್ಯಾನದಲ್ಲಿ ರಾಷ್ಟ್ರೀಯತೆಯ ಕಲ್ಪನೆ ಮೂಡಿ ಬಂದಿತ್ತು. ಫ್ರಾನ್ಸ್‌ನ ಸಾಮಾಜಿಕ ಚಿಂತಕ ರೂಸೊ, ವಾಲ್ಟೇರ್‌ರಂತಹ ದಾರ್ಶನಿಕರಿಂದ ಆರಂಭವಾದ ರಾಷ್ಟ್ರೀತಯೆ ಎಂಬ ಚರ್ಚೆ ಯುರೋಪ್‌ನಲ್ಲಿ ಹಲವು ರೂಪಗಳನ್ನು ಪಡೆಯುವ ಮೂಲಕ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಕೈಸೇರಿ ನಾಗರಿಕರನ್ನು ನಡುಗಿಸಿತ್ತು. ಇದೆಲ್ಲವೂ ಚರಿತ್ರೆಯ ಪಾಠ ಮಾತ್ರವಾಗಿದ್ದರೆ ಓದಿ ಮರೆಯಬಹುದಿತ್ತು. ಆದರೆ ರಾಷ್ಟ್ರದ ಕಲ್ಪನೆಯು ವ್ಯಾಪ್ತಿ ಹರಡಿಕೊಂಡು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಾಗಿ ಮಾರ್ಪಟ್ಟಿದೆ. ಅಮೂರ್ತವಾದ ರಾಷ್ಟ್ರೀಯತೆ, ರಾಷ್ಟ್ರವಾದ, `ರಾಷ್ಟ್ರ' ಕಲ್ಪನೆ ಶ್ರೇಷ್ಠತೆ ಮತ್ತು ಪಾವಿತ್ರ್ಯದ ಅರ್ಥ ಪಡೆದುಕೊಂಡಿದೆ. ರಾಷ್ಟ್ರಕ್ಕಾಗಿ ಕೊಲ್ಲುವುದು ರೂಢಿಯಾಗಿದೆ. ದಿನ ಬೆಳಗಾದರೆ ಬಗೆಹರಿಯದ ಭಾರತ, ಪಾಕಿಸ್ತಾನದ ಗಡಿ ಸಮಸ್ಯೆ,, ಆಗಾಗ್ಗೆ ಉಗ್ರರ ಬಾಂಬ್ ದಾಳಿ ಇದು ರಾಷ್ಟ್ರೀಯತೆಯ ವಿಕೃತ ಕಲ್ಪನೆಗೆ ತೆರುತ್ತಿರುವ ಬೆಲೆ. ಭಾರತದಲ್ಲಿ ಬೆಳೆದು ಬರುತ್ತಿರುವ ರಾಷ್ಟ್ರೀಯತೆಯ ವ್ಯಾಖ್ಯಾನ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವ ವಿರೋಧಭಾಸವಾಗಿ ಬೆಳೆದು ನಿಂತಿದೆ.

1648 ವೆಸ್ಟ್‌ಫಾಲಿಯ ಒಪ್ಪಂದ

ಯುರೋಪ್ ಖಂಡದಲ್ಲಿ ರಾಷ್ಟ್ರೀಯವಾದ ಮತ್ತು ರಾಷ್ಟ್ರೀಯ ಪ್ರಭುತ್ವದ ಕಲ್ಪನೆ 1648ರಲ್ಲಿ ವೆಸ್ಟ್‌ಫಾಲಿಯ ಒಪ್ಪಂದದ ನಂತರ ಉದಯವಾಯಿತು. ಈ ಒಪ್ಪಂದದಿಂದ  ರಾಷ್ಟ್ರ ಎಂಬ ಪರಿಕಲ್ಪನೆ ಯುರೋಪ್ ದೇಶಗಳಲ್ಲಿ ಜನ್ಮತಾಳಿತ್ತು. ಕ್ರೈಸ್ತ ಧರ್ಮವೇ ಶೇಷ್ಠ ಎನ್ನುವ ಕಲ್ಪನೆಯಲ್ಲಿ ಈ ರಾಷ್ಟ್ರಪ್ರೇಮದ ಉದಯವಾಗಿತ್ತು. 

