
- ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ
- ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ
ಶಾಲೆಯಲ್ಲಿ ಓದುತ್ತಿರುವ ವಿದ್ಯಾಥಿನಿಯರ ಶಿರವಸ್ತ್ರ(ಹೆಡ್ಸ್ಕಾರ್ಫ್) ಧರಿಸುವುದನ್ನು ನಿಷೇಧಿಸುವ ಮೂಲಕ ಫ್ರಾನ್ಸ್ ಅಂತಾರಾಷ್ಟ್ರೀಯ ಹಕ್ಕುಗಳ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯ ಖಂಡನೆ ವ್ಯಕ್ತಪಡಿಸಿದೆ.
2010ರಲ್ಲಿ ವೃತ್ತಿಪರ ತರಬೇತಿ ಕೋರ್ಸ್ಗೆ ಸೇರಬಯಸಿದ್ದ ಮಹಿಳೆ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗಿದ್ದರು. ಆದರೆ ಆ ವಿದ್ಯಾರ್ಥಿ ಶಿರವಸ್ತ್ರ ಧರಿಸಿದ್ದ ಕಾರಣ ಪ್ಯಾರಿಸ್ನ ಆಗ್ನೇಯ ಉಪನಗರದ ಲಾಂಗೆವಿನ್ ವಾಲನ್ ಹೈಸ್ಕೂಲ್ನ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದ್ದರು ಎಂದು ವರದಿಯಾಗಿದೆ.
ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತದ ಬಟ್ಟೆ ಧರಿಸುವುದಕ್ಕೆ ಯಾವುದೇ ಅವಕಾಶವಿಲ್ಲ. ನಾವು ಅದನ್ನು ನಿಷೇಧಿಸಿದ್ದೇವೆ ಎಂದು ವಾಲನ್ ಹೈಸ್ಕೂಲ್ನ ಪ್ರಾಂಶುಪಾಲರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಸಿಯಾನ್ | ಮ್ಯಾನ್ಮಾರ್ ಬಿಕ್ಕಟ್ಟನ್ನು ಪರಿಹರಿಸಲು 'ಸೂಪರ್ ಮ್ಯಾನ್'ನಿಂದಲೂ ಸಾಧ್ಯವಿಲ್ಲ
ಶಾಲೆಯ ಈ ನಡೆಯನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಫ್ರಾನ್ಸ್ನ ಕೆಲವು ಅಲ್ಪಸಂಖ್ಯಾತ ಗುಂಪುಗಳು ಅರ್ಜಿ ಸಲ್ಲಿಸಿದ್ದವು. ಇದು ಗಂಭೀರವಾದ ವಿಚಾರ, ಶಾಲೆಯ ಈ ಕ್ರಮ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆ ತೀರ್ಪು ನೀಡಿದೆ. ತಲೆಗೆ ಸ್ಕಾರ್ಫ್ ಧರಿಸಿ ಶಿಕ್ಷಣ ಮುಂದುವರಿಸುವುದನ್ನು ನಿರ್ಬಂಧಿಸುವ ಮೂಲಕ ಆ ಬಾಲಕಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ ಎಂದು ತೀರ್ಪಿನಲ್ಲಿ ವಿಶ್ವಸಂಸ್ಥೆ ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ಫ್ರಾನ್ಸ್ನಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಇನ್ನೂ ಮುಂತಾದ ಅಚರಣೆಗಳನ್ನು ಫ್ರಾನ್ಸ್ ಸರ್ಕಾರ ರದ್ದುಗೊಳಿಸಿದೆ.