ಆರ್ಥಿಕ ಹಿಂಜರಿತ ಭೀತಿ | ಬಡ್ಡಿದರ ಹೆಚ್ಚಿಸಿದ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌

  • ಹಣದುಬ್ಬರ ನಿಯಂತ್ರಣಕ್ಕೆ ಬರಲು ಸಮಯ ಹಿಡಿಯಲಿದೆ
  • ಬೈಡನ್ ಆಡಳಿತಕ್ಕೆ  ತಲೆನೋವಾಗಿ ಪರಿಣಮಿಸಿರುವ ಹಣದುಬ್ಬರ

ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ ಬಡ್ಡಿದರವನ್ನು ಹೆಚ್ಚಿಸಿದೆ. ಹಣದುಬ್ಬರವನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಏರಿಕೆ ಮಾಡಲಾಗುವುದು ಎಂದು ಪ್ರಕಟಿಸಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ ಮೂರನೇ ಬಾರಿ ಬಡ್ಡಿದರವನ್ನು 0.75ರಷ್ಟು ಹೆಚ್ಚಿಸಿದ್ದು, ಕಳೆದ 40 ವರ್ಷಗಳಲ್ಲೇ ದಾಖಲಾಗಿರುವ ಗರಿಷ್ಠ ಹಣದುಬ್ಬರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಹಣದುಬ್ಬರದಿಂದಾಗಿ ಅಮೆರಿಕದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಬಡ್ಡಿದರವನ್ನು ಏರಿಸುವ ಒತ್ತಡಕ್ಕೆ ಬ್ಯಾಂಕ್‌ ಸಿಲುಕಿದೆ.  

ಹಣದುಬ್ಬರ ನಿಯಂತ್ರಣಕ್ಕೆ ಬರಲು ಸಮಯ ಹಿಡಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಅಮೆರಿಕದಲ್ಲಿ ಉಂಟಾಗಿರುವ ಹಣದುಬ್ಬರ ಇನ್ನೂ ಕೊಂಚ ದಿನಗಳ ಕಾಲ ಉಳಿಯಲಿದೆ. ಆದಷ್ಟು ಬೇಗ ಹಣದುಬ್ಬರ ನಿವಾರಿಸುತ್ತೇವೆ. ಅಮೆರಿಕದ ನಾಗರಿಕರು ಮತ್ತು ಕಂಪನಿಗಳು ಯಾವುದೇ ಭಯ ಪಡಬೇಕಿಲ್ಲ ಎಂದು ಜೋ ಬೈಡನ್‌ ಭರವಸೆ ನೀಡಿದ್ದಾರೆ.

"ಆರ್ಥಿಕತೆಯಲ್ಲಿ ಹಣದುಬ್ಬರ ಎಲ್ಲ ದೇಶಗಳಲ್ಲೂ ಇರುತ್ತದೆ. ಅದನ್ನು ಪರಿಹರಿಸುವ ಮಾರ್ಗ ಕಂಡುಕೊಳ್ಳಬೇಕು. ಅಮೆರಿಕ ಇಂತಹ ಸವಾಲುಗಳನ್ನು ಈ ಮೊದಲು ಎದುರಿಸಿದೆ" ಎಂದು ಜೋ ಬೈಡನ್ ಹೇಳಿದ್ದಾರೆ.

 ಈ ಸುದ್ದಿ ಓದಿದ್ದೀರಾ? ಜಗತ್ತಿನ ಮೂರನೇ ಆರ್ಥಿಕತೆಯಾಗಲಿದೆ ಭಾರತ : ʼಜೊತೆಯಾಗಿ ಕೆಲಸ ಮಾಡೋಣʼ ಎಂದ ಇಂಗ್ಲೆಂಡ್‌

ಅಮೆರಿಕದಲ್ಲಿ ಕಳೆದ ಒಂದು ವರ್ಷದಿಂದ ಏರುತ್ತಿರುವ ವೆಚ್ಚಗಳು ಬೈಡನ್ ಆಡಳಿತಕ್ಕೆ ರಾಜಕೀಯ ತಲೆನೋವಾಗಿ ಪರಿಣಮಿಸಿದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲು ಹಲವಾರು ಕ್ರಮಗಳಲ್ಲಿ ಸರ್ಕಾರ ಪ್ರಯತ್ನಿಸಿದೆ. ಅಂಕಿ-ಅಂಶಗಳ ಪ್ರಕಾರ ಕೋವಿಡ್‌ನಿಂದ ಅಮೆರಿಕದಲ್ಲಿ ಹಣದುಬ್ಬರ ಉಂಟಾಗಿದೆ. ಉಕ್ರೇನ್‌ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಗೆ ತಟ್ಟಿದ ಬಿಸಿ ಅಮೆರಿಕದ ಮಾರುಕಟ್ಟೆಗೆ ಬಲವಾಗಿ ತಟ್ಟಿದೆ ಎಂದು ಅಮೆರಿಕ ಅರ್ಥಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್