1857 ಸಿಪಾಯಿ ದಂಗೆ ‌

ಯುರೋಪ್ ಜನಾಂಗವೇ ಶ್ರೇಷ್ಟ ಎನ್ನುವ ರಾಷ್ಟ್ರೀಯತೆಗೆ ವಿರುದ್ಧವಾಗಿ, ಬ್ರಿಟಿಷ್‌ ವಸಾಹತುಶಾಹಿಗೆ ಪ್ರತಿರೋಧ ತೋರಲು 1858ರಲ್ಲಿ ನೆಡೆದ ಸಿಪಾಯಿ ದಂಗೆ ಎಲ್ಲಾ ಧರ್ಮದವರು ಸೇರಿದ ಬಹುತ್ವ ರಾಷ್ಟ್ರೀಯತೆಯಾಗಿ ಹೊಸ ಕಲ್ಪನೆ ಮುಂದಿಟ್ಟಿತು. ಇದು ಭಾರತ ಎನ್ನುವ ಕಲ್ಪನೆಯನ್ನು ಜನರಲ್ಲಿ ತಂದ ಹೋರಾಟವಾಗಿಯೂ ಇತಿಹಾಸದಲ್ಲಿ ದಾಖಲಾಗಿದೆ.

1900 ನಂತರದ ರಾಷ್ಟ್ರೀಯತೆ

1900 ನಂತರ ಭಾರತ ಎನ್ನುವ ರಾಷ್ಟ್ರೀಯ ಕಲ್ಪನೆ ದೇಶದೊಳಗೆ ಪ್ರಬಲವಾಯಿತು. ಬ್ರಿಟಿಷ್‌ ವಸಾಹತುಶಾಹಿಯಿಂದ, ಮುಕ್ತವಾಗಿ ಸ್ವತಂತ್ರ ರಾಷ್ಟ್ರವಾಗುವ ಒತ್ತಾಸೆ ಜನರಲ್ಲಿ ಮೂಡಿ ಬಂದಿತ್ತು. ರಾಷ್ಟ್ರದ ಪರಿಕಲ್ಪನೆ ಜೊತೆಗೆ ‘ರಾಷ್ಟ್ರ ಎಂದರೆ ಸಮಸ್ತ ಜನತೆʼ ಎಂಬ ಹೊಸ ಅಭಿಪ್ರಾಯ ಹುಟ್ಟಿಕೊಂಡಿತು.

1925 ಆರ್‌ಎಸ್‌ಎಸ್‌ ಉದಯ

 ಬಹುತ್ವ ಪರಿಕಲ್ಪನೆಯ  ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಫಲಿತಾಂಶವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ  ಕೋಮು ಹಿಂಸೆಗಳು ಆರಂಭವಾದವು. ಆಗಲೇ ಹಿಂದೂ ರಾಷ್ಟ್ರದ ನೆಪದಲ್ಲಿ ಆರ್‌ಎಸ್‌ಎಸ್‌ ಸಂಘಟನೆ ಜನ್ಮತಾಳಿತ್ತು. ಇಲ್ಲಿಂದ ಇತಿಹಾಸವೇ ಬದಲಾಯಿತ್ತು.

1925 ರವರೆಗೂ ರಾಷ್ಟ್ರೀಯತೆ ಎಂದರೆ ಎಲ್ಲಾ ಧರ್ಮದವರನ್ನು ಒಳಗೊಂಡ  ‘ಸರ್ವೋದಯ’ದ ಕನಸಿತ್ತು. ಅದಕ್ಕೆ ವಿರುದ್ಧವಾದ ಕನಸನ್ನು ಆರ್‌ಎಸ್‌ಎಸ್‌‌ ಹೆಗೆಡೆವಾರ್ ನೆತೃತ್ವದಲ್ಲಿ ಉದಯವಾಯಿತು. ಹಿಂದೂ ಧರ್ಮವೇ ಶ್ರೇಷ್ಟ, ಹಿಂದುಗಳೇ ಈ ದೇಶದಲ್ಲಿ ಉಳಿಯಬೇಕು ಎನ್ನುವುದು ಆರ್‌ಎಸ್ಎಸ್‌ ಪ್ರಮುಖ ಧೇಯ ವಾಕ್ಯವಾಗಿತ್ತು. 

