
- ಹತ್ತು ದಿನಗಳಲ್ಲಿ ಶಿರಚ್ಛೇದ ಶಿಕ್ಷೆಗೆ ಬಲಿಯಾದ 12 ಮಂದಿ
- ವಿವರ ಬಹಿರಂಗಪಡಿಸಿದ ಮಾನವ ಹಕ್ಕುಗಳ ಸಂಘಟನೆ
ಮಾದಕದ್ರವ್ಯ (ಡ್ರಗ್ಸ್) ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ 12 ಮಂದಿಗೆ ಕಳೆದ 10 ದಿನದಲ್ಲಿ ಸೌದಿ ಅರೆಬಿಯ ಸರ್ಕಾರ ಮರಣದಂಡನೆ ವಿಧಿಸಿದೆ.
ಮಾನವ ಹಕ್ಕುಗಳ ಸಂಘಟನೆಯೊಂದು ಈ ವಿಚಾರ ಬಹಿರಂಗಪಡಿಸಿದ್ದು, ಬಹುತೇಕ ಮಂದಿಯನ್ನು ಶಿರಚ್ಛೇದ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಮೂವರು ಪಾಕಿಸ್ತಾನಿಯರು, ಸಿರಿಯಾದ ನಾಲ್ವರು, ಜೋರ್ಡಾನ್ನ ಇಬ್ಬರು ಹಾಗೂ ಸೌದಿಯ ಮೂವರು ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕತಾರ್ ವಿಶ್ವಕಪ್ | ಐತಿಹಾಸಿಕ ಗೆಲುವಿನ ಸಂಭ್ರಮಕ್ಕೆ ದೇಶಕ್ಕೇ ರಜೆ ಘೋಷಿಸಿದ ಸೌದಿ ದೊರೆ!
ಇದೀಗ, ಈ ವರ್ಷ ಸೌದಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರ ಒಟ್ಟು ಸಂಖ್ಯೆ 132ಕ್ಕೇರಿದಂತಾಗಿದೆ. ಈ ಸಂಖ್ಯೆ ಹಿಂದಿನ ಎರಡೂ (2020 ಮತ್ತು 2021) ವರ್ಷಗಳಲ್ಲಿ ಒಟ್ಟಾರೆ ಮರಣದಂಡನೆಗೆ ಗುರಿಯಾದವರಿಗಿಂತಲೂ ಹೆಚ್ಚಾಗಿದೆ.
2020 ಮತ್ತು 2021ರ ಅವಧಿಗೆ ಹೋಲಿಸಿದರೆ, ಈ ವರ್ಷ ಅತಿಹೆಚ್ಚು ಮಂದಿಗೆ ಸೌದಿ ಸರ್ಕಾರ ಗಲ್ಲುಶಿಕ್ಷೆ ವಿಧಿಸಿದೆ. 2018ರಲ್ಲಿ ಗಲ್ಲು ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಮತ್ತು ಕೊಲೆಗಾರರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸುವುದಾಗಿ ಸೌದಿ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದರು. ಆದರೆ ಇದೀಗ ಮತ್ತೆ ಶಿಕ್ಷೆ ಪ್ರಮಾಣದಲ್ಲಿ ಏರಿಕೆಯಾಗಿದೆ.