ನೇಪಾಳದಲ್ಲಿ ಮತ್ತೆ ಭೂಕಂಪ | ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ

Earthquake again in Nepal It registered an intensity of 4.1 on the Richter scale
  • ಬಜೂರಾ ಜಿಲ್ಲೆಯ ಕಾಡಾ ಪ್ರದೇಶದಲ್ಲಿ ಭೂಕಂಪ ಕೇಂದ್ರ ಬಿಂದು ಪತ್ತೆ
  • ಬುಧವಾರ ಸಂಭವಿಸಿದ್ದ ಭೂಕಂಪದಲ್ಲಿ ಆರು ಮಂದಿ ಮೃತಪಟ್ಟಿದ್ದರು

ನೇಪಾಳದಲ್ಲಿ ಮತ್ತೆ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಸಾವು, ನೋವಿನ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಭೂಕಂಪ ಬೆಳಿಗ್ಗೆ 5.13ರ ವೇಳೆಗೆ ಸಂಭವಿಸಿದ್ದು, ಇದು ಹೊಸದಾಗಿ ಸಂಭವಿಸಿದ ಭೂಕಂಪವೇ ಹೊರತು ಬುಧವಾರದ ಭೂಕಂಪದ ಮರುಕಂಪನ ಆಗಿರಲಿಲ್ಲ ಎಂದು ರಾಷ್ಟ್ರೀಯ ಭೂಕಂಪ ಪರಿವೀಕ್ಷಣೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ. ಬಜೂರಾ ಜಿಲ್ಲೆಯ ಕಾಡಾ ಎಂಬ ಪ್ರದೇಶದಲ್ಲಿ ಭೂಕಂಪ ಕೇಂದ್ರಬಿಂದು ಪತ್ತೆಯಾಗಿದೆ.

Eedina App

ಬುಧವಾರ ದೋತಿ ಜಿಲ್ಲೆಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಆರು ಮಂದಿ ಮೃತಪಟ್ಟಿದ್ದರು ಮತ್ತು ಹತ್ತಾರು ಮನೆಗಳು ನಾಶವಾಗಿದ್ದವು. “ಫಾರ್ ವೆಸ್ಟ್‌ನ ಖಾಪ್ತದ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಭೂಕಂಪದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅಲ್ಲದೆ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡಿರುವ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ" ಎಂದು ಟ್ವೀಟ್‌ ಮಾಡಿದ್ದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಅಂಡಮಾನ್‌ ಮತ್ತು ನಿಕೋಬಾರ್ ನಲ್ಲಿ ಭೂಕಂಪ

ಏಪ್ರಿಲ್ 2015ರಲ್ಲಿ ನೇಪಾಳದಲ್ಲಿ ಉಂಟಾಗಿದ್ದ ಭೀಕರ ಭೂ ಕಂಪನದಲ್ಲಿ 7.8 ತೀವ್ರತೆ ದಾಖಲಾಗಿತ್ತು. ಆ ವೇಳೆ, ಅಂದಾಜು 9,000 ಜನರು ಸಾವನಪ್ಪಿದ್ದರು ಹಾಗೂ ಸುಮಾರು 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 8 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ಶಾಲಾ ಕಟ್ಟಡಗಳಿಗೆ ಹಾನಿಯಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app