1947 ಗಾಂಧಿಯ  ಹತ್ಯೆ ‌ 

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಉಗ್ರ ರಾಷ್ಟ್ರಿಯತೆಯ ಪರಿಣಾಮವಾಗಿ ‘ರಾಷ್ಟ್ರಪಿತ’ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ. ಇದು ದೇಶದಲ್ಲಿ ಮತ್ತೊಂದು ವಿಧದ ರಾಷ್ಟ್ರೀಯತೆಯ ಉಗಮದ ಸೂಚನೆಯಾಗಿತ್ತು.

1991 ಬಾಬ್ರಿ ಮಸೀದಿ ಧ್ವಂಸ 

1991ರಲ್ಲಿಉತ್ತರ ಪ್ರದೇಶದ ಬಾಬ್ರಿ ಮಸೀದಿ ಧ್ವಂಸ ಪ್ರಕರಣವು, ಕಲ್ಪಿತ ರಾಷ್ಟ್ರವಾದದ ಮತ್ತೊಂದು ಹಂತವಾಗಿತ್ತು. ರಾಮ ಜನ್ಮಭೂಮಿ ಹಿಂದೂಗಳಿಗೆ ಮಾತ್ರ ಸೇರಿರುವುದು ಎನ್ನುವ ಕಲ್ಪನೆಯನ್ನು ರಾಷ್ಟ್ರಾದ್ಯಂತ ಪ್ರಚಾರ ಮಾಡಿವ ಮೂಲಕ ಅಲ್ಪಸಂಖ್ಯಾತರ ಮೇಲೆ ಸ್ವತಂತ್ರ ಭಾರತದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸೆಗೆ  ಸಾಕ್ಷಿಯಾಯಿತ್ತು. ನಂತರದ ದಿನಗಳಲ್ಲಿ ದೇಶದಲ್ಲಿ ರಾಷ್ಟ್ರೀಯತೆಯ ಕಲ್ಪನೆ ಹೊಸ ರೂಪ ಪಡೆದುಕೊಂಡಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ಪಾತ್ರವೂ ಇಲ್ಲದ ಬಿಜೆಪಿ ಪಕ್ಷವು ದೇಶದಲ್ಲಿ ಬೇರೂರಲು 1991 ಬಾಬ್ರಿ ಮಸೀದಿ ದ್ವಂಸವೇ ಕಾರಣವಾಗಿತ್ತು.

2014ರ ಲೋಕಸಭಾ ಚುನಾವಣೆ

2014 ಚುನಾವಣೆಯನ್ನು ಬಹುತೇಕ ಧಾರ್ಮಿಕ ನೆಲೆಯ ಧ್ರುವೀಕರಣದ ಸುತ್ತ ನಡೆಸಲಾಗಿತ್ತು. ಈ ಚುಣಾವಣೆಯಲ್ಲಿ ಬಿಜೆಪಿಗೆ ಸಿಕ್ಕ ದೊಡ್ಡ ಜಯ ಕಲ್ಪಿತ ರಾಷ್ಟ್ರಿಯವಾದ ಮತ್ತು  ಹಿಂದುತ್ವ ಅಜೆಂಡಾಗೆ ಸಿಕ್ಕ ದೊಡ್ಡ ಗೆಲುವು. ಇದರಿಂದಾಗಿ ದೇಶದ ಇತಿಹಾಸ ಹಳೆಗಳನ್ನೇ ಹರಿದು ಹಾಕುವ ಪಕ್ಷವು ಅಧಿಕಾರದಲ್ಲಿ ನೆಲೆಯೂರಿತ್ತು. 

