ವಿನಾಶಕಾರಿ ಪ್ರಳಯ: ಹವಾಮಾನ ಬದಲಾವಣೆ ಕಾರಣ ಎಂದ ವಿಶ್ವಸಂಸ್ಥೆ

  • ಮೂರು ದಶಕಗಳಲ್ಲಿ ಅತಿ ಹೆಚ್ಚು ಮಳೆ
  • ಪಾಕ್ ಪ್ರಳಯ: 1,300ಕ್ಕೂ ಹೆಚ್ಚು ನಾಗರಿಕರು ಮೃತ್ಯು

ಚೀನಾದಲ್ಲಿ ಪ್ರಬಲ ಭೂಕಂಪ, ಇರಾನ್‌ನಲ್ಲಿ ಮಿತಿಮೀರಿದ ಶಾಖದ ಪರಿಣಾಮ, ಫ್ರಾನ್ಸ್‌ ಹಾಗೂ ಬಹುತೇಕ ಯುರೋಪ್ ದೇಶಗಳಲ್ಲಿ ಸಂಭವಿಸಿರುವ ಕಾಡ್ಗಿಚ್ಚುಗಳಿಗೆ 'ಹವಾಮಾನ ಬದಲಾವಣೆಯೇ ಕಾರಣ' ಎಂದು ವಿಶ್ವಸಂಸ್ಥೆ  ಹೇಳಿದೆ.

ಪಾಕಿಸ್ತಾನ ಸೇರಿದಂತೆ ಜಗತ್ತಿನೆಲ್ಲೆಡೆ ಸಂಭವಿಸುತ್ತಿರುವ ಪ್ರವಾಹಗಳು ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿದ್ದು, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ವಿಶ್ವದ ಗುರಿಯಾಗಬೇಕೆಂದು ವಿಶ್ವಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ. ಪಾಕಿಸ್ತಾನದಲ್ಲಿ ಸಂಭವಿಸಿದ ದುರಂತ ನಾಳೆ ಜಗತ್ತಿನ ಮತ್ತೊಂದೆಡೆ ಸಂಭವಿಸಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಸಿದ್ದಾರೆ.

Eedina App

ಪಾಕಿಸ್ತಾನದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ನಾಶ-ನಷ್ಟದ ಸಮೀಕ್ಷೆ ನಡೆಸಲು ಅಂಟೋನಿಯೊ ಗುಟೆರಸ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, 'ಸಂಕಷ್ಟಕ್ಕೆ ಸಿಲುಕಿರುವ ಜನತೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಆ ದೇಶಕ್ಕೆ  ಅಂತಾರಾಷ್ಟ್ರೀಯ ಸಮುದಾಯದ ಬೃಹತ್ ಬೆಂಬಲಕ್ಕಾಗಿ ಮನವಿ ಮಾಡಲು ಭೇಟಿ ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಂದೆಡೆ ಭೀಕರ ಪ್ರವಾಹಗಳು, ಇನ್ನೊಂದೆಡೆ ಕಾಡ್ಗಿಚ್ಚುಗಳು! ಇದೇನು ಜಗತ್ತಿನ ಕೊನೆಗಾಲವೇ?

AV Eye Hospital ad

1959ರಿಂದ ಪಾಕಿಸ್ತಾನವು ಸುಮಾರು 0.4%ದಷ್ಟು ಇಂಗಾಲದ ಡೈಆಕ್ಸೈಡನ್ನು ವಾತಾವರಣಕ್ಕೆ ಹೊರಸೂಸಿದೆ. ಇದೇ ಅವಧಿಯಲ್ಲಿ ಅಮೆರಿಕ  21.5%, ಚೀನಾ 16.4% ಇಂಗಾಲದ ಡೈಆಕ್ಸೈಡ್‌ನ್ನು ಹೊರಸೂಸಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಏಳು ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರ

ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಸುಮಾರು 1,300ಕ್ಕೂ ಹೆಚ್ಚು ನಾಗರಿಕರು ಸಾವನ್ನಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಏಳು ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್‌ವಾ ಹಾಗೂ ಸಿಂಧ್ ಪ್ರಾಂತ್ಯಗಳು ಮುಳುಗಡೆಯಾಗಿವೆ. ಸಿಂಧ್‌ನಲ್ಲಿ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ. ನಂತರ ಖೈಬರ್ ಪಖ್ತುನ್ಖ್‌ವಾ (138) ಹಾಗೂ ಬಲೂಚಿಸ್ತಾನ್ (125) ಹೆಚ್ಚಿನ ಸಾವು ಸಂಭವಿಸಿದೆ ಎಂದು 'ಜಿಯೋ ನ್ಯೂಸ್' ವರದಿ ಮಾಡಿದೆ.

ಪಾಕಿಸ್ತಾನವು ಮೂರು ದಶಕಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು ಹಿಮನದಿಗಳ ಕರಗುವಿಕೆಯಿಂದ ಪ್ರದೇಶದ ಮೂರನೇ ಒಂದು ಭಾಗ ಮುಳುಗಿದೆ. ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ಮನೆಗಳಿಗೆ ನೀರು ನುಗ್ಗಿದೆ ಎಂದು ಪಾಕ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app