ಇರಾನ್‌ ಹಿಜಾಬ್‌ ಅಂದೋಲನ | ಕೂದಲು ಕತ್ತರಿಸಿಕೊಂಡ ಮಹಿಳೆಗೆ ಹಾರ್ನ್‌ ಬೆಂಬಲ ಸೂಚಿಸಿದ ನಾಗರಿಕರು

  • ವಾಹನಗಳ ಹಾರ್ನ್‌ ಮಾಡಿ ಒಗಟ್ಟು ಪ್ರದರ್ಶಿಸಿದ ನಾಗರಿಕರು
  • 7 ವರ್ಷ ಮೀರಿದ ಮಹಿಳೆಯರಿಗೆ ಹಿಜಾಬ್‌ ಕಡ್ಡಾಯ ಆದೇಶ

ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. 22 ವರ್ಷದ ಮಹ್ಸಾ ಅಮಿನಿ ಹಿಜಾಬ್ ತೊಡದೆ ಬಹಿರಂಗವಾಗಿ ಕಾಣಿಸಿಕೊಂಡಾಗ ನೈತಿಕ ಪೊಲೀಸ್ ಪಡೆಗಳ ಬಂಧನಕ್ಕೆ ಒಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಇರಾನ್ ಮಹಿಳೆಯರು ಹುದುಗಿಟ್ಟಿದ್ದ ಆಕ್ರೋಶ- ದುಗುಡಗಳನ್ನು ಬಹಿರಂಗವಾಗಿ ಪ್ರಕಟಿಸುತ್ತಿದ್ದಾರೆ. 

ಇತ್ತೀಚಿನ ಬೆಳವಣಿಗೆವಾಗಿ ಹಿಜಾಬ್‌ ವಿರೋಧಿಸಿ ಕೊದಲು ಕತ್ತರಿಸಿಕೊಂಡಿದ್ದ ಮಹಿಳೆ ರಸ್ತೆಯಲ್ಲಿ ನಡೆದು ಹೋಗುವಾಗ ಬೆಂಬಲವಾಗಿ ಟ್ರಾಫಿಕ್‌ನಲ್ಲಿ ನಿಂತಿರುವ ಅನೇಕ ಜನರು ತಮ್ಮ ವಾಹನಗಳ ಮೂಲಕ ಹಾರ್ನ್‌ ಮಾಡಿ ಒಗಟ್ಟು ಪ್ರದರ್ಶಿಸಿದ್ದಾರೆ. 

ಹಿಜಾಬ್‌ನಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ, ಅದನ್ನು ತೊಡುವುದಿಲ್ಲ ಎಂದು ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ. ಹೋರಾಟದ ಭಾಗವಾಗಿ ಹೆಣ್ಣು ಮಕ್ಕಳು ತಮ್ಮ ಹಿಜಾಬ್ ಸುಟ್ಟುಹಾಕುತ್ತಿರುವ ಮತ್ತು ಕೂದಲು ಕತ್ತರಿಸಿಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ಹಿಜಾಬ್ ವಿರುದ್ಧ ಪ್ರತಿಭಟಿಸಿ ಪೊಲೀಸರ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಇರಾನಿ ಮಹಿಳೆಯರು

ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಉದ್ದವಾದ ಕೂದಲನ್ನು ಮತ್ತು ಮುಖವನ್ನು ಮುಚ್ಚುವಂತಹ ನಿರ್ಬಂಧಗಳಿವೆ.

ಜುಲೈ 5ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಿಜಾಬ್ ಕಾನೂನನ್ನು ಜಾರಿಗೊಳಿಸಲು ಆದೇಶಿಸಿದ ನಂತರ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬ ನಿರ್ಬಂಧಗಳಿವೆ. ಉಡುಪು ಸಂಹಿತೆ ಅನುಸರಿಸದೆ ಇದ್ದಲ್ಲಿ ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್