2014 ರ ನಂತರ ನಡೆದ ರಾಷ್ಟ್ರವಾದಕ್ಕೆ ಸಂಬಂಧಿಸಿದ ದೊಂಬಿಗಳು/ ಹಲ್ಲೆಗಳು/ ಹತ್ಯೆಗಳು

ಅಲ್ಪಸಂಖ್ಯಾತರ ದಮನಗಳನ್ನು ಕೆಲವು ವರ್ಷಗಳಿಂದ ಭಾರತದಲ್ಲಿ ವ್ಯವಸ್ಥಿತವಾಗಿ ನಡೆಸಲಾಗತ್ತಿದೆ,ಅಲ್ಪಸಂಖ್ಯಾತರನ್ನು ಭಯೋತ್ಪಾಕರೆಂದು ಬಿಂಬಿಸಲಾಗುತ್ತಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಮೊಟಕುಗೊಳಿಸಲಾಗುತ್ತಿದೆ. ರಾಷ್ಟ್ರೀಯವಾದ ಹೆಸರಿನಲ್ಲಿ ದೇಶದೆಲ್ಲೆಡೆಗಳಲ್ಲಿ ಪ್ರಮುಖ ಸಾರ್ವಜನಿಕ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು  ಈ ಹಿಂದುತ್ವ ದಾಳಿಯನ್ನು ಎದುರಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಪರ ಮಾತನಾಡುವ , ಉದಾರವಾದಿ ಬುದ್ಧಿಜೀವಿಗಳ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಡಿದು ಹಾಕುವ ಕೆಲಸ   ರಾಷ್ಟ್ರಿಯತೆಯ ಹೆಸರಿನಲ್ಲಿ ನಡೆಸಲಾಗುತ್ತಿದೆ.

ಜೆಎನ್‌ಯು ದೇಶದ್ರೋಹದ ಪ್ರಕರಣ

ಜವಹಾರಲಾಲ್‌ ನೆಹರು ವಿಶ್ವವಿದ್ಯಾಲಯದ  ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ 9 ವಿದ್ಯಾರ್ಥಿಗಳ  ಮೇಲೆ. 2016 ರಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಕನ್ಹಯ್ಯ ಕುಮಾರ್‌, ಜೆಎನ್‌ಯು ಕ್ಯಾಂಪಸ್‌ನಲ್ಲಿ ಫೆಬ್ರವರಿ 9- 2016 ರಂದು ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ದೇಶದ್ರೋಹಿ ಘೋಷಣೆ ಕೂಗಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ 33 ಪ್ರಕರಣ

ಮೇ 2020 ರಲ್ಲಿ, ವಿದ್ಯಾರ್ಥಿ ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಾಂಗನಾ ಕಲಿಕಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಭಾರತೀಯ ದಂಡ ಸಂಹಿತೆ , 1860, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ , 1984, ಶಸ್ತ್ರಾಸ್ತ್ರ ಕಾಯ್ದೆ , 1959 ರ ವಿವಿಧ ವಿಭಾಗಗಳ ಅಡಿಯಲ್ಲಿ 33 ಅಪರಾಧಗಳಿಗಾಗಿ ಬಂಧಿಸಲಾಯಿತು. ಮತ್ತು ಭಯೋತ್ಪಾದನೆ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ , 1967. ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ಕೋಮು ಹಿಂಸಾಚಾರವನ್ನು ಸಡಿಲಿಸಲು ಹಿಂಸಾತ್ಮಕ ಪಿತೂರಿಯ ಭಾಗವಾಗಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು ಅಪರಾಧಗಳಲ್ಲಿ ಕೊಲೆ, ಭಯೋತ್ಪಾದನೆ, ಗಲಭೆ, ಡಕಾಯಿತಿ, ಕ್ರಿಮಿನಲ್ ಪಿತೂರಿ ಮತ್ತು ದೇಶದ್ರೋಹ ಕೇಸ್‌ಗಳನ್ನು ಹಾಕಲಾಗಿತ್ತು. 

ಕೇರಳ ಪತ್ರಕರ್ತ ಸಿದ್ದಿಕ್‌ ಕಪ್ಪನ್‌

ಕೇರಳ ಮೂಲದ ಪತ್ರಕರ್ತ ಸಿದ್ದಿಕ್‌ ಕಪ್ಪನ್‌ ಮತ್ತು ಅವರ ಮೂರು ಸ್ನೇಹಿತರನ್ನು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಯೊಂದಿಗೆ ಸಂಪರ್ಕ ಹೊಂದಿದ್ದರೆಂದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಶದ್ರೋಹ ಪ್ರಕರಣ ಇವರ ಮೇಲೆ ದಾಖಲಾಗಿತ್ತು. 
2020 ರ ಸೆಪ್ಟೆಂಬರ್ 14 ರಂದು ಹತ್ರಾಸ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ 19 ವರ್ಷದ ದಲಿತ ಮಹಿಳೆ ಮೃತಪಟ್ಟ ನಂತರ ಸಿದ್ದಿಕ್‌ ಹತ್ರಾಸ್‌ಗೆ ಹೋಗುವಾಗ ಅವರನ್ನು ಬಂಧಿಸಲಾಯಿತು. 

ಬೆಂಗಳೂರು ಮೂಲದ ದಿಶಾ ರವಿ ಬಂಧನ

ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿದ್ದ ರೈತ ಹೋರಾಟವನ್ನು ಬೆಂಬಲಿಸಿ ಟೂಲ್‌ಕಿಟ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಆರೋಪ ಹೊರಿಸಿ ಫೆಬ್ರವರಿ 13, 2020 ರಂದು ದೆಹಲಿ ಪೊಲೀಸರು ದಿಶಾ ರವಿ ಅವರನ್ನು ದೇಶದ್ರೊಹದ ಆರೋಪದಲ್ಲಿ ಆಡಿಯಲ್ಲಿ ಬಂಧಿಸಿದ್ದರು.

ಹೋರಾಟ ಮಾಡುವ ರೈತರ ಮೇಲೆ ದೇಶ ದ್ರೋಹ ಪ್ರಕರಣ

ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಂಡುವ ಕಾರಳ ಕೃಷ್ಟಿ ಕನೂನುನ ವಿರುದ್ಧ ಹೋರಾಟ ಮಾಡುವ ಹೋರಾಟಗಾರರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದು ವಿಶ್ವದಲ್ಲೇ ಭಾರತ ಮೊದಲು. ಕಳೆದ ವರ್ಷ ಗಣ ರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆ ಬಳಿಯಲ್ಲಿ ನಡೆದ  ಟ್ರ್ಯಾಕ್ಟರ್ ಪೆರೇಡ್ ರ್ಯಾಲಿಯನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ದೇಶದ್ರೋಹ ಅಡಿಯಲ್ಲಿ ಪ್ರಕರಣ ದಾಖಲಿಸಲಾಸಿದ್ದರು.

ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಜಾಪ್ರಭುತ್ವ ಕಣ್ಮರೆ

ಒಮ್ಮೆ ಕಪಿಲ್ ಸಿಬಲ್ ಸುಪ್ರೀಂಕೋರ್ಟ್‌ನಲ್ಲಿ ನೀಡಿದ ಮಾಹಿತಿ ಪ್ರಕಾರ ದೇಶದಾದ್ಯಂತ 800 ದೇಶದ್ರೋಹಿ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ 13,000 ನಾಗರಿಕರು ದೇಶದ್ರೋಹದ ಆಪಾದನೆಯ ಮೇರೆಗೆ ಜೈಲಿನಲ್ಲಿದ್ದಾರೆ. 2014 ರಿಂದ 2020 ರ ವರೆಗಿನ ಅವಧಿಯಲ್ಲಿ  ಒಟ್ಟು 7136 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. 

ಸಾಮಾಜಿಕ ಅನ್ಯಾಯದ ವಿರುದ್ದ ದ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ಹಣಿಯಲಾಗುತ್ತಿದೆ. ಇಲ್ಲಿ ಅಪಾಯದಲ್ಲಿರುವುದು ಹಿಂದೂ ಅಥವಾ ಮುಸ್ಲಿಮರಲ್ಲ, ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಭಾರತ ದೇಶದ ಸಂವಿಧಾನವೇ ಅಪಾಯದಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್